ಕೊಪ್ಪಳ: ಸರ್ಕಾರಿ ಆಸ್ಪತ್ರೆ ಅಂದರೆ ಅವ್ಯವಸ್ಥೆ, ಅಶುಚಿತ್ವ ಅನ್ನೋ ಕೊಂಕಿದೆ. ಆದರೆ ಕೊಪ್ಪಳದ ಗಂಗಾವತಿ ತಾಲೂಕು ಸರ್ಕಾರಿ ಆಸ್ಪತ್ರೆ ಮಾತ್ರ ಇದಕ್ಕೆ ವಿರೋಧ. ಯಾವ ಖಾಸಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೂ ಕಡಿಮೆ ಇಲ್ಲದಂತಹ ವಿಶೇಷಗಳು ಇಲ್ಲಿವೆ.
ಕೊಪ್ಪಳದ ಗಂಗಾವತಿಯ ಸರ್ಕಾರಿ ತಾಲೂಕು ಆಸ್ಪತ್ರೆ ಎಲ್ಲ ಸೌಲಭ್ಯಗಳನ್ನು ಒಳಗೊಂಡಿದ್ದು, ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುತ್ತಿದೆ. ಸಿಸಿಟಿವಿ, ಎಲ್ಲಾ ಕೊಠಡಿಗಳಲ್ಲಿ ಟಿವಿ ವ್ಯವಸ್ಥೆ, ಪ್ರತಿ ವಾರ್ಡ್ ನಲ್ಲೂ ಗೀಸರ್, ಎಲ್ಲಾ ಒಪಿಡಿಯಲ್ಲೂ ಎಸಿ ಇದೆ. ಅಲ್ಲದೇ ಮೊದಲ ಬಾರಿಗೆ ತಾಲೂಕ ಆಸ್ಪತ್ರೆಯಲ್ಲಿ ಡಿಜಿಟಲ್ ಸ್ಕ್ಯಾನಿಂಗ್ ಹೊಂದಿದ ಏಕೈಕ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ, ವೈದ್ಯಾಧಿಕಾರಿಗಳಾದ ಡಾ.ಈಶ್ವರ ಸವಡಿ 24 ಗಂಟೆಯೂ ಲಭ್ಯ ಇದ್ದಾರೆ.
Advertisement
Advertisement
100 ಹಾಸಿಗೆಯುಳ್ಳ ಈ ಆಸ್ಪತ್ರೆಗೆ ಪ್ರತಿದಿನ ಹೊರರೋಗಿ ವಿಭಾಗಕ್ಕೆ 1200 ರಿಂದ 1500 ರೋಗಿಗಳು ಚಿಕಿತ್ಸೆ ಬರುತ್ತಿದ್ದಾರೆ. ಗರ್ಭಿಣಿಯರು, ಬಾಣಂತಿಯರ ಬಗ್ಗೆ ಎಕ್ಸ್‍ಟ್ರಾ ಕೇರ್ ಕೈಗೊಳ್ಳತಿರೋ ಆಸ್ಪತ್ರೆ ಮೊದಲಿಗೆ ಶುಚಿತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದೆ. ಶೇ.90ರಷ್ಟು ನಾರ್ಮಲ್ ಡೆಲಿವರಿ ಮಾಡಿಸಿರೋ ಆಸ್ಪತ್ರೆ ಒಂದು ತಿಂಗಳಲ್ಲಿ 374ರ ಹೆರಿಗೆ ಮಾಡಿಸಿದ ರಾಜ್ಯದ ಏಕೈಕ ಆಸ್ಪತ್ರೆ ಅನ್ನೋ ಹಿರಿಮೆಗೆ ಪಾತ್ರವಾಗಿದೆ.
Advertisement
ಗುಣಮಟ್ಟದ ಆಸ್ಪತ್ರೆಗೆ ಹಲವು ಪ್ರಶಸ್ತಿಗಳು ಸಂದಿವೆ. ಹೀಗಾಗಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಗಂಗಾವತಿಯ ಈ ಆಸ್ಪತ್ರೆಗೆ ಭೇಟಿ ನೀಡುವಂತೆ ಸರ್ಕಾರ ಆದೇಶಿಸಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=Dulvppb-3eQ