ಬೆಂಗಳೂರು: ಇನ್ನು ಮುಂದೆ ಪಿಯು ಪ್ರಶ್ನೆ ಪತ್ರಿಕೆ ಪ್ರಿಂಟ್ ಆಗಲ್ಲ. ಬದಲಿಗೆ ಹೊಸ ವಿಧಾನದ ಮೂಲಕ ಪಿಯು ಬೋರ್ಡ್ ಎಕ್ಸಾಮ್ ನಡೆಸಲು ತಯಾರಿ ನಡೆಸಿದೆ.
ಹೌದು ಅಲ್ಲಿ ಪೇಪರ್ ಲೀಕ್ ಆಯ್ತು. ಇಲ್ಲಿ ಆಯ್ತು ಎರಡು ಪೇಪರ್ ಲೀಕಾಗಿದೆಯಂತೆ ಅನ್ನೋ ಸುದ್ದಿಗೆ ಇದೀಗ ಪಿಯು ಬೋರ್ಡ್ ಬ್ರೇಕ್ ಹಾಕಲು ಹೊರಟಿದೆ. ಇನ್ನು ಪಿಯು ಪರೀಕ್ಷೆಗಳನ್ನು ಹೈಫೈ ಮಾಡಲು ಹೊರಟಿರುವ ಇಲಾಖೆ ತಂತ್ರಜ್ಞಾನದ ಮೊರೆಹೋಗಿದೆ.
Advertisement
ಪ್ರಸಕ್ತ ವರ್ಷದಿಂದ 5 ಲೆವೆಲ್ ಐ.ಪಿ- ಇಂಟರ್ ನೆಟ್ ಪ್ರೊಟೋಕಾಲ್ ಸಿಸ್ಟಮ್ ಬಳಸಿ ಪಿಯು ಪರೀಕ್ಷೆಗಳನ್ನು ನಡೆಸಲು ಪ್ಲಾನ್ ಮಾಡಲಾಗಿದೆ. ಪಿಯು ಪರೀಕ್ಷೆಗೆ ಇನ್ನು ಮುಂದೆ ಪರೀಕ್ಷಾ ಕೇಂದ್ರಗಳಲ್ಲಿಯೇ ಪ್ರಶ್ನೆ ಪತ್ರಿಕೆಯನ್ನು ಪ್ರಿಂಟ್ ಮಾಡುವ ಹೊಸ ವಿಧಾನವನ್ನ ಅಳವಡಿಸಿಕೊಳ್ಳಲು ಮುಂದಾಗಿದ್ದು, ಈಗಾಗಲೇ ಒಂದು ಪರೀಕ್ಷಾ ಕೇಂದ್ರದಲ್ಲಿ ಪ್ರಯೋಗಿಕವಾಗಿ ಜಾರಿಗೆ ಸಹ ತಂದಿದ್ದಾರೆ.
Advertisement
5 ಲೆವಲ್ ಸೆಕ್ಯೂರಿಟಿ ಚೆಕ್:
Advertisement
1. ಪರೀಕ್ಷೆ ನಡೆಯುವ 1 ಗಂಟೆ ಮುಂಚೆ ಪ್ರಶ್ನೆ ಪತ್ರಿಕೆ ರವಾನೆ.
2. ಪರೀಕ್ಷಾ ದಿನ 9.30 ಕ್ಕೆ ಪ್ರಶ್ನೆ ಪತ್ರಿಕೆ ಪ್ರಿಂಟ್.
3. ಎಲ್ಲಾ ಆಫೀಸರ್ಸ್ ಗಳಿಗೂ ಬೇರೆ ಬೇರೆ ಪಾಸ್ ವರ್ಡ್.
4. ಪ್ರಶ್ನೆ ಪತ್ರಿಕೆ ಪ್ರಿಂಟ್ ತಗೆಯಲು ಫಿಂಗರ್ ಪ್ರಿಂಟ್ ಪಾಸ್ ವರ್ಡ್.
5. ಎಕ್ಸಾಮ್ ನಡೆಯೋಕು ಒಂದು ಗಂಟೆ ಮುಂಚೆ ಅಧಿಕಾರಿಗಳಿಗೆ ಪರೀಕ್ಷಾ ಕೇಂದ್ರದ ಮಾಹಿತಿ
Advertisement
ಈ ಪರೀಕ್ಷಾ ವಿಧಾನ ಯಶಸ್ವಿ ಮಾಡಲು ಹೈ ಎಂಡ್ ಕಂಪ್ಯೂಟರ್, ಪ್ರಿಂಟರ್‍ಗಳನ್ನ ಬಳಕೆ ಮಾಡಿಕೊಳ್ಳಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ ನೆಟ್‍ಗೆ ಸಮಸ್ಯೆಯಾಗದಂತೆ ಹೈಸ್ಪೀಡ್ ಇಂಟರ್ ನೆಟ್ ಸಹ ಅಳವಡಿಕೆಗೆ ಮುಂದಾಗಿದೆ. ಇದರ ಜೊತೆ ವಿದ್ಯುತ್ ಸಮಸ್ಯೆ ಉದ್ಭವವಾಗದಂತೆ ಮಿನಿ ಜನರೇಟರ್ ಬಳಕೆ ಮಾಡಿಕೊಳ್ಳಲು ಸಹ ನಿರ್ಧಾರ ಮಾಡಲಾಗಿದೆ. ಈ ಮೂಲಕ ಎಕ್ಸಾಮ್ ಶುರುವಾಗುವುದಕ್ಕೆ 30 ನಿಮಿಷಗಳ ಮೊದಲು ಪ್ರಶ್ನೆ ಪತ್ರಿಕೆಗಳನ್ನು ಪ್ರಿಂಟ್ ತಗೆಯುವ ಹೊಸ ವ್ಯವಸ್ಥೆಗೆ ಪಿಯು ಬೋರ್ಡ್ ಸಜ್ಜಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕಿ ಸಿ ಶಿಖಾ ತಿಳಿಸಿದ್ದಾರೆ.