ಕೊಪ್ಪಳ: ಇಂದು ವಾಟ್ಸಪ್ ಮೊಬೈಲ್ ಉಳ್ಳವರ ಅವಿಭಾಜ್ಯ ಅಂಗವಾಗಿದೆ. ಕೊಪ್ಪಳ ಜಿಲ್ಲೆಯ ಯುವಕರ ಬಳಗವೊಂದು ವಾಟ್ಸಪ್ ನಿಂದ ಜನರ ಜೀವ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದ ಪವರ್‍ಫುಲ್ ಕಮ್ಯುನಿಕೇಷನ್ ಆ್ಯಪ್ ಆಗಿರೋ ವಾಟ್ಸಪನ್ನೇ ಕೊಪ್ಪಳದ ಈ ಯುವಕರ ಬಳಗ ಸಂಜೀವಿನಿಯಂತೆ ಬಳಸಿಕೊಳ್ತಿದೆ.
ಕೊಪ್ಪಳ ನಗರದ ನಿವಾಸಿ ಮಂಜುನಾಥ್, `ಕೊಪ್ಪಳ ರಕ್ತ ದಾನಿಗಳ ಬಳಗ’ ಅಂತ ಗ್ರೂಪ್ ಮಾಡಿಕೊಂಡಿದ್ದಾರೆ. ರಕ್ತದ ಅಗತ್ಯತೆ ಇರೋವ್ರಿಗೆ ಈ ಗ್ರೂಪ್ ಮೂಲಕ ತುರ್ತಾಗಿ ಸುಲಭವಾಗಿ ಉಚಿತವಾಗಿ ರಕ್ತ ಪೂರೈಕೆ ಮಾಡ್ತಿದ್ದಾರೆ.
Advertisement
10 ತಿಂಗಳ ಹಿಂದೆ ಕ್ರಿಯೆಟ್ ಆದ ಈ ಗ್ರೂಪ್ ಈಗ ಕೇವಲ ಕೊಪ್ಪಳ ಮಾತ್ರವಲ್ಲ ನೆರೆಯ 6 ಜಿಲ್ಲೆಗಳಲ್ಲೂ ಕಾರ್ಯನಿರ್ವಹಿಸುವಂತೆ ಮಾಡಿದ್ದಾರೆ. ಯಾವ ಸಮಯದಲ್ಲಿ ಬೇಕಾದರೂ ರಕ್ತ ಪೂರೈಸ್ತಾರೆ. ಈ ಯುವ ಸಮೂಹದ ಕಾರ್ಯಕ್ಕೆ ರಕ್ತ ಪಡೆದು ಜೀವ ಉಳಿಸಿಕೊಂಡವರು ಕೃತಜ್ಞತೆ ಹೇಳ್ತಾರೆ. ವಾಟ್ಸಾಪ್ ಮೂಲಕ ಯುವಕರು ಈ ವಿಭಿನ್ನ ಕಾರ್ಯಕ್ಕೆ ಮುಂದಾಗಿರೋದು ಶ್ಲಾಘನಾರ್ಹವಾಗಿದೆ.