ಬಳ್ಳಾರಿ: ನಿಜವಾದ ದೇಶಪ್ರೇಮಿಗಳು ಯಾವತ್ತೂ ದೇಶಕ್ಕಾಗಿ ಒಂದಿಲ್ಲೊಂದು ಸೇವೆ ಮಾಡುತ್ತಲೇ ಇರುತ್ತಾರೆ. ಸೇನೆಯಲ್ಲಿ 16 ವರ್ಷ ದುಡಿದು ನಿವೃತ್ತರಾಗಿರೋ ಬಳ್ಳಾರಿಯ ಮೊಹ್ಮದ್ ರಫಿ ಅವರು ಈಗ ಯುವಕರಿಗೆ ತರಬೇತಿ ನೀಡ್ತಿದ್ದಾರೆ.
ಯುವಕರಿಗೆ ತರಬೇತಿ ನೀಡುತ್ತಿರುವ ರಫಿ ದೈಹಿಕ ಶಿಕ್ಷಕರಲ್ಲ. ಬದಲಾಗಿ ನಿವೃತ್ತರಾಗಿರೋ ಯೋಧರು. ಬಳ್ಳಾರಿಯ ಹೂವಿನಹಡಗಲಿ ತಾಲೂಕಿನ ಮಿರಾಕೊರನಹಳ್ಳಿಯ ಮೊಹ್ಮದ್ ರಫಿಯವರು 2002ರಲ್ಲಿ ಸಿಪಾಯಿಯಾಗಿ ಸೇನೆ ಸೇರಿದ ಮೊಹ್ಮದ್ ರಫಿ ಅವರು 2018ರವರೆಗೆ ಸೇನಾಪಡೆಯಲ್ಲಿ ನಾಯಕ್, ಹವಾಲ್ದಾರ್ ಆಗಿ ಸೇವೆ ಸಲ್ಲಿಸಿದ್ದಾರೆ. ಪಂಜಾಬ್, ಜಮ್ಮುಕಾಶ್ಮೀರ ಸೇರಿದಂತೆ ದೇಶದ ಹಲವೆಡೆ ದೇಶ ಕಾದಿದ್ದಾರೆ. ನಿವೃತ್ತಿ ಬಳಿಕ ಈಗ ಯುವಕರಿಗೆ ಸೇನಾ ತರಬೇತಿ ನೀಡುತ್ತಿದ್ದಾರೆ.
ಸೇನೆ, ಭದ್ರತಾಪಡೆಯಲ್ಲಿ ಹೇಗಿರಬೇಕು ಅನ್ನೋದರ ಜೊತೆಗೆ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಯಾವ ರೀತಿ ನಡೆಯುತ್ತದೆ ಅನ್ನೋದರ ಬಗ್ಗೆಯೂ ಬೆಳಗ್ಗೆ-ಸಂಜೆ ತರಬೇತಿ ನೀಡ್ತಿದ್ದಾರೆ. ಗ್ರಾಮದ 25ಕ್ಕೂ ಹೆಚ್ಚು ಯುವಕರು ಈ ತರಬೇತಿಯಿಂದ ಪುಳಕಿತರಾಗಿದ್ದಾರೆ ಎಂದು ತರಬೇತಿ ಪಡೆಯುತ್ತಿರುವ ಬಸವರಾಜ್ ಹೇಳಿದ್ದಾರೆ.
ಸಾಮಾನ್ಯವಾಗಿ ಯೋಧರು ನಿವೃತ್ತಿ ನಂತರ ಬೇರೊಂದು ಉದ್ಯೋಗ ಆಯ್ಕೆ ಮಾಡಿಕೊಳ್ಳುತ್ತಾರೆ. ಆದ್ರೆ, ಮೊಹ್ಮದ್ ರಫಿಯವರು ಮಾತ್ರ ದೇಶಕ್ಕೆ ಮತ್ತಷ್ಟು ಸೇವೆ ಸಲ್ಲಿಸ್ತಿದ್ದಾರೆ.
https://www.youtube.com/watch?v=JdmLx3DcpHw
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv