ಬೆಂಗಳೂರು: ನಗರದ ಉಲ್ಲಾಳ ರಸ್ತೆಯಲ್ಲಿ (Ullala Road) ನಡೆದಿದ್ದ ಹಿಟ್ ಅಂಡ್ ರನ್ ಕೇಸ್ (Hit And Run Case) ಸಂಬಂಧ ಮತ್ತಷ್ಟು ಸ್ಫೋಟಕ ಸತ್ಯಗಳು ಹೊರಬರುತ್ತಿವೆ. ಹಿಟ್ ಅಂಡ್ ರನ್ ಕೇಸ್ ಸಂಬಂಧ ಪ್ರತ್ಯಕ್ಷ ದರ್ಶಿಗಳು, ಸ್ಥಳದಲ್ಲಿದ್ದ ಸಿಸಿಟಿವಿಗಳು ಆಸಲಿಗೆ ಘಟನೆ ಏನಾಯ್ತು ಎನ್ನುವುದರ ಬಗ್ಗೆ ಮಾಹಿತಿಗಳನ್ನು ಬಿಚ್ಚಿಟ್ಟಿವೆ.
ಮೊದಲ ಬಾರಿಗೆ ಉಲ್ಲಾಳ ಜಂಕ್ಷನ್ನಲ್ಲಿ ನೇಕ್ಸಾನ್ ಕಾರು ಚಾಲಕಿ ಪ್ರಿಯಾಂಕಾ, ಸ್ವಿಫ್ಟ್ ಕಾರು ಚಾಲಕ ದರ್ಶನ್ ನಡುವೆ ಮಾತಿನ ಚಕಮಕಿ ಆಗಿತ್ತು. ಅಲ್ಲಿಂದ ಹೋಗುವ ವೇಳೆ ಸ್ವಿಫ್ಟ್ ಕಾರು ಚಾಲಕ ದರ್ಶನ್ಗೆ ಪ್ರಿಯಾಂಕಾ ಮಧ್ಯದ ಬೆರಳು ತೋರಿಸಿ ಎಸ್ಕೇಪ್ ಆಗಿದ್ದಳು. ಈ ವೇಳೆ ಹಿಂಬಾಲಿಸಿದ ದರ್ಶನ್ ಕಾರನ್ನು ಅಡ್ಡಗಟ್ಟಿ ಮತ್ತೆ ಪ್ರಶ್ನೆ ಮಾಡಿದ್ದ.
Advertisement
Advertisement
ಬಳಿಕ ಮತ್ತೆ ಮಾತಿನ ಚಕಮಕಿ ಮುಂದುವರಿದು ದರ್ಶನ್, ಪ್ರಿಯಾಂಕಾಳ ನೆಕ್ಸಾನ್ ಕಾರಿನ ಮುಂದೆ ಅಡ್ಡಗಟ್ಟಿ ನಿಂತಿದ್ದಾನೆ. ಈ ವೇಳೆ ದರ್ಶನ್ ಕಾರಿನ ಮುಂಭಾಗ ಬಂದಿದ್ದು, ಬದಿಗೆ ಸರಿಯದೇ ಹೋಗಿದ್ದರಿಂದ ಆಕೆ ಕಾರು ಚಾಲನೆ ಮಾಡುವ ವೇಳೆ ಬಾನೆಟ್ (Bonnet) ಮೇಲೆ ಹತ್ತಿದ್ದಾನೆ. ಪ್ರಿಯಾಂಕಾ ಕಾರು ನಿಲ್ಲಿಸದೇ ವೇಗವಾಗಿ ಸುಮಾರು 3 ಕಿ.ಮೀ ದೂರ ಚಾಲನೆ ಮಾಡಿದ್ದಾಳೆ. ಇದನ್ನು ನೋಡಿದ ಸಾರ್ವಜನಿಕರು ಕಾರು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಆಕೆಗೆ ಎಷ್ಟೇ ಹೇಳಿದರೂ ಪ್ರಿಯಾಂಕಾ ಕಾರು ನಿಲ್ಲಿಸದೇ ಹತ್ತಾರು ಹಂಪ್ಗಳನ್ನು ಎಗರಿಸಿಕೊಂಡು ಹೋಗಿದ್ದಾಳೆ. ಇದನ್ನೂ ಓದಿ: ಜಮ್ಮುವಿನಲ್ಲಿ ಅವಳಿ ಬ್ಲಾಸ್ಟ್- ಭಾರತ್ ಜೋಡೋ ಯಾತ್ರೆಗೆ ಹೈಅಲರ್ಟ್
Advertisement
Advertisement
ಇದರಿಂದ ಕೋಪಗೊಂಡ ಸಾರ್ವಜನಿಕರು ಮಂಗಳೂರು ಪಿಯೂ ಕಾಲೇಜ್ ಬಳಿ ಕಾರನ್ನು ತಡೆದು ಚಾಲಕಿ ಪ್ರಿಯಾಂಕಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲ್ಲು, ದೊಣ್ಣೆಗಳಿಂದ ಕಾರಿನ ಗ್ಲಾಸ್ ಅನ್ನು ಒಡೆದಿದ್ದಾರೆ. ಇದನ್ನೂ ಓದಿ: ಬಾಂಬ್ ಬೆದರಿಕೆ – ಮಾಸ್ಕೋದಿಂದ ಗೋವಾ ಬರಬೇಕಿದ್ದ ವಿಮಾನ ಉಜ್ಬೇಕಿಸ್ತಾನದಲ್ಲಿ ಲ್ಯಾಂಡ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k