ಮಂಡ್ಯ: ಅತ್ತ ಬೆಂಗಳೂರಿನಲ್ಲಿ ಜೀವಜಲಕ್ಕೆ ಹಾಹಾಕಾರ, ಇತ್ತ ಕಾವೇರಿ ಒಡಲಿಗೆ ಪ್ರಭಾವಿಗಳಿಂದ ಕನ್ನ ಹಾಕಲಾಗುತ್ತಿದೆ. ಅಂತೆಯೇ ಅಕ್ರಮವಾಗಿ ಕೆಆರ್ ಎಸ್ ಡ್ಯಾಂಗೆ (KRS Dam Mandya) ಮೋಟಾರ್ ಅಳವಡಿಕೆ ಮಾಡಿರುವ ಸುದ್ದಿಯನ್ನು ಇಂದು ಬೆಳಗ್ಗೆ ಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು. ಈ ಬೆನ್ನಲ್ಲೇ ಇಂಪ್ಯಾಕ್ಟ್ ಆಗಿದೆ.
Advertisement
ಪಬ್ಲಿಕ್ ಟಿವಿ ವರದಿ ಮಾಡಿದ ಬೆನ್ನಲ್ಲೇ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಾವೇರಿ ನೀರಾವರಿ ನಿಗಮದ ಎಇಇ ಕಿಶೋರ್ ಸ್ಥಳಕ್ಕೆ ಭೇಟಿ ನೀಡಿ ನೀಡಿ ಕಾವೇರಿ ನೀರಿಗೆ ಹಾಕಿದ್ದ ಮೋಟಾರ್‍ಗೆ ಹಾಕಲಾಗಿದ್ದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಬಳಿಕ ಕೆಇಬಿ ಅಧಿಕಾರಿಗಳು ವಿದ್ಯುತ್ ವೈಯರ್ ವಶಪಡಿಸಿಕೊಂಡರು. ನೀರಿನಲ್ಲಿದ್ದ ಮೋಟಾರ್ ಅನ್ನು ಹೊರ ತೆಗೆದು ಪೈಪ್‍ಗಳನ್ನು ಕೂಡ ವಶಕ್ಕೆ ಪಡೆದುಕೊಂಡರು. ಇದನ್ನೂ ಓದಿ: ಕಾಂಗ್ರೆಸ್ ಸಮಾವೇಶಕ್ಕೆ KSRTC ಬಸ್ ನಿಯೋಜನೆ – ಪರೀಕ್ಷೆಗೆ ತೆರಳಲು ಪಿಯು ವಿದ್ಯಾರ್ಥಿಗಳ ಪರದಾಟ
Advertisement
Advertisement
ಏನಿದು ಪ್ರಕರಣ..?: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಡ್ಯಾಂ ಹಿನ್ನೀರಿಗೆ ಹೊಂದಿಕೊಂಡಂತೆ ಎರಡು ಫಾರ್ಮ್ ಹೌಸ್‍ಗಳಿವೆ. ಈ ಫಾರ್ಮ್ ಹೌಸ್‍ಗೆ ಅಕ್ರಮವಾಗಿ ಮೋಟಾರ್ ಅಳವಡಿಸಿ ನೀರು ಸರಬರಾಜು ಮಾಡಲಾಗುತ್ತಿತ್ತು. ಸುಮಾರು 200 ಮೀಟರ್ ಪೈಪ್ ಅಳವಡಿಸಿಕೊಂಡು ಡ್ಯಾಂ ಭದ್ರತಾ ಪಡೆ ಸಿಬ್ಬಂದಿ ಕಣ್ತಪ್ಪಿಸಿ ಅಕ್ರಮ ಎಸಗಲಾಗುತ್ತಿತ್ತು. ಕುಡಿಯುವ ನೀರಿಗೆ ಸಮಸ್ಯೆ ಇದ್ದರೂ ಕದ್ದು ಫಾರ್ಮ್ ಹೌಸ್ ಗೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಈ ಮೂಲಕ ಪ್ರಭಾವಿಗಳು ಭತ್ತ ಸೇರಿದಂತೆ ವಿವಿಧ ಬೆಳೆ ಬೆಳೆಯುತ್ತಿದ್ದರು. ಈ ಬಗ್ಗೆ ಸ್ಥಳಿಯರು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
Advertisement
ಫಾರ್ಮ್ ಹೌಸ್ ಮಾಲೀಕರ ಪ್ರಭಾವಕ್ಕೆ ಮಣಿದು ಕಣ್ಮುಚ್ಚಿ ಕುಳಿತದ್ದಾರೆಂದು ಸ್ಥಳೀಯರು ಪಬ್ಲಿಕ್ ಟಿವಿ ಮುಂದೆ ಆರೋಪ ಮಾಡಿದ್ದಾರೆ. ಅಕ್ರಮವಾಗಿ ಡ್ಯಾಂಗೆ ಮೋಟಾರ್ ಅಳವಡಿಸಿರುವವರ ವಿರುದ್ಧ ತತಕ್ಷಣ ಕ್ರಮ ಕೈಗೊಳ್ಳಬೇಕು, ಅಲ್ಲದೇ ಈ ಸಂಬಂಧ ಪ್ರಕರಣ ದಾಖಲಿಸುವಂತೆ ಸಾರ್ವಜನಿಕರ ಒತ್ತಾಯ ಮಾಡಿದ್ದಾರೆ. ಈ ಸುದ್ದಿಯನ್ನು ಪಬ್ಲಿಕ್ ಟಿವಿ ಇಂದು ಬೆಳಗ್ಗೆ ಬಿತ್ತರಿಸಿತ್ತು.