ಹೆಚ್.ಆರ್. ರಂಗನಾಥ್ ಜೊತೆ ಮಾತುಕತೆ- ‘ಕೋಟಿ’ ಸೀಕ್ರೆಟ್ ಬಿಚ್ಚಿಟ್ಟ ಡಾಲಿ

FotoJet 2 3

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕೋಟಿ’ (Kotee Film) ಸಿನಿಮಾ ಅಬ್ಬರ ಇಂದಿನಿಂದ ಶುರುವಾಗಿದೆ. ‘ಕೋಟಿ’ ಎಂಬ ಮಿಡಲ್ ಕ್ಲಾಸ್ ಹುಡುಗ ನಿಷ್ಠೆಯಿಂದ ಕೋಟಿ ರೂಪಾಯಿ ಗಳಿಸಬೇಕು ಎಂಬ ಗುರಿ ಇಟ್ಟುಕೊಂಡಿರುತ್ತಾನೆ. ಆ ಕನಸಿನ ಹಾದಿಯಲ್ಲಿ ಬರುವ ಸವಾಲುಗಳು ಹೇಗಿರುತ್ತದೆ ಎಂಬುದನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಆದರೆ ಚಿತ್ರದ ಇಂಟ್ರಸ್ಟಿಂಗ್ ವಿಚಾರಗಳನ್ನು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ (HR Ranganath) ಜೊತೆ ನಟರಾಕ್ಷಸ ಡಾಲಿ ಹಂಚಿಕೊಂಡಿದ್ದಾರೆ. ‘ಕೋಟಿ’ ಕನಸುಗಳನ್ನು ಡಾಲಿ ಬಿಚ್ಚಿಟ್ಟಿದ್ದಾರೆ.

daali dhananjay 1 1

‘ಕೋಟಿ’ ಸಿನಿಮಾ ಒಪ್ಪಿಕೊಳ್ಳೋಕೆ ಕಾರಣ ಏನು ಎಂಬುದನ್ನು ಡಾಲಿ ಮುಕ್ತವಾಗಿ ಮಾತನಾಡಿದ್ದಾರೆ. ಪರಮ್ ಅವರು ನನಗೆ ‘ಬಡವ ರಾಸ್ಕಲ್’ ಸಿನಿಮಾ ಸಮಯದಲ್ಲಿ ಪರಿಚಯ ಆಗಿದ್ದು, ತುಂಬಾ ಹತ್ತಿರದಿಂದ ನೋಡಿದ್ದೇನೆ. ನಮ್ಮೀಬ್ಬರಿಗೂ ಒಳ್ಳೆಯ ಕನೆಕ್ಷನ್ ಇತ್ತು. ಅವರು ಕಥೆ ಹೇಳಿದಾಗ ನನಗೆ ತುಂಬಾ ಕ್ಯೂರಿಯಾಸಿಟಿ ಇತ್ತು. ಇವರು ಕಿರುತೆರೆಯಲ್ಲಿ ಕೆಲಸ ಮಾಡಿದವರು. ಸಿನಿಮಾಗೆ ಹೇಗೆ ಬರೆದಿರುತ್ತಾರೆ ಏನೋ ಅಂತ ಭಾವಿಸಿದ್ದೆ, ಆದರೆ ಪರಮ್ ಕಥೆ ಹೇಳಿದಾಗ ಇಲ್ಲ ಅನ್ನೋಕೆ ಮನಸ್ಸು ಬರಲಿಲ್ಲ. ಈ ಕಥೆ ನನಗೆ ಕಾಡ್ತಾ ಇತ್ತು ಎಂದು ಡಾಲಿ ಮಾತನಾಡಿದರು. ಇದನ್ನೂ ಓದಿ:ಇಂದಿನಿಂದ ಡಾಲಿ ನಟನೆಯ ‘ಕೋಟಿ’ ಸಿನಿಮಾ ಅಬ್ಬರ

daali dhananjay

ನೀವು ಫ್ರೆಂಡ್‌ಶಿಪ್‌ಗಾಗಿ ಸಿನಿಮಾ ಓಕೆ ಹೇಳಬೇಡಿ. ಚೆನ್ನಾಗಿಲ್ಲ ಅಂದರೆ ಚೆನ್ನಾಗಿಲ್ಲ ಅಂತಲೇ ಹೇಳಿ ಎಂದಿದ್ದರು. ಅವರು ಸಖತ್ ಆಗಿಯೇ ಕಥೆ ಬರೆದಿದ್ದರು. ಒಂದು ಚಾನಲ್ ಕಟ್ಟಿ ಅಷ್ಟು ಸಕ್ಸಸ್ ಕಂಡಿರೋರು. ಒಂದು ಸಿನಿಮಾಗೆ ಕಥೆ ಕಟ್ಟುವ ತಾಕತ್ತು ಇದೆ ಎನ್ನುವ ನಂಬಿಕೆ ನನಗಿತ್ತು ಹಾಗಾಗಿ ಕೋಟಿ ಸಿನಿಮಾ ಮಾಡಲು ಒಪ್ಪಿಕೊಂಡೆ ಎಂದು ಡಾಲಿ ಮಾತನಾಡಿದರು. ಕೋಟಿ ಸಿನಿಮಾ ನಿಜಕ್ಕೂ ವರ್ಕೌಟ್ ಆಗಿದೆ. ಜನರಿಗೆ ಇಷ್ಟವಾಗುತ್ತೆ ಎನ್ನುವ ಭರವಸೆ ಇದೆ ಎಂದು ಮಾತನಾಡಿದರು.

daali dhananjay 1

ಅಂದಹಾಗೆ, ‘ಕೋಟಿ’ (Kotee Film) ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ (Daali Dhananjay) ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ (Moksha Kushal) ನಟಿಸಿದ್ದಾರೆ. ಖಳನಾಯಕನಾಗಿ ರಮೇಶ್ ಇಂದಿರಾ ಅಬ್ಬರಿಸಿದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜೊತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

‘ಕೋಟಿ’ ಚಿತ್ರದಲ್ಲಿ ಐದು ಹಾಡುಗಳಿದ್ದು, ವಾಸುಕಿ ವೈಭವ್‌ಮ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು’ 777 ಚಾರ್ಲಿ’ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ.