ಬೆಂಗಳೂರು: ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಹಿಳಾ ಉಪನ್ಯಾಸಕಿಯರಿಗೆ ಸೀರೆ ಕಡ್ಡಾಯ ಮಾಡಿ ಹೊರಡಿಸಲಾಗಿದ್ದ ಸುತ್ತೋಲೆಯನ್ನು ಶಿಕ್ಷಣ ಇಲಾಖೆ ಹಿಂದಕ್ಕೆ ಪಡೆದಿದೆ.
ಜುಲೈ 4 ರಂದು ಕಚೇರಿಯಿಂದ ಹೊರಡಿಸಲಾದ ಸಮಸಂಖ್ಯೆಯ ಸುತ್ತೋಲೆಯನ್ನು ಈ ಕೂಡಲೇ ವಾಪಸ್ ಪಡೆಯಲಾಗಿದೆ ಎಂದು ಮೈಸೂರು ವಿಭಾಗದ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
Advertisement
ಮೊಬೈಲ್ ಬಳಕೆಯನ್ನು ನಿಷೇಧಿಸಿದ್ದು ಸರಿ. ಆದರೆ ನಾವು ಧರಿಸುವ ಡ್ರೆಸ್ ಮೇಲೆ ನಿಯಮ ಹೇಳುವುದು ಎಷ್ಟು ಸರಿ? ಎಂದು ಮಹಿಳಾ ಉಪನ್ಯಾಸಕಿಯರು ಪ್ರಶ್ನಿಸಿ ವಿರೋಧಿಸಿದ ಕಾರಣ ಈ ಸುತ್ತೋಲೆಯನ್ನು ವಾಪಸ್ ಪಡೆಯಲಾಗಿದೆ.
Advertisement
ಈ ಹಿಂದಿನ ಸುತ್ತೋಲೆಯಲ್ಲಿ ಏನಿತ್ತು?: ಎಲ್ಲಾ ಖಾಸಗಿ ಅನುದಾನಿತ ಕಾಲೇಜು, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಉಪನ್ಯಾಸಕಿಯರು ಸೀರೆ ಧರಿಸಿ ಬರುವುದು ಕಡ್ಡಾಯ ಎಂದು ಮೈಸೂರು ವಿಭಾಗದ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದರು.
Advertisement
ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರು ತರಗತಿಗಳಲ್ಲಿ ಪಾಠ ಮಾಡುವಾಗ ಮೊಬೈಲ್ ನಲ್ಲಿ ಮಾತನಾಡುತ್ತಾರೆ. ವಾಟ್ಸಪ್ ಮತ್ತು ಫೇಸ್ ಬುಕ್ ನೋಡಿ ಕಾಲ ಕಳೆಯುತ್ತಾರೆ. ಮಹಿಳಾ ಉಪನ್ಯಾಸಕಿಯರು ಚೂಡಿದಾರ್ ಧರಿಸಿ ಕಾಲೇಜಿಗೆ ಬರುತ್ತಾರೆ ಎಂದು ಕೋಲಾರದ ಆರ್. ಸತೀಶ್ ಕುಮಾರ್ 2015ರ ಜುಲೈನಲ್ಲಿ ಉನ್ನತ ಶಿಕ್ಷಣ ಸಚಿವರಿಗೆ ದೂರು ನೀಡಿದ್ದರು.
Advertisement
ಈ ದೂರಿನ ನಂತರ ಕಾಲೇಜಿನ ಆವರಣದಲ್ಲಿ ಈಗಾಗಲೇ ಮೊಬೈಲ್ ಬಳಸುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಕಾಲೇಜುಗಳಲ್ಲಿ ಉಪನ್ಯಾಸಕರುಗಳು ತರಗತಿಗಳಲ್ಲಿ ಮೊಬೈಲ್ ಬಳಸುವುದನ್ನು ತಡೆಗಟ್ಟುವಂತೆ ಹಾಗೂ ಮಹಿಳಾ ಉಪನ್ಯಾಸಕಿಯರು ಸೀರೆಯನ್ನು ಧರಿಸಿ ಕಾಲೇಜಿಗೆ ಬರುವಂತೆ ಅಗತ್ಯ ಕ್ರಮ ತಗೆದುಕೊಳ್ಳುವಂತೆ ತಿಳಿಸಿ ತೆಗೆದುಕೊಂಡ ಕ್ರಮದ ಬಗ್ಗೆ ವರದಿಯನ್ನು ಕಳುಹಿಸಿಕೊಡಬೇಕು. ಮೊಬೈಲ್ ಫೋನ್ ಜೊತೆಗೆ ಡ್ರೆಸ್ ಕೋಡ್ ನಿಯಮವು ಸಹ ಜಾರಿಗೆ ತರಲಾಗಿದೆ ಎನ್ನುವ ಅಂಶ ಸುತ್ತೋಲೆಯಲ್ಲಿತ್ತು.