– ಊಟ, ವಸತಿ ಜೊತೆ ಅಕ್ಷರ ದಾಸೋಹವೂ ಇಲ್ಲೇ!
ಹುಬ್ಬಳ್ಳಿ: ಇಂದಿನ ಕಾಲದಲ್ಲಿ ನಿಸ್ವಾರ್ಥ ಸೇವೆ ಅನ್ನೋದೇ ವಿರಳವಾಗ್ತಿದೆ. ಆದ್ರೆ ಹುಬ್ಬಳ್ಳಿಯಲ್ಲೊಬ್ಬರು ಕಳೆದ 25 ವರ್ಷಗಳಿಂದ ನೂರಾರು ಬುದ್ಧಿಮಾಂದ್ಯ ಮಕ್ಕಳ ಪಾಲಿಗೆ ಆಶಾಕಿರಣವಾಗಿದ್ದಾರೆ. ಊಟದ ಜೊತೆ ವಸತಿ ಕೊಟ್ಟು ಅಕ್ಷರ ದಾಸೋಹ ಮಾಡ್ತಿದ್ದಾರೆ ಇಂದಿನ ನಮ್ಮ ಪಬ್ಲಿಕ್ ಹೀರೋ.
Advertisement
ಇಲ್ಲಿರುವ ಮಕ್ಕಳನ್ನು, ದೊಡ್ಡವರನ್ನ ನೋಡಿದ್ರೆ ಎಂಥವರಿಗೂ ನೋವಾಗದೇ ಇರದು. ಒಂದಲ್ಲಾ ಒಂದು ರೀತಿಯಲ್ಲಿ ಹೆತ್ತವರಿಗೆ ಹಾಗೂ ಸಮಾಜಕ್ಕೆ ಬೇಡವಾದವರು. ಇಂಥ ನೂರಾರು ಜನರಿಗೆ ಊಟ, ವಸತಿ ನೀಡಿ ಅಕ್ಷರ ಕಲಿಸುತ್ತಿದ್ದಾರೆ ನಮ್ಮ ಪಬ್ಲಿಕ್ ಹೀರೋ ಡಾಕ್ಟರ್ ಜಗದೀಶ್ ಕೆ ಹಿರೇಮಠ. ಮೂಲತಃ ಹುಬ್ಬಳ್ಳಿ ನಿವಾಸಿಯಾದ ಇವರು ಕಳೆದ 24 ವರ್ಷಗಳ ಹಿಂದೆ ಗೋಪನಕೊಪ್ಪದಲ್ಲಿ ಮನೋವಿಕಾಸ ಎಂಬ ವಿಶೇಷ ಸಂಸ್ಥೆಯನ್ನು ಸ್ಥಾಪನೆ ಮಾಡಿ ಬುದ್ಧಿಮಾಂದ್ಯ ಮಕ್ಕಳ ಪೋಷಣೆ ಮಾಡುತ್ತಿದ್ದಾರೆ.
Advertisement
28 ವರ್ಷಗಳ ಹಿಂದೆ ಹಿರೇಮಠ್ ಇವರಿಗೆ ಜನಿಸಿದ ಮಗಳು ವೀಣಾ ಬುದ್ಧಿಮಾಂದ್ಯೆ ಆಗಿದ್ದಳು. 5 ವರ್ಷದವಳಿದ್ದಾಗ ಅಕಾಲಿಕ ಮರಣಕ್ಕೆ ತುತ್ತಾದಳು. ಮಗಳ ಅಗಲಿಕೆಯಿಂದ ನೊಂದ ಹಿರೇಮಠ್ ಬುದ್ಧಿಮಾಂದ್ಯ ಮಕ್ಕಳ ಪೋಷಣೆಗೆ ದೃಢ ನಿರ್ಧಾರ ಮಾಡಿದ್ರು. ಕಳೆದ 24 ವರ್ಷಗಳಲ್ಲಿ ಅನೇಕ ಬುದ್ಧಿಮಾಂದ್ಯ ಮಕ್ಕಳು ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಬಡವರ ಮಕ್ಕಳಿಗೆಲ್ಲಾ ಇಲ್ಲಿ ಉಚಿತ ಚಿಕಿತ್ಸೆ ಕೊಡ್ತಾರೆ.
Advertisement
ಯಾವ ಸ್ವಾರ್ಥವಿಲ್ಲದೇ ಬುದ್ಧಿಮಾಂದ್ಯ ಮಕ್ಕಳ ಭವಿಷ್ಯ ಉಜ್ವಲಗೊಳಿಸುತ್ತಿರುವ ಹಿರೇಮಠ್ ಅವರಿಗೆ ನಮ್ಮದೊಂದು ಸಲಾಂ.