ಹುಬ್ಬಳ್ಳಿ: ಬಡವರು, ಕಷ್ಟದಲ್ಲಿರುವವರಿಗೆ ಆಸರೆಯಾಗುವ ನಿಟ್ಟಿನಲ್ಲಿ ʼಪಬ್ಲಿಕ್ ಟಿವಿʼ (Public TV) ಬೆಳಕು (Belaku) ಕಾರ್ಯಕ್ರಮ ಸಾರ್ಥಕತೆಯತ್ತ ಸಾಗುತ್ತಿದೆ. ಧಾರವಾಡ (Dharawada) ಜಿಲ್ಲೆಯ ಕುಂದಗೋಳ ತಾಲೂಕಿನ ಕುಬಿಹಾಳ ಗ್ರಾಮದ ಬಡ ಮೆಕಾನಿಕ್ ಮರಿಗೌಡ ಮತ್ತು ಚೆನ್ನವ್ವ ದಂಪತಿಗೆ ಬೆಳಕು ಕಾರ್ಯಕ್ರಮ ಆಸರೆಯಾಗಿದೆ.
ಹುಟ್ಟು ಅಂಗವಿಕಲರಾಗಿರುವ ಮರಿಗೌಡ ತಮ್ಮ ಗ್ರಾಮದಲ್ಲಿ ಪಂಚರ್ ಮತ್ತು ಮೆಕಾನಿಕ್ ಶಾಪ್ ನಡೆಸುತ್ತಿದ್ದರು. ಮರಿಗೌಡ ಪತ್ನಿ ಚೆನ್ನವ್ವ ಆರಂಭದಲ್ಲಿ ಆರೋಗ್ಯವಾಗಿದ್ದರು. ಆದರೆ ವಿಧಿ ನರ್ತನದಿಂದ ಚೆನ್ನವ್ವ ಸಹ ತಮ್ಮ ಕಾಲು ಕಳೆದುಕೊಂಡಿದ್ದರು. ಇದು ಈ ಕುಟುಂಬಕ್ಕೆ ಸಿಡಿಲು ಬಡಿದಂತಾಗಿ, ಆರ್ಥಿಕ ಸಂಕಷ್ಟಕ್ಕೀಡು ಮಾಡಿತ್ತು. ಇದನ್ನೂ ಓದಿ: ರಾಜ್ಯದ ನಾಲ್ಕು ದಿಕ್ಕುಗಳಿಂದ ಭಾಜಪ ರಥಯಾತ್ರೆಗೆ ತಯಾರಿ: ಬೊಮ್ಮಾಯಿ
Advertisement
Advertisement
ಈ ಕುಟುಂಬ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಬಂದು ತಮ್ಮ ಸಂಕಷ್ಟ ಹೇಳಿಕೊಂಡು, ತಮ್ಮ ಮೆಕಾನಿಕ್ ಶಾಪ್‌ಗೆ ಅತ್ಯಾಧುನಿಕ ಯಂತ್ರೋಪಕರಣಗಳನ್ನು ನೀಡುವಂತೆ ಕೇಳಿಕೊಂಡಿದ್ದರು. ಇವರ ಸಮಸ್ಯೆಗೆ ಸ್ಪಂದಿಸಿರುವ ಪಬ್ಲಿಕ್ ಟಿವಿ ಮರಿಗೌಡರ ಕುಟುಂಬಕ್ಕೆ ಸಾವಿರಾರು ರೂಪಾಯಿ ಮೌಲ್ಯ ಅತ್ಯಾಧುನಿಕ ಮೆಕಾನಿಕ್ ಸಾಮಗ್ರಿಗಳನ್ನು ನೀಡಿದೆ.
Advertisement
Advertisement
ಪಬ್ಲಿಕ್ ಟಿವಿ ಕಾರ್ಯಕ್ರಮದಿಂದ ಪ್ರೇರಣೆಗೊಂಡ ಕಾರ್ಮಿಕ ಇಲಾಖೆ ಸ್ವಪ್ರೇರಣೆಯಿಂದ ಮರಿಗೌಡ ಕುಟುಂಬಕ್ಕೆ ಕಾರ್ಮಿಕ ಇಲಾಖೆಯಿಂದ ಅಸಂಘಟಿತ ವಲಯಕ್ಕೆ ಸಿಗುವ ಸೌಲಭ್ಯಗಳನ್ನು ನೀಡುವ ಭರವಸೆ ನೀಡಿದೆ. ಇನ್ನೂ ಪಬ್ಲಿಕ್ ಟಿವಿ ಸಹಾಯದಿಂದ ಸಂತಸಗೊಂಡಿರುವ ಮರಿಗೌಡ ದಂಪತಿ ಪಬ್ಲಿಕ್ ಟಿವಿಗೆ ಮತ್ತು ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಹಂಪಿ ಉತ್ಸವ 2023ರ ಲೋಗೋ, ಪೋಸ್ಟರ್ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k