ಪಬ್ಲಿಕ್ ಮ್ಯೂಸಿಕ್ `ದಶೋತ್ಸವ’ – ದಿನಪೂರ್ತಿ ಕಲರ್‌ಫುಲ್ ಕಾರ್ಯಕ್ರಮ

Public TV
2 Min Read
Anniversary

ನಗೆ ಈಗ ಎಂಬತ್ತು ದಾಟಿದೆ. ನಡೆಯುವಾಗ, ಊಟ ಮಾಡುವಾಗ, ಮಾತ್ರೆ ತೆಗೆದುಕೊಳ್ಳುವಾಗ ಹಾಗೂ ನಿದ್ರೆ ಮಾಡುವಾಗ ಮಾತ್ರ ನನಗೆ ಮುಪ್ಪು ಬಂದಿರೋದು ಗೊತ್ತಾಗುತ್ತದೆ. ಆದೇ ನೀವು ನನ್ನ ಕೈಗೆ ಪುಟ್ಟ ಪಿಟೀಲು ಕೊಟ್ಟು ನೋಡಿ, ಆಗ ನನ್ನ ವೃದ್ಧಾಪ್ಯ ಮರೆತು, 18ರ ಹುಡುಗನಾಗುತ್ತೇನೆ. ಆದೇ ಸಂಗೀತಕ್ಕಿರುವ ಶಕ್ತಿ” ಎನ್ನುತ್ತಾರೆ ಖ್ಯಾತ ಪಿಟೀಲು ವಾದಕರಾದ ಟಿ.ಎನ್ ಕೃಷ್ಣನ್.

ಬೇಕಂದಾಗ ಹರೆಯವನ್ನು ಪಡೆದುಕೊಳ್ಳುವ ದೈವಶಕ್ತಿ ಯಾರಿಗೆ ತಾನೆ ಬೇಡ? ಏನು ತಿಂದರೂ ಜೀರ್ಣಿಸಿಕೊಳ್ಳುವ, ಎಷ್ಟು ಬೇಕಾದರೂ ಕುಣಿಯುವ ಓಡುವ ಹಾಗೂ ನಿದ್ರಿಸುವ ಮಂತ್ರಶಕ್ತಿ ಯಾರಿಗೆ ತಾನೆ ಬೇಡ ಹೇಳಿ. ಸಾಕಷ್ಟು ಸ್ನೇಹಿತರನ್ನು ಪಡೆಯುವ ಯೌವನ ಎಲ್ಲರಿಗೂ ಬೇಕು. ಆ ಯೌವನದ ಗುಟ್ಟು ಸಂಗೀತದಲ್ಲಿದೆ. ಮೈಯಲ್ಲಿ ಮಿಂಚು ಹರಿಸುವ ಹಾಗೂ ಹೊಸದೊಂದು ಲೋಕಕ್ಕೆ ಕರೆದೊಯ್ಯುವ ಸಂಗೀತದ ರಸದೌತಣವನ್ನು ಪಬ್ಲಿಕ್ ಮ್ಯೂಸಿಕ್ (PUBLiC Music) ಸತತ ಹತ್ತು ವರ್ಷಗಳಿಂದ ಕರ್ನಾಟಕದ (Karnataka) ಜನತೆಗೆ ಹಾಗೂ ಸಾಗರದಾಚೆಗಿನ ಮ್ಯೂಸಿಕ್ ಅಭಿಮಾನಿಗಳಿಗೆ ನೀಡುತ್ತಾ ಬಂದಿದೆ.   ಇದನ್ನೂ ಓದಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿ ಭಾರತವನ್ನು ಸೇರಿಸಿ: ಫ್ರಾನ್ಸ್ ಅಧ್ಯಕ್ಷ ಒತ್ತಾಯ

 

View this post on Instagram

 

A post shared by PublicMusic (@publicmusics)

ದಶೋತ್ಸವ ಹೆಸರಿನ ಮೂಲಕ ಕನ್ನಡಿಗರ ಪ್ರಪ್ರಥಮ ಮ್ಯೂಸಿಕ್ ಚಾನೆಲ್ ಪಬ್ಲಿಕ್ ಪಬ್ಲಿಕ್ ಮ್ಯೂಸಿಕ್ ಹತ್ತನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಸೆಪ್ಟೆಂಬರ್ 28ರಂದು ಪಬ್ಲಿಕ್ ಮ್ಯೂಸಿಕ್‌ಗೆ ಹಬ್ಬದ ಸಂಭ್ರಮ. ಅಂದು ದಿನಪೂರ್ತಿ ಕಲರ್‌ಫುಲ್ ಕಾರ್ಯಕ್ರಮಗಳು ನಡೆಯುತ್ತವೆ. ಸಂಗೀತವನ್ನು ಮನಸಾರೆ ಅಪ್ಪಿ, ಸಂಗೀತದ ಬಗ್ಗೆ ವಿಶೇಷ ಪ್ರೀತಿ ಇರೋ ಪಬ್ಲಿಕ್ ಟಿ.ವಿಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (HR Ranganath) ಬೆಳಗ್ಗೆ 10ಗಂಟೆ 10ನಿಮಿಷ 10 ಸೆಕೆಂಡ್‌ಗೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಈ ದಶೋತ್ಸವದ (10 Anniversary) ಉದ್ಘಾಟನೆಯಲ್ಲಿ ಲಹರಿ ಮ್ಯೂಸಿಕ್‌ನ ಮಾಲೀಕರಾದ ಮನೋಹರ್ ನಾಯ್ಡು, ಆನಂದ್ ಆಡಿಯೋ ಕಂಪನಿಯ ಮುಖ್ಯಸ್ಥರಾದ ಶ್ಯಾಮ್ ಚಾಬ್ರಿಯಾ, ಅಶ್ವಿನಿ ರೆಕಾರ್ಡಿಂಗ್ ಕಂಪನಿಯ ಅಶ್ವಿನಿ ರಾಮ್ ಪ್ರಸಾದ್ ಹಾಗೂ ಝೇಂಕಾರ್ ಮ್ಯೂಸಿಕ್‌ನ ಭರತ್ ಜೈನ್ ಉಪಸ್ಥಿತರಿರುತ್ತಾರೆ.

ಭಾರತದ ರಿಯಲ್‌ಸ್ಟಾರ್ ಉಪೇಂದ್ರ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್, ಗಾಯಕಿ ಐಶ್ವರ್ಯ ರಂಗರಾಜನ್ ಹಾಗೂ ನಟಿ ರೀಷ್ಮ ನಾಣಯ್ಯ ಕಾರ್ಯಕ್ರಮದ ಹೊಳಪನ್ನು ಹೆಚ್ಚಿಸಲಿದ್ದಾರೆ. ದಶೋತ್ಸವದ ಪ್ರಯುಕ್ತ ಹತ್ತು ವಿಶೇಷ ಲೈವ್ ಶೋಗಳು ನಡೆಯಲಿವೆ.

 

View this post on Instagram

 

A post shared by PublicMusic (@publicmusics)


ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಗಾಯಕ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು, ಕನ್ನಡದ ಮೊದಲ ಮಹಿಳಾ ಇಂಡಿಪೆಂಡೆಂಟ್‌ ಸಿಂಗರ್ ಸಂಗೀತ ರಾಜೀವ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಸಾಕಷ್ಟು ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಇರಲಿದ್ದಾರೆ.

ಮಲಯ ಮಾರುತ ಚಿತ್ರದ ಎಲ್ಲೆಲ್ಲೂ ಸಂಗೀತವೇ ಹಾಡಿನಂತೆ ಹತ್ತು ವರ್ಷಗಳಲ್ಲಿ ಪಬ್ಲಿಕ್ ಮ್ಯೂಸಿಕ್ ಸಂಗೀತದ ಮೂಲಕ ಎಲ್ಲಾ ಕಡೆ ಪಸರಿಸಿಕೊಂಡಿದೆ. ಮೊದಲ ವರ್ಷದಿಂದ ಇಂದು ದಶಕದವರೆಗೂ ಪಬ್ಲಿಕ್ ಮ್ಯೂಸಿಕ್ ದಿನದಿಂದ ದಿನಕ್ಕೆ ಆಪ್ಡೇಟ್ ಆಗುತ್ತಾ, ಎಲ್ಲಾ ಜನರೇಶನ್‌ಗೂ ಇಷ್ಟವಾಗುವಂತ ಹಾಡುಗಳನ್ನು ಪ್ರಸಾರ ಮಾಡುತ್ತಾ ದಶೋತ್ಸವದ ಸಂಭ್ರಮದವರೆಗೂ ಬಂದು ನಿಂತಿದ್ದೇವೆ. ಈ ಸಂಭ್ರಮಕ್ಕೆ ಮುಖ್ಯ ಕಾರಣ  ಕನ್ನಡಿಗರು. ಮೊದಲ ವರ್ಷದಿಂದ ಇಲ್ಲಿಯವರೆಗೂ ಜೊತೆಗೆ ನಿಂತಿದ್ದೀರಿ, ಬೆನ್ನುತಟ್ಟಿ ಬೆಂಬಲ ಕೊಟ್ಟಿದ್ದೀರಿ. ಇದೇ ರೀತಿ ಮುಂದೆಯೋ ನಿಮ್ಮ  ಬೆಂಬಲ ಇರುತ್ತೆ ಎನ್ನುವ ಗಟ್ಟಿ ನಂಬಿಕೆಯಲ್ಲಿದ್ದೇವೆ.

Share This Article