– ಸಿಎಂ ವಿರುದ್ಧ ಸಾರ್ವಜನಿಕರು, ಸಂಘಟಿಕರು ಪ್ರತಿಭಟಿಸಿ ಧಿಕ್ಕಾರ
ಗದಗ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ ಮುದ್ರಣಾ ಕಾಶಿಗೆ ಮೊದಲ ಬಾರಿಗೆ ಆಗಮಿಸಿದರು. ಈ ವೇಳೆ ಪ್ರತಿಭಟನೆ ಮೂಲಕ ಸಿಎಂ ಅವರನ್ನು ಸ್ವಾಗತಿಸಿದಂತಿತ್ತು. ಜಿಮ್ಸ್ ಆಸ್ಪತ್ರೆ ಬಳಿ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಬೊಮ್ಮಾಯಿ ಅವರು ಆಗಮಿಸಿದ್ದು, ಈ ವೇಳೆ ಮನವಿ ನೀಡಲು ಬಂದವರು ಗಲಾಟೆ ಮಾಡಿದ್ದಾರೆ.
Advertisement
ಗಲಾಟೆಗೆ ಕಾರಣವೇನು?
ಅನೇಕ ಜನ ಸಾರ್ವಜನಿಕರು, ಸಂಘಟಿಕರು ತಮ್ಮ ಸಮಸ್ಯೆಗಳನ್ನು ಹೊತ್ತು ಮನವಿ ನೀಡಲು ಬಂದಿದ್ದರು. ಈ ವೇಳೆ ಬೊಮ್ಮಾಯಿ ಅವರು ಒಂದೆರೆಡು ಮನವಿ ಸ್ವೀಕರಿಸಿ ವೇದಿಕೆ ಕಡೆಗೆ ನಡೆದರು. ಸಚಿವ ಸಿ.ಸಿ ಪಾಟೀಲ್ ಮನವಿ ಸ್ವೀಕರಿಸಲು ಮುಂದಾದರು. ಈ ವೇಳೆ ಸಾರ್ವಜನಿಕರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಶಿರಾದಲ್ಲಿ ಅದ್ಧೂರಿ ಮೆರವಣಿಗೆ ಮಾಡಿ ಗಣೇಶ ವಿಸರ್ಜನೆ
Advertisement
Advertisement
ಮನವಿ ವೇಳೆ ಸಾರ್ವಜನಿಕರಿಂದ ನೂಕು ನುಗ್ಗಲು ಉಂಟಾಯಿತು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರು ನಡುವೆ ಮಾತಿನ ಚಕಮಕಿ ನಡೆಯಿತು. ಕಾರ್ಯಕ್ರಮ ವೇದಿಕೆ ಪಕ್ಕದಲ್ಲೇ ಸಿಎಂ ವಿರುದ್ಧ ಸಾರ್ವಜನಿಕರು, ಸಂಘಟಿಕರು ಪ್ರತಿಭಟಿಸಿ ಧಿಕ್ಕಾರ ಕೂಗಿದರು. ನಂತರ ಜಿಲ್ಲಾಧಿಕಾರಿ ಸುಂದರೇಶ್ ಬಾಬು ಹಾಗೂ ಎಸ್‍ಪಿ ಯತೀಶ್ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು.
Advertisement
ಸಿಎಂ ಅವರೇ ನಮ್ಮ ಮನವಿ ಸ್ವೀಕರಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಕಾರ್ಯಕ್ರಮ ಮುಗಿದ ನಂತರ ಬಸವರಾಜ್ ಬೊಮ್ಮಾಯಿ ಅವರು ಎಲ್ಲರ ಮನವಿ ಸ್ವೀಕರಿಸಿದರು. ಇದನ್ನೂ ಓದಿ: ಐತಿಹಾಸಿಕ ಮಂಟಪಗಳು, ಶಾಸನಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಕೊಪ್ಪಳ ಜಿಲ್ಲಾಧಿಕಾರಿ
ಸಂಸದ ಶಿವಕುಮಾರ್ ಉದಾಸಿ, ಶಾಸಕ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಎಸ್.ವಿ ಸಂಕನೂರ, ಜಿಲ್ಲಾಧಿಕಾರಿ ಎಮ್.ಸುಂದರೇಶ್ ಬಾಬು, ಎಸ್‍ಪಿ ಎನ್ ಯತೀಶ್ ಉಪಸ್ಥಿತರಿದ್ದರು.