ಕಾರವಾರ: ಹೆತ್ತವರು ಓದದೇ ಇದ್ರೂ ಮಕ್ಕಳನ್ನು ಓದಿಸುವ ಆಸೆ. ಎಷ್ಟೇ ಕಷ್ಟ ಬಂದ್ರೂ ಓದಿ ಸಾಧಿಸಿದ ಛಲಗಾತಿ ಪುಷ್ಪ. ಈಕೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರ ಗ್ರಾಮ ಪಂಚಾಯ್ತಿಯ ಶಿರೂರು ಗ್ರಾಮದ ಬಡ ಪ್ರತಿಭಾವಂತ ವಿದ್ಯಾರ್ಥಿನಿ. ತಂದೆ ಮಂಜುನಾಥ್ ನಾಯ್ಕ್, ತಾಯಿ ಸರಸ್ವತಿ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು.
ಓದಿನ ಪ್ರಾಮುಖ್ಯತೆ ಅರಿತಿರೋ ತಂದೆ-ತಾಯಿ ಮೀನು ಮಾರಿ, ಕೂಲಿ ಕೆಲಸ ಮಾಡಿ ಮಕ್ಕಳಿಗೆ ಶಿಕ್ಷಣವನ್ನು ನೀಡಿದ್ದಾರೆ. ಅದರ ಫಲವಾಗಿ ಬಡ ವಿದ್ಯಾರ್ಥಿನಿ ಪುಷ್ಪ ಎಸ್‍ಎಸ್‍ಎಲ್‍ಸಿಯಲ್ಲಿ 586 ಅಂಕ ಪಡೆದು, ಪಿಯುಸಿಯಲ್ಲಿ 534 ಅಂಕ ಗಳಿಸಿ ಹೆತ್ತವರಿಗೆ ಕೀರ್ತಿ ತಂದಿದ್ದಾಳೆ. ಮುಂದೆ ಎಂಜಿನಿಯರಿಂಗ್ ಓದುವ ಕನಸು ಕಂಡಿರುವ ಪುಷ್ಪ, ಸಿಇಟಿ ಮೂಲಕ ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ಎಂಜಿನಿಯರಿಂಗ್‍ಗೆ ಪ್ರವೇಶ ಪಡೆದುಕೊಂಡಿದ್ದಾಳೆ. ಪುಷ್ಪಾ ಪೋಷಕರು ಕಷ್ಟಪಟ್ಟು ಕಾಲೇಜು ಶುಲ್ಕ ಪಾವತಿಸಿದ್ದಾರೆ. ಆದರೆ ಪುಷ್ಪಾಳಿಗೆ ಉಳಿದುಕೊಳ್ಳುವ ಹಾಸ್ಟೆಲ್ ಶುಲ್ಕಕ್ಕೆ ನೆರವು ಬೇಕಿದೆ.
ಕಾಲೇಜಿಗೆ ಸೇರಲು ಶುಲ್ಕ ಪಾವತಿ ಮಾಡಬೇಕಾಗಿದ್ದು, ಈ ಬಡ ಕುಟುಂಬಕ್ಕೆ ಶುಲ್ಕ ಪಾವತಿಸಲು ಅಸಾಧ್ಯವಾಗಿದೆ. ಆದರೆ ಪ್ರತಿಭಾವಂತೆ ವಿದ್ಯಾರ್ಥಿನಿ ಪುಷ್ಪ ಎಜುಕೇಷನ್ ಲೋನ್ ಮಾಡಿಯಾದರೂ ಓದುವೆನೆಂಬ ಛಲ ಹೊಂದಿದ್ದಾಳೆ. ಆದರೆ ಎಜುಕೇಷನ್ ಲೋನ್ ಪಡೆಯಲು ಮೊದಲ ಹಂತದ 50 ಸಾವಿರ ರೂಪಾಯಿಗಳ ಶುಲ್ಕವನ್ನು ಪಾವತಿ ಮಾಡಬೇಕಾಗಿದ್ದು. ಹಣವಿಲ್ಲದೇ ಈ ಬಡ ಕುಟುಂಬ ದಿಕ್ಕು ದೋಚದೇ ಕಂಗಾಲಾಗಿದೆ.
ಎಂಜಿನಿಯರಿಂಗ್ ಮಾಡಿ ನಮ್ಮಂತೆ ಹಳ್ಳಿಯಲ್ಲಿ ಬಡತನದಲ್ಲಿದ್ದು, ಓದಬೇಕೆನ್ನುವವರಿಗೆ ಸಹಾಯ ಮಾಡಬೇಕು. ಸಮಾಜಕ್ಕೆ ನನ್ನದೇ ಆದ ಕೊಡುಗೆ ನೀಡಬೇಕೆಂಬ ಮಹಾದಾಸೆಯನ್ನು ಹೊಂದಿರುವ ಪುಷ್ಪಳ ಕನಸಿಗೆ ನೆರವು ಬೇಕಿದೆ. ಮಗಳ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಹಾಯ ಮಾಡಿ ಎಂದು ತಂದೆ-ತಾಯಿ ಬೆಳಕು ಕಾರ್ಯಕ್ರಮದ ಮೂಲಕ ಕೇಳಿಕೊಳ್ಳುತ್ತಿದ್ದಾರೆ.
https://www.youtube.com/watch?v=8AUwAZJEOVs