ಕೊಪ್ಪಳ: ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಅಂಜನಾದ್ರಿ ಬೆಟ್ಟದ (Anjanadri Betta) ನೆರಳಿನಲ್ಲೇ ಇದ್ದ ಗ್ರಾಮವದು. ಆದರೂ, ಸಾರಿಗೆ ಸೌಲಭ್ಯದ ಕೊರತೆಯಿಂದ ಗ್ರಾಮದ ನೂರಾರು ವಿದ್ಯಾರ್ಥಿಗಳು ಹೈಸ್ಕೂಲ್ ಶಿಕ್ಷಣಕ್ಕೂ 5 ಕಿ.ಮೀ ನಡೆಯಬೇಕಿತ್ತು. ಸಾರಿಗೆ ಸೌಲಭ್ಯದ ಕೊರತೆಯಿಂದ ಹತ್ತಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಇದೀಗ ಈ ವಿದ್ಯಾರ್ಥಿಗಳಿಗೆ ಆಶಾಕಿರಣ ಮೂಡಿದ್ದು, ಶಾಸಕ ಜನಾರ್ದನ ರೆಡ್ಡಿ ಹೊಸ ಬಸ್ ಖರೀದಿಸಿ ಕೊಟ್ಟಿದ್ದಾರೆ. ಇದು `ಪಬ್ಲಿಕ್ ಟಿವಿ’ಯ ಬೆಳಕು (PUBLiC TV Belaku Impact) ಕಾರ್ಯಕ್ರಮದ ಬಿಗ್ ಇಂಪ್ಯಾಕ್ಟ್ ಆಗಿದೆ.
ಹೌದು. ಜಿಲ್ಲೆಯ ಗಂಗಾವತಿ ತಾಲೂಕಿನ ಜಂಗ್ಲಿ ಗ್ರಾಮದ ಜನರಿಗೆ ಸಾರಿಗೆ ಸೌಲಭ್ಯದ ಕೊರತೆಯಿತ್ತು. ಈ ಕುರಿತು `ಪಬ್ಲಿಕ್ ಟಿವಿ’ಯ ಬೆಳಕು ಕಾರ್ಯಕ್ರಮದಲ್ಲಿ ಪ್ರಸಾರವಾಗಿತ್ತು. ಈ ವರದಿಗೆ ಓಗೊಟ್ಟ ಶಾಸಕ ಜನಾರ್ದನ ರೆಡ್ಡಿ, ಹೊಸ ಬಸ್ ಖರೀದಿಸಿ ಕೊಟ್ಟಿದ್ದಾರೆ. ಶಾಸಕ ಜನಾರ್ದನ ರೆಡ್ಡಿಯವರ (Janardhana Reddy) ಪತ್ನಿ ಅರುಣಾ ಲಕ್ಷ್ಮೀ ಶಾಲಾ ವಾಹನವನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಿದ್ದು, ಹೊಸ ಶಾಲಾ ವಾಹನವನ್ನು ಖುಷಿಯಿಂದ ಪೂಜೆ ಮಾಡಿ ಗ್ರಾಮಸ್ಥರು ಬರಮಾಡಿಕೊಂಡಿದ್ದಾರೆ. ಜೊತೆಗೆ ಶಾಲಾ ವಾಹನವನ್ನು ಕಂಡು ಮಕ್ಕಳಲ್ಲಿ ಸಂತೋಷ ಮನೆಮಾಡಿದೆ.ಇದನ್ನೂ ಓದಿ:ದೇವೇಗೌಡರ ತುರ್ತು ಬುಲಾವ್ – ಚನ್ನಪಟ್ಟಣದಲ್ಲಿ ಅಖಾಡಕ್ಕಿಳಿಯುತ್ತಾರಾ ನಿಖಿಲ್ ಕುಮಾರಸ್ವಾಮಿ?
Advertisement
Advertisement
ಜಂಗ್ಲಿ ಮತ್ತು ರಂಗಾಪುರ ಗ್ರಾಮದ ವಿದ್ಯಾರ್ಥಿಗಳು ಈ ಕಾಲದಲ್ಲೂ ಹೈಸ್ಕೂಲ್ ಶಿಕ್ಷಣ ಪಡೆಯಲು ಬರೋಬ್ಬರಿ 5 ಕಿ.ಮೀ. ನಡೆದುಕೊಂಡು ಹೋಗಬೇಕಿದೆ. ಪ್ರತಿದಿನ ನೂರಾರು ವಿದ್ಯಾರ್ಥಿಗಳು ಬರೋಬ್ಬರಿ 5 ಕಿ.ಮೀ. ನಡೆದು ನಂತರ ಬಸ್ ಏರಿ ಶಾಲೆ ತಲುಪಬೇಕಿತ್ತು. ಇದರಿಂದ ಈ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಶಾಲೆ- ಕಾಲೇಜ್ ತಲುಪಲು ಸಾಧ್ಯವಾಗುತ್ತಿರಲಿಲ್ಲ. ನಿಗದಿತ ಸಮಯಕ್ಕೆ ಶಾಲೆಗೆ ತಲುಪದ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗುತ್ತಿದ್ದರು.
Advertisement
ಇಡೀ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಪ್ರಚಾರ ವಸ್ತುವಾಗಿರುವ ಅಂಜನಾದ್ರಿ ಸಮೀಪದಲ್ಲಿ ಇಂತಹ ಅವ್ಯವಸ್ಥೆಯಿರುವ ಕುರಿತು ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ವೀಕ್ಷಕರ ಮುಂದೆ ಇಟ್ಟಿತ್ತು. ವರದಿ ನೋಡಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ತಮ್ಮ ಸ್ವಂತ ಹಣದಲ್ಲಿ ಈ ಗ್ರಾಮಕ್ಕೆ ಶಾಲಾ ವಾಹನ ನೀಡಿದ್ದು, ಶಾಲಾ ವಾಹನವನ್ನು ಅರುಣಾ ಲಕ್ಷ್ಮೀ ಜಂಗ್ಲಿ, ರಂಗಪುರ, ಅಂಜನಳ್ಳಿ ಗ್ರಾಮಸ್ಥರಿಗೆ ಹಸ್ತಾಂತರಿಸಿದ್ದಾರೆ.
Advertisement
ಈ ಶಾಲಾ ವಾಹನದಿಂದ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಗಂಗಾವತಿ ಮತ್ತು ಆನೆಗೊಂದಿ ಗ್ರಾಮದ ಶಾಲೆ-ಕಾಲೇಜಿಗೆ ತೆರಳುವ ಪ್ರಾಥಮಿಕ ಶಾಲೆಯಿಂದ ಪದವಿ ವಿದ್ಯಾರ್ಥಿಗಳಿಗೆ ವಾಹನ ಅನುಕೂಲವಾಗಲಿದೆ. ಸಾರಿಗೆ ಸೌಲಭ್ಯ ಇಲ್ಲದ್ದರಿಂದ ಸಾಕಷ್ಟು ಪಾಲಕರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ಬಿಡಿಸಿದ್ದರು. ಇನ್ನು ಗರ್ಭಿಣಿಯರು, ಬಾಣಂತಿಯರು ಹಾಗೂ ಕಾಯಿಲೆಗೆ ತುತ್ತಾದ ರೋಗಿಗಳು ತಾಲೂಕು ಕೇಂದ್ರ ತಲುಪಲು ಸಂಕಷ್ಟ ಪಡಬೇಕಿತ್ತು. ಆದರೆ
ಗ್ರಾಮಕ್ಕೆ ಸಾರಿಗೆ ಸೌಲಭ್ಯ ಪಡೆಯಲು ಈ ಗ್ರಾಮಸ್ಥರು ಎಲ್ಲ ರೀತಿಯಲ್ಲೂ ಪ್ರಯತ್ನ ಮಾಡಿದ್ದರು. ಮತದಾನ ಬಹಿಷ್ಕಾರ, ರಸ್ತೆ ತಡೆ, ತಾಲೂಕು ಕೇಂದ್ರದಲ್ಲಿ ಹಂತ-ಹಂತವಾಗಿ ಹೋರಾಟ ಮಾಡಿದ್ದರೂ, ಪ್ರಯೋಜನ ಆಗಿರಲಿಲ್ಲ. ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಲ್ಲಿ ಪ್ರಸಾರವಾದ ಬೆನ್ನಲ್ಲೇ ಇದೀಗ ಜಂಗ್ಲಿ ಗ್ರಾಮದ ಜನರಿಗೆ ಹಾಗೂ ಶಾಲಾ ಮಕ್ಕಳಿಗೆ ಸಾರಿಗೆ ಸೌಲಭ್ಯ ಒದಗಿದ್ದು, ಬಹು ವರ್ಷದ ಸಮಸ್ಯೆಗೆ ಪರಿಹಾರ ಸಿಕ್ಕಿದೆ.ಇದನ್ನೂ ಓದಿ:ಅಜ್ಜಿಯ ನೆನೆದು ಭಾವನಾತ್ಮಕ ಪತ್ರ ಬರೆದ ಸುದೀಪ್ ಪುತ್ರಿ