ಮಂಡ್ಯ: ನಗರದ ಕಾಳಿಕಾಂಭ ದೇವಾಲಯದ ಬಳಿಯಿರುವ ಡವರಿ ಕಾಲೋನಿಯ ನಿವಾಸಿ ತುಳಸಿ ಅವರ 5 ವರ್ಷದ ಪುತ್ರಿ ಆರತಿ. ಕಣ್ಣು ಕಳೆದುಕೊಂಡಿರುವ ಆರತಿ ತಾಯಿಯ ಆಸರೆ ಇಲ್ಲದೇ ಒಂದು ಹೆಜ್ಜೆಯೂ ಇಡುವಂತಿಲ್ಲ.
ಮೂರು ತಿಂಗಳ ಹಿಂದೆ ಆಟವಾಡುವಾಗ ಬಾಲಕಿ ಆರತಿ, ಎಡಗಣ್ಣಿಗೆ ಕಡ್ಡಿ ತಗಲಿದ ಪರಿಣಾಮ ಸಂಪೂರ್ಣ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾಳೆ. ಆರತಿ ತಂದೆ ಮಾರುತಿ ತೀರಿ ಹೋಗಿದ್ದಾರೆ. ಹಾಗಾಗಿ ಮಗಳ ಚಿಕಿತ್ಸಾ ವೆಚ್ಚವೆಲ್ಲ ತುಳಸಿಯವರ ಹೆಗಲ ಮೇಲಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆಯಾದ್ರೂ ಪ್ರಯೋಜನವಾಗಿಲ್ಲ. ಆದರೆ ಕಣ್ಣಿನ ಆಪರೇಷನ್ ಮಾಡಿಸಿದರೆ ದೃಷ್ಟಿ ಬರಬಹುದೆಂದು ವೈದ್ಯರು ಭರವಸೆ ನೀಡಿದ್ದಾರೆ.
Advertisement
Advertisement
ಗಂಡು ದಿಕ್ಕು ಇಲ್ಲದ ಈ ಕುಟುಂಬಕ್ಕೆ ತಾಯಿಯೇ ಆಸರೆಯಾಗಿದ್ದು, ಮಗಳನ್ನು ಸಾಕಲು ಮದುವೆ ಸಮಾರಂಭಗಳಲ್ಲಿ ಎಲೆ ಎತ್ತುವ ಕೆಲಸ ಮಾಡಿ ಮಗಳನ್ನ ಸಾಕುತ್ತಿದ್ದಾರೆ. ಕೂಡಿಟ್ಟ ಹಣದಲ್ಲಿ ಮಗಳ ಕಣ್ಣಿಗೆ ಚಿಕಿತ್ಸೆಗೆ ಕೊಡಿಸಿದ್ದಾರೆ. ಆದ್ರೆ ಇದೀಗ ಆಪರೇಷನ್‍ಗೆ 80 ಸಾವಿರದಷ್ಟು ಹಣ ಹೊಂದಿಸಲಾಗದೇ ಕಂಗಲಾಗಿದ್ದಾರೆ.
Advertisement
ಮಗಳ ದೃಷ್ಟಿ ಸರಿಹೋಗಲು ಆಪರೇಷನ್ ಅವಶ್ಯಕತೆ ಇದ್ದೂ, ಯಾರಾದ್ರೂ ದಾನಿಗಳು ಆಪರೇಷನ್‍ಗೆ ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಿಂದ ಸಹಾಯ ಬಯಸುತ್ತಿದ್ದಾರೆ.
Advertisement
https://www.youtube.com/watch?v=ZjDrDsAIXWk