ಗದಗ: ಒಂದು ಕಡೆ ರೈತರು ದಂಗೆ ಎದ್ದಿದ್ದಾರೆ. ಆದರೆ ಎಂಜಿನಿಯರಿಂಗ್ ಓದಿದ್ದರೂ ಈಗ ಕೃಷಿ ತಜ್ಞರಾಗಿ ಸಾವಯವ ಕೃಷಿ ಪದ್ಧತಿ ಮೂಲಕ ಪಬ್ಲಿಕ್ ಹೀರೋ ಎಲ್ಲರ ಗಮನ ಸೆಳೆದಿದ್ದಾರೆ
ಹೌದು. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗನಹಳ್ಳಿಯ ಬಸವರಾಜ್ ಅವರು ಓದಿದ್ದು ಎಂಜಿನಿಯರಿಂಗ್. ಆದರೂ ಸಾವಯುವ ಕೃಷಿ ಮಾಡುವ ಮೂಲಕ ಮಾದರಿಯಾಗಿದ್ದಾರೆ. 12 ವರ್ಷಗಳಿಂದ ತಮ್ಮ 7 ಎಕರೆ ಬಂಜರು ಭೂಮಿಯಲ್ಲಿ ಸಿರಿಧಾನ್ಯ, ಬಗೆಬಗೆಯ ಹಣ್ಣು ಸೇರಿದಂತೆ 20ಕ್ಕೂ ಹೆಚ್ಚು ಬೆಳೆ ಬೆಳೆದಿದ್ದಾರೆ.
Advertisement
Advertisement
ಕೇವಲ ತಮ್ಮ ಸ್ವಾರ್ಥ ಯೋಚಿಸದೇ ಊರು, ತಾಲೂಕು, ಜಿಲ್ಲೆ ಅಷ್ಟೇ ಅಲ್ಲದೇ ಹೊರರಾಜ್ಯದ ತುಂಬೆಲ್ಲ ಓಡಾಡಿ ಕೃಷಿ ಆವಿಷ್ಕಾರದ ಬಗ್ಗೆ ರೈತರಿಗೆ ಉಚಿತವಾಗಿ ತಿಳುವಳಿಕೆ ನೀಡುತ್ತಾರೆ. ಬಸನವರಾಜ್ ನಾವಿ ಅದೆಷ್ಟೋ ರೈತರ ಬಾಳಿಗೆ ಊರುಗೋಲಾಗುವ ಮೂಲಕ ಕೃಷಿಯಲ್ಲಿ ಬೆಳಕಾಗಿದ್ದಾರೆ.
Advertisement
ತಮ್ಮ ನೇತ್ರಾವತಿ ಫಾರ್ಮ್‍ಹೌಸ್‍ನಲ್ಲಿ ಎರೆಹುಳು ಗೊಬ್ಬರ, ಎರೆಜಲ, ಜೀವಾಮೃತ, ಪಂಚಗವ್ಯ, ಸಸ್ಯಜನ್ಯ ಕೀಟನಾಶಕ, ನೀಮಾಸ್ತ್ರ, ಅಗ್ನಿ ಅಸ್ತ್ರ, ಬೇವಿನ ಎಣ್ಣೆ, ಬೇವಿನ ಹಿಂಡಿ, ಘನ ಜೀವಾಮೃತ, ತಿಪ್ಪೆಗೊಬ್ಬರ ಮೌಲ್ಯವರ್ಧನೆ, ಜೀವಚೈತನ್ಯ ಕಾಂಪೋಸ್ಟ್, ಅಜೋಲಾ ಹೀಗೆ ಅನೇಕ ಔಷಧಿಯನ್ನು ತಾವೇ ತಯಾರಿಸುತ್ತೇವೆ ಎಂದು ಬಸವರಾಜ್ ನಾವಿ ಹೇಳಿದ್ದಾರೆ.
Advertisement
ಗದಗ ಜಿಲ್ಲೆಯ ಸುಗನಹಳ್ಳಿ ಬಸವರಾಜ ಅವರ ನೇತ್ರಾವತಿ ಫಾರ್ಮ್ ಹೌಸ್ ಅಂದ-ಚಂದದ ರೈತಕುಕಲದ ಶಿಕ್ಷಣ ಶಾಲೆಯಂತಿದೆ. ಖಾಸಗಿಯ ಕಂಪನಿಯಲ್ಲಿ ಐದು ವರ್ಷ ಕೆಲಸ ಮಾಡುತ್ತಿದ್ದ ಬಸವರಾಜ್ ಅವರು, ಕೃಷಿಯಲ್ಲಿ ಏನಾದ್ರೂ ಸಾಧನೆಮಾಡಬೇಕು, ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಊರುಗೊಲಾಗಬೇಕೆಂದು ನಿರ್ಧರಿಸಿ. ಇಂದು ಕೃಷಿಯಲ್ಲಿ ಆಸಕ್ತಿ ತಾಳಿ ಇದೀಗ ಮಾದರಿಯಾಗಿದ್ದಾರೆ. ವಾರ್ಷಿಕ ಹತ್ತಾರು ಲಕ್ಷ ಆದಾಯ ಗಳಿಸುತ್ತಿರುವ ಬಸವರಾಜ್ ಅವರಂತೆ ಇತರೆ ರೈತರು ಆದಾಯ ಗಳಿಸಬೇಕು ಅಂತಿದ್ದಾರೆ ಎಂದು ಸ್ಥಳೀಯ ಚಂದ್ರಶೇಖರ್ ಹೇಳಿದ್ದಾರೆ.
ಇವರ ನಿಸ್ವಾರ್ಥ ಸೇವೆಗೆ ರಾಜ್ಯವಷ್ಟೆ ಅಲ್ಲದೇ ಹೊರ ರಾಜ್ಯದಿಂದಲೂ ಅನೇಕ ಪ್ರಶಸ್ತಿ-ಪುರಸ್ಕಾರಗಳು ಬಂದಿವೆ.
https://www.youtube.com/watch?v=C7q-F9ELFaY
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews