ಬೆಂಗಳೂರು: 8 ವರ್ಷಗಳಿಂದ ಸೂಪರ್ ಹಿಟ್ ಹಾಡುಗಳ ಜೊತೆ ಲೈವ್ ಶೋ, ಹಬ್ಬ-ಹರಿದಿನಗಳಲ್ಲಿ ವಿಶೇಷ ಕಾರ್ಯಕ್ರಮ, ಸ್ಪೆಷಲ್ ಕಾಂಟೆಸ್ಟ್ ಹಾಗೂ ಸೆಲೆಬ್ರೆಟಿ ಷೋಗಳೊಂದಿಗೆ ಕನ್ನಡಿಗರ ಮನಗೆದ್ದ ಪಬ್ಲಿಕ್ ಮ್ಯೂಸಿಕ್ (Public Music) ಇಂದು 8 ನೇ ವಾರ್ಷಿಕೋತ್ಸವವನ್ನು (Anniversary) ಆಚರಿಸಿಕೊಂಡಿದೆ.
ಇಂದು ಪಬ್ಲಿಕ್ ಮ್ಯೂಸಿಕ್ನ 8ನೇ ವಾರ್ಷಿಕೋತ್ಸವದ ಹಿನ್ನೆಲೆ ಹಲವು ಕಾರ್ಯಕ್ರಮಗಳಿಗೆ ಪಬ್ಲಿಕ್ ಟಿವಿ (Public TV) ಮುಖ್ಯಸ್ಥರಾದ ಹೆಚ್ಆರ್ ರಂಗನಾಥ್ (HR Ranganath), ಅವರು ದೀಪ ಬೆಳಗಿ ಚಾಲನೆ ನೀಡಿದರು.
Advertisement
Advertisement
ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್ಆರ್ ರಂಗನಾಥ್ ತಮ್ಮ ಬಾಲ್ಯದ ದಿನಗಳನ್ನು ಹಾಗೂ ಸಂಗೀತದೊಂದಿಗಿನ ಒಡನಾಟವನ್ನು ನೆನೆಸಿಕೊಂಡರು. ನಾನು ಚಿಕ್ಕವನಾಗಿದ್ದಾಗ ತುಂಬಾ ತುಂಟನಾಗಿದ್ದೆ. ಮನೆಯಲ್ಲಿ ಊಟದ ತಟ್ಟೆಯನ್ನು ಕವುಚಿ ಹಾಕಿ, ಅದರ ಮೇಲೆ ಊಟ ಮಾಡುತ್ತಿದ್ದೆ. ನನಗೆ ಅದೇ ದೊಡ್ಡ ಉಗ್ರ ಹೋರಾಟವಾಗಿತ್ತು. ಬಳಿಕ ನನ್ನ ಪೋಷಕರು ನನ್ನ ತುಂಟತನವನ್ನು ತಾಳಲಾರದೇ ಸಂಗೀತ ತರಗತಿಗೆ ಕಳುಹಿಸಿದರು ಎಂದು ತಿಳಿಸಿದರು. ಇದನ್ನೂ ಓದಿ: ಪಬ್ಲಿಕ್ ಮ್ಯೂಸಿಕ್ಗೆ 8ರ ಸಂಭ್ರಮ – ಇಡೀ ದಿನ ಹಲವು ಕಾರ್ಯಕ್ರಮಗಳ ರಸದೌತಣ
Advertisement
ಈ ಸಂದರ್ಭದಲ್ಲಿ ವಾಹಿನಿಗೆ ಪ್ರೋತ್ಸಾಹ ನೀಡಿದ ಡಿಟಿಎಚ್ ವಾಹಿನಿಗಳಿಗೆ, ಕೇಬಲ್ಗಳಿಗೆ ಮತ್ತು ಜನತೆಗೆ ಎಚ್.ಆರ್.ರಂಗನಾಥ್ ಧನ್ಯವಾದ ಹೇಳಿದರು.
Advertisement
ಲಹರಿ ಕಂಪನಿಯ ಮುಖ್ಯಸ್ಥ ಲಹರಿ ವೇಲು, ಸಿಒಒ ಹರೀಶ್, ಸಂಪಾದಕರಾದ ದಿವಾಕರ್ ಉಪಸ್ಥಿತರಿದ್ದರು. ಅತಿಥಿಗಳಾಗಿ ಅಶ್ವಿನಿ ರೆಕಾರ್ಡಿಂಗ್ ಕಂಪನಿ ಮಾಲೀಕರಾದ ಅಶ್ವಿನಿ ರಾಮ್ಪ್ರಸಾದ್, ಜೇಂಕಾರ್ ಮ್ಯೂಸಿಕ್ನ ಭರತ್ ಜೈನ್, ನಟರಿಷಭ್ ಶೆಟ್ಟಿ, ನಿರ್ದೇಶಕ ಜೋಗಿ ಪ್ರೇಮ್, ನಟಿ ಧನ್ಯಾರಾಮ್ ಕುಮಾರ್ ಹಾಗೂ ನಟ ಚಿಕ್ಕಣ್ಣ ಅತಿಥಿಗಳಾಗಿ ಭಾಗವಹಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ರಂಗನಾಥ್ ಅವರು ಪಬ್ಲಿಕ್ ಮ್ಯೂಸಿಕ್ ವತಿಯಿಂದ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.