ಚಿತ್ರದುರ್ಗ: ಹೆಣ್ಣು ಎಷ್ಟು ತ್ಯಾಗಮಯಿ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಇನ್ನು ಆಕೆ ತನ್ನ ಇಡೀ ಜೀವನವನ್ನೇ ಕುಟುಂಬಕ್ಕೆ ಸಮರ್ಪಿಸಿಕೊಂಡಿರ್ತಾಳೆ. ಅಂಥದ್ದೇ ಮಹಿಳೆಯ ಸ್ಟೋರಿ ಚಿತ್ರದುರ್ಗದಿಂದ ತಂದಿದ್ದೀವಿ. ಸಂಧ್ಯಾಕಾಲದಲ್ಲೂ ಸ್ವಾಭಿಮಾನದ ಬದುಕು ಸಾಗಿಸ್ತಿದ್ದಾರೆ ನಮ್ಮ ಪಬ್ಲಿಕ್ ಹೀರೋ ಪುಟ್ಟಮ್ಮಜ್ಜಿ.
Advertisement
ಪುಟ್ಟಮ್ಮ ಚಿತ್ರದುರ್ಗದ ಹೊಸದುರ್ಗದ ಹಂಜಿ ಸಿದ್ದಪ್ಪ ಬಡಾವಣೆ ನಿವಾಸಿ. 75 ವರ್ಷದ ಈ ಪುಟ್ಟಮ್ಮಜ್ಜಿ ಬೆಳಗಿನ ಜಾವ 4 ಗಂಟೆಗೆ ಎದ್ದು ಪುಟ್ಟಗಾಡಿಯಲ್ಲಿ ಕನ್ನಡ ಸುದ್ದಿಪತ್ರಿಕೆಗಳನ್ನ ಹೊಸದುರ್ಗ ಬಸ್ ನಿಲ್ದಾಣದಲ್ಲಿ ಮಾರಾಟ ಮಾಡ್ತಾರೆ. ಸುಮಾರು 15 ವರ್ಷಗಳಿಂದ ಈ ಕಾಯಕದಲ್ಲೇ ತೊಡಗಿರೋ ಪುಟ್ಟಮ್ಮಜ್ಜಿ ಬಳಿಯೇ ಪೇಪರ್ ಕೊಳ್ಳುವ ಗ್ರಾಹಕರಿದ್ದಾರೆ.
Advertisement
Advertisement
ಪ್ರತಿನಿತ್ಯ 100 ರಿಂದ 150 ದಿನ ಪತ್ರಿಕೆಗಳನ್ನ ಮಾರಾಟ ಮಾಡ್ತೇನೆ ಅನ್ನೋ ಪುಟ್ಟಮ್ಮಜ್ಜಿ ಯಾವತ್ತೂ ಕೆಲಸ ನಿಲ್ಲಿಸಿಲ್ಲ. ಪುಟ್ಟಮ್ಮಜ್ಜಿಗೆ ಮೂವರು ಮಕ್ಕಳಲ್ಲಿ ಇಬ್ಬರು ಹೆಣ್ಣು ಮಕ್ಕಳು, ಮತ್ತೊಬ್ಬ ಮಗ ಇದ್ದಾರೆ. ಮಕ್ಕಳು ಸಾಕಮ್ಮ ಈ ಕೆಲಸ ಅಂತ ಒತ್ತಾಯಿಸಿದ್ರೂ ಒಪ್ಪದ ಪುಟ್ಟಮ್ಮಜ್ಜಿ ಆತ್ಮ ತೃಪ್ತಿಗಾಗಿ ಕೆಲಸ ಮಾಡ್ತೇನೆ ಎಂದು ಹೇಳ್ತಾರೆ.
Advertisement
ಅಕ್ಕಪಕ್ಕದ ಅಂಗಡಿಗಳಿಂತ ಬೇಗನೇ ಅಂಗಡಿಯನ್ನ ತೆರೆಯೋ ಅಜ್ಜಿಯ ಕಾಯಕ ನಿಷ್ಠೆಗೆ ಯುವಕರೇ ನಾಚಿದ್ದಾರೆ. ಸೂರ್ಯ ನೆತ್ತಿಗೆ ಬಂದ್ರೂ ಹಾಸಿಗೆ ಬಿಡದ ಯುವ ಜನಾಂಗಕ್ಕೆ ಪುಟ್ಟಮ್ಮಜ್ಜಿ ಮಾದರಿಯಾಗಿದ್ದಾರೆ.