ರಾಯಚೂರು: ವೃತ್ತಿಯಲ್ಲಿ ಕಾನ್ಸ್ ಟೇಬಲ್. ಆದ್ರೆ ಬಡ ವಿದ್ಯಾರ್ಥಿಗಳಿಗೆ ಗುರುವಾಗಿದ್ದಾರೆ. ಇವರೇ ಇವತ್ತಿನ ನಮ್ಮ ಪಬ್ಲಿಕ್ ಹೀರೋ.
ಹೌದು. ಹುಸೇನಪ್ಪ ನಾಯಕ್ ಎಂಬವರು ರಾಯಚೂರಿನ ಸಿಂಧನೂರು ನಗರ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಡು ಬಡತನದ ಕುಟುಂಬದಿಂದ ಬಂದ ಹುಸೇನಪ್ಪ, ಈಗ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಆಸಕ್ತ ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಎಲ್ಲಾ ವಿಷಯಗಳ ಪಾಠವನ್ನ ಉಚಿತವಾಗಿ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ರಾತ್ರಿ ಪಾಳಯದಲ್ಲೇ ಕೆಲಸ ಮಾಡುತ್ತಿರೋ ಹುಸೇನಪ್ಪ ಬೆಳಗ್ಗೆ ಹಾಗೂ ಸಂಜೆ ಸುಮಾರು 200 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸುತ್ತಿದ್ದಾರೆ.
Advertisement
ನಾಲ್ಕು ವರ್ಷಗಳ ಹಿಂದೆ ಗುರು ಕರಿಯರ್ ಅಕಾಡೆಮಿ ಹೆಸರಲ್ಲಿ ಸಂಸ್ಥೆ ಹುಟ್ಟುಹಾಕಿದ್ದು, ತರಬೇತಿ ನೀಡುತ್ತಿದ್ದಾರೆ. ಇಲ್ಲಿ ಕಲಿತ ಹಲವರು ಈಗ ಸರ್ಕಾರಿ ನೌಕರರಾಗಿದ್ದಾರೆ. ಇವರ ಜೊತೆ ತಾನೂ ಓದಿ ಸಿವಿಲ್ ಪಿಎಸ್‍ಐ ಪರೀಕ್ಷೆಯಲ್ಲಿ ಹೈದರಾಬಾದ್ ಕರ್ನಾಟಕ ಭಾಗದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ.
Advertisement
ತರಗತಿಯಲ್ಲಿನ ಪಾಠ ಮಾತ್ರವಲ್ಲದೆ ವಾಟ್ಸಪ್ ಗ್ರೂಪ್ ಮೂಲಕವೂ ಉಪಯುಕ್ತ ಮಾಹಿತಿಗಳನ್ನ ಹುಸೇನಪ್ಪ ಕೊಡುತ್ತಿದ್ದಾರೆ.
Advertisement
Advertisement