ಚಂಡೀಗಢ: ಭಗತ್ ಸಿಂಗ್ ಪುಣ್ಯಸ್ಮರಣೆಯಂದು ಪಂಜಾಬ್‌ನಲ್ಲಿ ಸಾರ್ವಜನಿಕ ರಜೆ ನೀಡಲಾಗುವುದು ನೂತನ ಆಪ್ ಸರ್ಕಾರ ಘೋಷಣೆ ಮಾಡಿದೆ.
ಪಂಜಾಬ್‌ನ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪ್ರತಿ ವರ್ಷ ಮಾರ್ಚ್ 23 ರಂದು ಸಾರ್ವಜನಿಕ ರಜೆ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ. ಇದನ್ನೂ ಓದಿ: ಸಂಸದ ಸ್ಥಾನಕ್ಕೆ ಅಖಿಲೇಶ್ ಯಾದವ್ ರಾಜೀನಾಮೆ
Advertisement
Advertisement
ಭಗತ್ ಸಿಂಗ್ ಒಬ್ಬ ಭಾರತೀಯ ಸ್ವಾತಂತ್ರ ಹೋರಾಟಗಾರ ಮಾತ್ರವಲ್ಲದೇ ಅತ್ಯಂತ ಪ್ರಸಿದ್ಧ ಕ್ರಾಂತಿಕಾರಿಗಳಲ್ಲಿ ಒಬ್ಬರಾಗಿದ್ದರು. ಭಗತ್ ಸಿಂಗ್ ಅವರ ಪುಣ್ಯಸ್ಮರಣೆಯಂದು ಜನರು ಅವರ ಹುಟ್ಟೂರು ಖಟ್ಕರ್ ಕಲಾನ್‌ಗೆ ತೆರಳಿ ನಮನ ಸಲ್ಲಿಸಲು ಅನುಕೂಲವಾಗಲು ರಜೆ ಘೋಷಿಸಲಾಗಿದೆ ಎಂದು ವಿಧಾನ ಸಭೆಯಲ್ಲಿ ಭಗವಂತ್ ಮಾನ್ ತಿಳಿಸಿದ್ದಾರೆ. ಇದನ್ನೂ ಓದಿ: ಭಗವದ್ಗೀತೆ ಬಗ್ಗೆ ನಮಗೆ ಹೊಟ್ಟೆ ಉರಿ ಇಲ್ಲ: ಡಿಕೆಶಿ
Advertisement
ಭವಗಂತ್ ಮಾನ್ ಪಂಜಾಬ್‌ನ ಮುಖ್ಯಮಂತ್ರಿಯಾಗಿ ಮಾರ್ಚ್ 16ರಂದು ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಕಾರ್ಯಕ್ರಮವನ್ನು ಕೂಡಾ ಭಗತ್ ಸಿಂಗ್‌ರ ಊರು ಖಟ್ಕರ್ ಕಲಾನ್‌ನಲ್ಲಿಯೇ ಆಯೋಜಿಸಲಾಗಿತ್ತು.