ಬೀದರ್: ಕನ್ನಡಿಗರ ಅಚ್ಚು ಮೆಚ್ಚಿನ ಪಬ್ಲಿಕ್ ಟಿವಿಗೆ ದಶಮಾನೋತ್ಸವದ ಸಂಭ್ರಮ. ಈ ಹಿನ್ನೆಲೆ ಪಬ್ಲಿಕ್ ಟಿವಿಯನ್ನು ಕೈಹಿಡಿದು ನಡೆಸಿದ ರಾಜ್ಯದ ಜನತೆಗೆ ಕೃತಜ್ಞತೆಗಳನ್ನು ಸಲ್ಲಿಸಲು ರಾಜ್ಯಾದ್ಯಂತ ಪಬ್ಲಿಕ್ ತೇರು ಸಂಚಾರ ಮಾಡುತ್ತಿದೆ.
ಬುಧವಾರ ಪಬ್ಲಿಕ್ ದಶರಥ ಗಡಿ ಜಿಲ್ಲೆ ಬೀದರ್‍ಗೆ ಎಂಟ್ರಿ ಕೊಟ್ಟಿದ್ದು, ಬೀದರ್‍ನ ಜನರು ಪಬ್ಲಿಕ್ ತೇರನ್ನು ಬಹಳ ಅದ್ದೂರಿಯಾಗಿ ಸ್ವಾಗತ ಮಾಡಿದರು. ನಗರದ ಐತಿಹಾಸಿಕ ಹನುಮಾನ್ ದೇವಸ್ಥಾನದ ಅರ್ಚಕರು ವಿಶೇಷ ಪೂಜೆ ಮಾಡಿ ಪಬ್ಲಿಕ್ ಟಿವಿಯ ಒಳಿತಿಗಾಗಿ ಸಂಕಲ್ಪ ಮಾಡಿದರು. ಇದನ್ನೂ ಓದಿ: ಈ ಕೂಡಲೇ ಖಾರ್ಕಿವ್ ತೊರೆಯಿರಿ: ಭಾರತೀಯರಿಗೆ ರಾಯಭಾರ ಕಚೇರಿಯಿಂದ ತುರ್ತು ಸಂದೇಶ
ಸಾರ್ವಜನಿಕರು ಪಬ್ಲಿಕ್ ತೇರಿಗೆ ಹೂ ಮಳೆ ಸುರಿಸಿ ಪರಸ್ಪರ ಸಿಹಿ ಹಂಚಿಕೊಂಡು ಅದ್ದೂರಿಯಾಗಿ ಸ್ವಾಗತ ಮಾಡಿ ಸಂಭ್ರಮಿಸಿದರು. ಪಬ್ಲಿಕ್ ಟಿವಿಯ ಹತ್ತು ವರ್ಷಗಳ ಜರ್ನಿ ಬಗ್ಗೆ ವಿಟಿ ನೋಡುತ್ತಾ ಪಬ್ಲಿಕ್ ಟಿವಿಗೆ ಹಾಗೂ ಪಬ್ಲಿಕ್ ಟಿವಿಯ ಮುಖ್ಯಸ್ಥ ಹೆಚ್‍ಆರ್ ರಂಗನಾಥ್ ಅವರಿಗೆ ಜೈಕಾರದ ಘೋಣೆಗಳನ್ನು ಹಾಕಿ ಪಬ್ಲಿಕ್ ಟಿವಿ ಶತಮಾನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದರು. ಇದನ್ನೂ ಓದಿ: ಬೆಳಗ್ಗೆಯಿಂದ ವಾಟ್ಸಪ್ ಸಂದೇಶಕ್ಕೆ ತಮ್ಮನಿಂದ ಉತ್ತರ ಬಂದಿಲ್ಲ: ವಿದ್ಯಾರ್ಥಿ ಸಹೋದರ
ಅವಮಾನಗಳನ್ನೇ ಮಟ್ಟಿಲಾಗಿ ಮಾಡಿಕೊಂಡು ಪಬ್ಲಿಕ್ ಟಿವಿ ಇಂದು ರಾಜ್ಯದ ನಂಬರ್ ಒನ್ ಚಾನಲ್ ಆಗಿದೆ. ಒಬ್ಬ ವ್ಯಕ್ತಿಯ, ಪಕ್ಷದ ಟಿವಿ ಅಲ್ಲ. ಇದು ಜನ ಸಾಮಾನ್ಯರ ಟಿವಿಯಾಗಿದೆ. ಹೀಗಾಗೀ ನಾವು ಬೀದರ್ ಜನ ಸಮಾನ್ಯರು ಅದ್ಧೂರಿಯಾಗಿ ಪಬ್ಲಿಕ್ ಟಿವಿಯ ದಶರಥಕ್ಕೆ ವಿಶೇಷವಾಗಿ ಪೂಜೆ, ಹೂ ಚೆಲ್ಲುವ ಹಾಗೂ ಸಿಹಿ ಹಂಚುವ ಮೂಲಕ ಅದ್ದೂರಿಯಾಗಿ ಬರಮಾಡಿಕೊಂಡಿದ್ದೆವೆ ಎಂದು ಸಾರ್ವಜನಿಕರು ಹಾಗೂ ಪಬ್ಲಿಕ್ ಟಿವಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.