ಬಾಗಲಕೋಟೆ: ಪಬ್ಲಿಕ್ ಹೀರೋ (PUBLiC Hero) ನಿವೃತ್ತ ಉಪನ್ಯಾಸಕ ಪ್ರೊ. ಶಿವ ರೆಡ್ಡಿ ವಾಸನ್ (Shiva Reddy Vasan) ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ (Rajyotsava Award) ಆಯ್ಕೆ ಆಗಿದ್ದಾರೆ.
ಎಸ್.ಎಸ್ ವಾಸನ್ ಅವರು ಬಾದಾಮಿ (Badami) ಪಟ್ಟಣದ ನಿವಾಸಿಯಾಗಿದ್ದು, ವೃತ್ತಿಯಿಂದ ಜೀವಶಾಸ್ತ್ರದ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿಯ ನಂತರವೂ ಅವರ ನಿಸರ್ಗದ ಪ್ರೀತಿ ಕಡಿಮೆ ಆಗಲಿಲ್ಲ. ಯುವ ಪೀಳಿಗೆಗೆ ಪರಿಸರದ ಬಗ್ಗೆ ಅರಿವು ಮೂಡಿಸುತ್ತಾ, ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಟ್ಟು ತಾಪಮಾನ ಕಡಿಮೆ ಮಾಡುವ ಪಣ ತೊಟ್ಟಿದ್ದಾರೆ.
Advertisement
Advertisement
ನಿವೃತ್ತಿ ನಂತರ ಬಾದಾಮಿ ಪಟ್ಟಣದಲ್ಲಿ ನಿಸರ್ಗ ಬಳಗ ಎಂಬ ಸಂಘ ತೆರೆದಿದ್ದಾರೆ. ಈ ಬಳಗದ ಸದಸ್ಯರೊಂದಿಗೆ ಸಸಿ ನೆಡುವ ಕಾರ್ಯ ಮಾಡುತ್ತಿದ್ದಾರೆ. ಇವರ ಪರಿಸರ ಕಾಳಜಿಯನ್ನು ಗಮನಿಸಿದ್ದ ಪಬ್ಲಿಕ್ ಟಿವಿ 2019ರ ಸೆಪ್ಟೆಂಬರ್ 13 ರಂದು ನಿಸರ್ಗ ಪ್ರೇಮಿ ಎಂದು ಪಬ್ಲಿಕ್ ಹಿರೋ ಕಾರ್ಯಕ್ರಮದ ಅಡಿ, ಇವರ ಸಾಮಾಜಿಕ ಕಳಕಳಿ ಹಾಗೂ ಪರಿಸರ ಪ್ರೇಮದ ಕುರಿತು ವರದಿ ಮಾಡಿತ್ತು. ಇದನ್ನೂ ಓದಿ: ಇಸ್ರೋ ಮುಖ್ಯಸ್ಥ ಸೋಮನಾಥ್, ಗಾಲ್ಫರ್ ಅದಿತಿ ಸೇರಿದಂತೆ 68 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ- Full List
Advertisement
ಹೆಚ್ಚುತ್ತಿರುವ ತಾಪಮಾನವನ್ನು ಸಸಿ ನೆಡುವ ಮೂಲಕ ಕಡಿಮೆ ಮಾಡಬೇಕು. ನೀರಿನ ಅಂತರ್ಜಲ ಮಟ್ಟ ವೃದ್ಧಿಯಾಗಬೇಕು ಎಂಬ ಕನಸುಗಳನ್ನು ಹೊತ್ತು ಬಿಡುವಿನ ವೇಳೆಯಲ್ಲಿ ಊರೂರು ಸುತ್ತಿ ಪರಿಸರ ರಕ್ಷಣೆ, ಗಿಡ ನೆಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಪರಿಸರ ಪ್ರೇಮಿ ಎನಿಸಿಕೊಂಡಿದ್ದಾರೆ. ಯುವಕರು, ಮಹಿಳೆಯರು, ಶಿಕ್ಷಕರನ್ನೊಳಗೊಂಡ ಸುಮಾರು 50 ಸದಸ್ಯರ ನಿಸರ್ಗ ಬಳಗ ಹುಟ್ಟು ಹಾಕಿ ಚಾಲುಕ್ಯರ ನಾಡನ್ನು ಹಸಿರು ನಾಡು ಮಾಡಲು ಹೊರಟಿದ್ದಾರೆ.
Advertisement
ಬಾದಾಮಿ ಐತಿಹಾಸಿಕ ಪ್ರವಾಸಿ ತಾಣ, ಪಟ್ಟಣದಲ್ಲಿ ಚಾಲುಕ್ಯರ ಆಳ್ವಿಕೆಗೆ ಸಾಕ್ಷಿಯಾದ ಸುಂದರ ಕಲಾಶಿಲ್ಪಗಳಿವೆ. ಇದನ್ನು ವೀಕ್ಷಿಸಲು ದೇಶ-ವಿದೇಶದಿಂದ ಪ್ರವಾಸಿಗರು ಬರುತ್ತಾರೆ. ಆದರೆ ಪಟ್ಟಣ ಮಾತ್ರ ಬಿಸಿಲ ಕೂಪದಲ್ಲಿ ಸುಡುವಂತಿದೆ. ಇದನ್ನರಿತ ವಾಸನ್, ಬಾದಾಮಿ ಪಟ್ಟಣವನ್ನು ಸುಂದರ ಪರಿಸರದ ಪಟ್ಟಣವನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ, ಪಟ್ಟಣದ ಹಸರೀಕರಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಸಸಿ ನೆಡುವುದರಲ್ಲಿಯೂ ಜಾಣತನ ಮೆರೆದಿರುವ ಇವರು, ಹೊಂಗೆ ಮರದಿಂದ ಮುಂದೊಂದು ದಿನ ಜೈವಿಕ ಇಂಧನ ಸಿಗಬಹುದು ಎಂಬ ಉದ್ದೇಶದಿಂದ ಹೆಚ್ಚಾಗಿ ಹೊಂಗೆ ಸಸಿಗಳನ್ನೇ ನೆಡುತ್ತಿದ್ದಾರೆ. ಇಲ್ಲಿಯವರೆಗೆ ವಾಸನ್ ಅವರು 15 ಸಾವಿರಕ್ಕೂ ಅಧಿಕ ವಿವಿದ ಸಸಿಗಳನ್ನು ನೆಟ್ಟಿದ್ದಾರೆ. ಈ ಎಲ್ಲಾ ಕಾರಣದಿಂದ ಬಾದಾಮಿ ಜನ ಇವರನ್ನು ಪರಿಸರ ಪ್ರೇಮಿ ವಾಸನ್ ಎಂದು ಕರೆಯುತ್ತಿದ್ದಾರೆ.
Web Stories