ರಾಯಚೂರು: ಸರ್ಕಾರಿ ಶಾಲೆ ಆರಂಭವಾದ್ರೂ ಸರಿಯಾದ ಟೈಮ್‍ಗೆ ಮೇಷ್ಟ್ರು ಬರಲ್ಲ ಎಂಬ ಮಾತುಗಳು ಕೇಳಿ ಬರುತ್ತವೆ. ಇದಕ್ಕೆ ಅಪವಾದ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಮೌನೇಶ್ ಮೇಷ್ಟ್ರು.
ಮೌನೇಶ್ ಕುಂಬಾರ್ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಸರ್ಜಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತನ್ನಂತೆ ಬಡ ಮಕ್ಕಳು ವಿದ್ಯಾಭ್ಯಾಸದಿಂದ ಹಿಂದುಳಿಯಬಾರದು ಅಂತ ಶಪಥತೊಟ್ಟು ಶ್ರಮಿಸ್ತಿದ್ದಾರೆ. “ಎದ್ದೇಳು ಮಂಜುನಾಥ” ಅಂತ ಯೋಜನೆ ರೂಪಿಸಿ ಮುಂಜಾನೆಯೇ ಎದ್ದು ನಾಲ್ಕೈದು ಗಂಟೆಗೆ 5 ಕಿ.ಮೀ ದೂರದ ಲಿಂಗಸುಗೂರಿನಿಂದ ಸರ್ಜಾಪೂರಕ್ಕೆ ಬರುತ್ತಾರೆ. ಒಂದು ವೇಳೆ ಶಿಕ್ಷಕರು ಬರಲಿಲ್ಲ ಅಂದ್ರೆ ವಿದ್ಯಾರ್ಥಿಗಳೇ ತಾವು ಓದ್ತಿರೋ ಬಗ್ಗೆ ಮಿಸ್ ಕಾಲ್ ಕೊಡಬೇಕು.
Advertisement
Advertisement
ಸರ್ಜಾಪೂರದ ಈ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆಯೇನಲ್ಲ. ವಿಜ್ಞಾನ, ಗಣಿತ ಹಾಗೂ ಭಾಷಾ ಪ್ರಯೋಗಾಲಯಗಳು ಇಡೀ ಜಿಲ್ಲೆಗೆ ಮಾದರಿಯಾಗಿವೆ. ಹೆಡ್‍ಮೇಷ್ಟ್ರು ಮೌನೇಶ್ ಅವರ ಈ ಕಾರ್ಯಕ್ಕೆ ಶಾಲೆಯ 8 ಜನ ಸಹ ಶಿಕ್ಷಕರು ಸಾಥ್ ನೀಡಿದ್ದಾರೆ.
Advertisement
ಸರ್ಜಾಪೂರದ ಜೊತೆಗೆ ಕುಪ್ಪಿಗುಡ್ಡ ಗ್ರಾಮ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಅಧ್ಯಯನ ಮಾಡ್ತಿದ್ದು, ಇಲ್ಲಿನ ಪಾಠ ಪ್ರವಚನದ ಗುಣಮಟ್ಟ ಕಂಡು ಲಿಂಗಸುಗೂರು ತಾಲೂಕು ಕೇಂದ್ರದಿಂದಲೂ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ.