ಚಿತ್ರದುರ್ಗ: ಈ ಬೇಸಿಗೆಯಲ್ಲಿ ನೀರಿಲ್ಲದೇ ಎಷ್ಟೋ ಅಡಿಕೆ, ತೆಂಗಿನ ತೋಟಗಳು ಒಣಗಿ ಹೋಗಿವೆ. ಆದರೆ ಚಿತ್ರದುರ್ಗದ ರೈತರೊಬ್ಬರು ಕೇವಲ ಮುಕ್ಕಾಲು ಇಂಚು ನೀರಿನಲ್ಲೇ ಸಮಗ್ರ ಕೃಷಿ ಮಾಡ್ತಿದ್ದಾರೆ. ಅಡಿಕೆ, ದಾಳಿಂಬೆ ಸೇರಿದಂತೆ ಸೊಂಪಾಗಿ ಮರ ಗಿಡಗಳನ್ನ ಬೆಳೆಸುತ್ತಿದ್ದಾರೆ.
Advertisement
ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆಯ ಗ್ರಾಮದ ರೈತ ದಯಾನಂದ್ ಮೂರ್ತಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ದಯಾನಂದ್ ಅವರು ಹನಿ ನೀರಾವರಿ ಮೂಲಕ ಕೃಷಿ ಮಾಡ್ತಿದ್ದಾರೆ. ಕೇವಲ ಮುಕ್ಕಾಲು ಇಂಚು ನೀರಿನ ಬೋರ್‍ವೆಲ್‍ನಲ್ಲಿ 5 ಎಕರೆಯಲ್ಲಿ ಕೃಷಿ ಮಾಡ್ತಿದ್ದಾರೆ. ಅಡಿಕೆ, ಬಾಳೆ, ದಾಳಿಂಬೆ, ನುಗ್ಗೆ, ಮಾವು, ತೆಂಗು, ಸಪೋಟ ಗಿಡ ಬೆಳೆದಿದ್ದಾರೆ.
Advertisement
ಟೈಮ್‍ಟೇಬಲ್ ಪ್ರಕಾರ ಗಿಡಗಳಿಗೆ ಬಾಟಲಿ ಮೂಲಕ ರಂಧ್ರ ಮಾಡಿ ನೀರುಣಿಸ್ತಾರೆ. ಬೇಲಿಯ ನಡುವೆ ಸ್ವಿಲ್ವರ್, ಹೆಬ್ಬೇವು, ಹೊಂಗೆ, ಟೀಕ್, ಶ್ರೀಗಂಧದ ಗಿಡ ನೆಟ್ಟಿದ್ದಾರೆ. ದಾಳಿಂಬೆ ಕಾಪಾಡಿಕೊಳ್ಳಲು ಅಲ್ಲಲ್ಲಿ ಪಕ್ಷಿಗಳಿಗೆಂದೇ ಬಾಳೆಗೊನೆ, ಪಪ್ಪಾಯಿ ಹಣ್ಣುಗಳನ್ನ ಹಾಗೆ ಬಿಟ್ಟಿದ್ದಾರೆ. ಪ್ರಾಣಿ ಪಕ್ಷಿಗಳಿಗಾಗಿ ಅಲ್ಲಲ್ಲಿ ಪ್ಲಾಸ್ಟಿಕ್ ಬಟ್ಟಲುಗಳನ್ನ ಇಟ್ಟಿದ್ದಾರೆ.
Advertisement
Advertisement
ಎಲ್‍ಎಲ್‍ಬಿ ಓದಿರೋ ದಯಾನಂದಮೂರ್ತಿ ಬೆಂಗಳೂರಲ್ಲಿ ವಾಚ್‍ಮನ್ ಆಗಿದ್ರು. ಆದರೆ ಆ ಕೆಲಸ ಬಿಟ್ಟು ಬಂದು ಒಂದು ರೂಪಾಯಿ ಸಾಲ ಕೂಡಾ ಮಾಡದೇ ಸಮಗ್ರ ಕೃಷಿಯಲ್ಲಿ ತೊಡಗಿದ್ದಾರೆ. ದಯಾನಂದಮೂರ್ತಿ ಅವರ ವಿಭಿನ್ನ ಕೃಷಿಗೆ ಹಲವು ಪ್ರಶಸ್ತಿಗಳು, ಗೌರವಗಳು ಹುಡುಕಿಕೊಂಡಿ ಬಂದಿವೆ. ವಿದ್ಯುತ್ ಸಮಸ್ಯೆ, ಕೂಲಿ ಕಾರ್ಮಿಕರ ತೊಂದರೆ, ಬೆಲೆ ಕುಸಿತದ ನಡುವೆಯೇ ದಯಾನಂದಮೂರ್ತಿ ಮಾದರಿ ರೈತನಾಗಿ ಕಾಣಿಸುತ್ತಾರೆ.
https://www.youtube.com/watch?v=mUWR61s4cXs