ಕೋಲಾರ: ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಹಿಂದೂ-ಮುಸಲ್ಮಾನರ ನಡುವೆ ಕಾನೂನು ಸಮರ ನಡೀತಿದೆ. ಜೊತೆಗೆ ರಾಮನನ್ನು ಮುಸ್ಲೀಮರು ದ್ವೇಷಿಸ್ತಾರೆ ಅನ್ನೋ ಟೀಕೆಯೂ ಇದೆ. ಆದ್ರೆ, ಕೋಲಾರದ ಪಬ್ಲಿಕ್ ಹೀರೋ ಪಾಚಾ ಸಾಬ್ ವಿರೋಧವೇ ಸರಿ. 88 ಲಕ್ಷ ರಾಮಕೋಟಿ ಬರೆದಿದ್ದಾರೆ.
ಕೋಲಾರದ ಬಂಗಾರಪೇಟೆಯ ಮಾಗೊಂದಿ ಗ್ರಾಮದ 96 ವರ್ಷದ ಪಾಚಾಸಾಬ್ ಶ್ರೀರಾಮನ ಆರಾಧಕರಾಗಿದ್ದು, ಕೋಟಿ ಶ್ರೀರಾಮಕೋಟಿ ಬರೆದು ಭದ್ರಾಚಲಂ ದೇಗುಲಕ್ಕೆ ಅರ್ಪಿಸುವ ಕನಸು ಹೊತ್ತಿದ್ದಾರೆ. ಈಗಾಗಲೇ 88 ಲಕ್ಷ ರಾಮಕೋಟಿ ಬರೆದಿದ್ದು, ಶೀಘ್ರವೇ 12 ಲಕ್ಷ ರಾಮಕೋಟಿ ಬರೆಯುತ್ತೇನೆ ಅಂತಿದ್ದಾರೆ.
1923ರಲ್ಲಿ ಬಡ ಕುಟುಂಬದಲ್ಲಿ ಜನಿಸಿರುವ ಪಾಚಾಸಾಬ್ ಅಂದಿನ ಕಾಲದಲ್ಲೇ 4ನೇ ತರಗತಿಯನ್ನ ಇಂಗ್ಲೀಷ್‍ನಲ್ಲಿ ಹಾಗೂ ಕನ್ನಡದಲ್ಲಿ 8ನೇ ತರಗತಿವರೆಗೆ ಓದಿ ಶಿಕ್ಷಕರಾಗಿದ್ದರು. 22 ವರ್ಷಗಳ ಹಿಂದೆ ಆಂಧ್ರ ಪ್ರದೇಶದ ಭದ್ರಾಚಲಂಗೆ ಸ್ನೇಹಿತನೊಂದಿಗೆ ಭೇಟಿ ನೀಡಿದ್ದಾಗ ಅಲ್ಲಿನ ಸಾಧು ಒಬ್ಬರ ಸಲಹೆಯಂತೆ ರಾಮಕೋಟಿಯನ್ನು ಪುಸ್ತಕ, ಆಲದ ಎಲೆ, ಎಕ್ಕದ ಎಲೆ, ತಾಮ್ರದ ಎಲೆ ಮೇಲೆ ಬರೆಯುತ್ತಿದ್ದಾರೆ.
ಗ್ರಾಮದಲ್ಲಿ ಮಕ್ಕಳು, ದೊಡ್ಡವರು, ವೃದ್ಧರಿಗೆ ಗ್ರಹ ಸಂಬಂಧಿ ಕಾಯಿಲೆ ಇದ್ದಲ್ಲಿ ಉಚಿತವಾಗಿ ಮಂತ್ರ-ಚಿಕಿತ್ಸೆಯನ್ನೂ ನೀಡ್ತಿದ್ದಾರೆ ಅಂತ ಸ್ಥಳೀಯರಾದ ಸುಮಿತ್ರ ತಿಳಿಸಿದ್ದಾರೆ.
ಸರ್ವಧರ್ಮ ಸಮನ್ವಯ ಸಾರುವುದೇ ಗುರಿ ಅನ್ನೋ ಪಾಚಾಸಾಬ್, ಗ್ರಾಮದಲ್ಲಿ ರಾಮಾಂಜನೇಯ ದೇವಾಲಯ ನಿರ್ಮಿಸುವ ಕನಸು ಹೊಂದಿದ್ದಾರೆ. ಈ ಇಳಿವಯಸ್ಸಿನಲ್ಲೂ ಶುಗರ್, ಬಿಪಿ ಸೇರಿದಂತೆ ಯಾವುದೇ ಕಾಯಿಲೆ ಇಲ್ಲ. ಚಟಗಳಿಲ್ಲ ಅಂತ ಖುಷಿಯಿಂದ ಹೇಳ್ತಿದ್ದಾರೆ.
ಇಷ್ಟು ಮಾತ್ರವಲ್ಲದೇ ಕೆ.ಸಿ.ರೆಡ್ಡಿ ಅವಧಿಯಲ್ಲಿ ಮತ ಹಾಕುವುದು ಹೇಗೆ ಎಂಬುದನ್ನು ಜನತೆಗೆ ಕಲಿಸಿಕೊಟ್ಟಿದ್ದ ಇವರು ಸ್ವಾತಂತ್ರ್ಯ ಸಂಗ್ರಾಮದ ಹೊತ್ತಲ್ಲಿ ಗೋವಾ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದನು ಸ್ಮರಿಸಿಕೊಳ್ತಾರೆ. ರಾಮ ಕೋಟಿ ಬರೆಯುವದರಿಂದ ನಾನು ಹೇಳಿದ ಮಾತು ನಡೆಯುತ್ತದೆ ಅನ್ನೋ ಪಾಚಾಸಾಬ್‍ರು ರಾಜಕೀಯವಾಗಿ ಭವಿಷ್ಯವನ್ನೂ ಹೇಳ್ತಾರೆ.
https://www.youtube.com/watch?v=AZymGId6WcU
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv