ಶಿವಮೊಗ್ಗ: ಸರ್ಕಾರಿ ಕೆಲ್ಸ ದೇವರ ಕೆಲಸ ಅಂತ ಬಹುತೇಕರು ಕಚೇರಿಯ ನೈರ್ಮಲ್ಯೀಕರಣಕ್ಕೆ ಆದ್ಯತೆ ಕೊಡಲ್ಲ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ಶಿವಮೊಗ್ಗದ ಬಸವಲಿಂಗಪ್ಪ ಅವರು ಸರ್ಕಾರಿ ಕಚೇರಿಗಳನ್ನ ಹುಡುಕಿ- ಹುಡುಕಿ ಸ್ವಚ್ಛಗೊಳಿಸ್ತಿದ್ದಾರೆ. ಈ ಮೂಲಕ ಅಧಿಕಾರಿಗಳನ್ನೂ ನಾಚಿಸುವಂತೆ ಮಾಡಿದ್ದಾರೆ.
- Advertisement -
ಬಸವಲಿಂಗಪ್ಪ ಅವರು ಸರ್ಕಾರಿ ಕಚೇರಿಗಳಿಗೆ, ವಕೀಲರಿಗೆ ಇನ್ನಿತರರಿಗೆ ಸ್ಟಾಂಪ್‍ಪೇಪರ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ವಿಶ್ರಾಂತಿ ಪಡೆಯದೆ ಬೆಳಗಿನ ಜಾವ 5.30ಕ್ಕೆ ಶಿವಮೊಗ್ಗದ ಡಿಸಿ ಕಾಂಪ್ಲೆಕ್ಸ್‍ಗೆ ಬಂದು 9.30ರವರೆಗೂ ಕೋರ್ಟ್ ಕಾಂಪ್ಲೆಕ್ಸ್, ಜಯನಗರ ಪೊಲೀಸ್ ಠಾಣೆ, ಆರ್‍ಟಿಓ ಕಚೇರಿ ಸೇರಿ ಹಲವಾರು ಸರ್ಕಾರಿ ಕಚೇರಿಗಳ ಆವರಣ ಸ್ವಚ್ಛ ಮಾಡುತ್ತಾರೆ.
- Advertisement -
- Advertisement -
ನಾನಿರುವ ಸ್ಥಳ ಸ್ವಚ್ಛವಾಗಿರಬೇಕು ಅಂತ ಬಯಸೋ ಬಸವಲಿಂಗಪ್ಪ ಅವರು ಕಳೆದ 3 ವರ್ಷಗಳಿಂದ ಈ ಕಾರ್ಯವನ್ನ ಮಾಡ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೇ ಈ ಪ್ರದೇಶದಲ್ಲಿ 72 ವಿಶೇಷ ತಳಿಯ ಮಾವಿನ ಸಸಿಗಳನ್ನು ನೆಟ್ಟು, ಖಾಲಿ ಬಾಟಲಿಗಳಲ್ಲಿ ನೀರುಣಿಸಿ ಪೋಷಿಸುತ್ತಿದ್ದಾರೆ.
- Advertisement -
ಬಸಲಿಂಗಪ್ಪರ ಪುತ್ರಿ ಅಮೆರಿಕದಲ್ಲಿದ್ರೆ, ಮಗ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿದ್ದಾರೆ. ತಾವು ಬಾಡಿಗೆ ಮನೆಯಲ್ಲಿದ್ದರೂ ತಮ್ಮ ಕಾರ್ಯಕ್ಕೆ ಹಿನ್ನಡೆಯಾಗಿಲ್ಲ ಎಂದು ಬಸಲಿಂಗಪ್ಪ ಹೇಳುತ್ತಾರೆ.