ಚಿಕ್ಕಬಳ್ಳಾಪುರ: ಮೇಷ್ಟ್ರುಗಳಿಗೆ ಶನಿವಾರ ಮತ್ತು ಭಾನುವಾರ ಬಂದ್ರೆ ಸಾಕು ಸ್ವಲ್ಪ ರಿಲ್ಯಾಕ್ಸ್ ಆಗ್ತಾರೆ. ಆದರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಮಾತ್ರ ಶನಿವಾರ ಮತ್ತು ಭಾನುವಾರ ಎರಡು ದಿನ ಬರೀ ಸಸಿ ನೆಡೋದ್ರಲ್ಲೇ ಖುಷಿ ಕಾಣ್ತಾರೆ.
Advertisement
ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಅನುದಾನಿತ ಪಂಚಗಿರಿ ಬೋಧನಾ ಪ್ರೌಢ ಶಾಲೆಯ ಶಿಕ್ಷಕ ಆನಂದ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಪರಿಸರದ ಬಗ್ಗೆ ತುಂಬಾ ಕಾಳಜಿ ಇರೋ ಆನಂದ್ ಮೇಷ್ಟ್ರು ಜಿಲ್ಲೆಯ ಯಾವುದೇ ಮೂಲೆಯಲ್ಲಿ ಗಿಡ ನೆಡಬೇಕು ಅಂದ್ರು ರೆಡಿ. ಯಾವುದೇ ಹಬ್ಬ ಹರಿದಿನ ಇರಲಿ, ಹುಟ್ಟುಹಬ್ಬವೇ ಇರಲಿ, ಕೊನೆಗೆ ಯಾರಾದ್ರೂ ಆಪ್ತರು ಸತ್ತರೂ ಅವರ ಸಮಾಧಿ ಬಳಿ ನೆನಪಿಗಾಗಿ ಒಂದು ಗಿಡ ನೆಡ್ತಾರೆ.
Advertisement
Advertisement
ಶನಿವಾರ-ಭಾನುವಾರ ಹಾಗೂ ರಜಾ ದಿನ ಬಂದ್ರೆ ಬರೀ ಗಿಡ ನೆಡೋದೇ ಇವರ ಕೆಲಸ. ಕಳೆದ 20 ವರ್ಷಗಳಲ್ಲಿ ಆನಂದ್ ಮೇಷ್ಟ್ರು ಸಾವಿರಾರು ಗಿಡ ನೆಟ್ಟು ಬೆಳೆಸಿದ್ದಾರೆ. ಗುಡಿಬಂಡೆಯಲ್ಲಿ ವಾಸವಿರೋ ಇವರು ಪಟ್ಟಣದ ಮೂರು ಪಾರ್ಕ್‍ಗಳಲ್ಲಿ ಮಾವು, ನೇರಳೆ, ಹಲಸು, ಸೀಬೆ, ದಾಳಿಂಬೆ ಹಾಗೂ ಹೂವಿನ ಗಿಡಗಳನ್ನ ನೆಟ್ಟಿದ್ದಾರೆ.
Advertisement
ಆನಂದ್ ಮೇಷ್ಟ್ರ ಸಮಾಜಮುಖಿ ಕಾರ್ಯಕ್ಕೆ ರಾಜ್ಯ ಪರಿಸರ ಪ್ರಶಸ್ತಿ, ಸಾಲು ಮರದ ತಿಮ್ಮಕ್ಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಇವರ ಪರಿಸರ ಕಾಳಜಿ ಸಾವಿರಾರು ಮಂದಿಗೆ ಸ್ಫೂರ್ತಿಯಾಗಲಿ.
https://www.youtube.com/watch?v=Ou05SU38O8M