ಬೆಂಗಳೂರು: ಸ್ಯಾಂಡಲ್‍ವುಡ್ ಅಂಗಳದಲ್ಲಿ ನಿರ್ದೇಶಕ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ವೆಂಕಟ್ ಭಾರಧ್ವಜ್ ಪ್ರತಿಭಾನ್ವಿತ ತಂಡದ ಚಿತ್ರವೊಂದಕ್ಕೆ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.
ವೆಂಕಟ್ ಭಾರಧ್ವಜ್ ಅವರ ‘ಅಮೃತ ಫಿಲ್ಮಂ ಸೆಂಟರ್’ ಬ್ಯಾನರ್ ನಡಿ ನಿರ್ಮಾಣವಾಗಿ ತೆರೆಗೆ ಬರಲು ಸಜ್ಜಾಗಿರುವ ಚಿತ್ರದ ಹೆಸರು ‘ರುಗ್ನ’. ಟೈಟಲ್ ಮೂಲಕವೇ ಕ್ಯೂರಿಯಾಸಿಟಿ ಬಿಲ್ಡ್ ಮಾಡಿರುವ ‘ರುಗ್ನ’ ಸೈಕಲಾಜಿಕಲ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡಿದೆ. ಅಷ್ಟಕ್ಕು ‘ರುಗ್ನ’ ಅಂದ್ರೇನು ಎಂದು ನಿರ್ಮಾಪಕರನ್ನು ಕೇಳಿದ್ರೆ ಅವರು ಹೇಳೋದಿಷ್ಟು. ಇದೊಂದು ಹಳೆಯ ಸಂಸ್ಕೃತ ಪದ. ಇದರರ್ಥ ಒಡೆದು ಹೋಗಿರೋದು ಎಂದು. ಚಿತ್ರದ ಕಥಾಹಂದರಕ್ಕೆ ಸೂಕ್ತ ಎನಿಸಿದ್ದರಿಂದ ಇದನ್ನೇ ಟೈಟಲ್ ಆಗಿ ಇಡಲಾಗಿದೆ ಎನ್ನುತ್ತಾರೆ ವೆಂಕಟ್ ಭಾರಧ್ವಜ್. ಇದನ್ನೂ ಓದಿ: ರಣವೀರ್ ಹೊಸ ಸ್ಟೈಲ್‍ಗೆ ಆಲಿಯಾ ಬೌಲ್ಡ್
Advertisement
Advertisement
‘ರುಗ್ನ’ ಚಿತ್ರಕ್ಕೆ ಸೂತ್ರಧಾರ ಸುನೀಲ್.ಎಸ್.ಭಾರಧ್ವಜ್. ಮೊದಲ ಬಾರಿ ನಿರ್ದೇಶಕನ ಕ್ಯಾಪ್ ತೊಟ್ಟಿರುವ ಇವರಿಗೆ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಸಾಥ್ ನೀಡಿದ್ದಾರೆ ಸುಹಾಸ್ ಕೆಎಸ್ ರಾವ್. ಜೀವನದಲ್ಲಿ ಸಾಕಷ್ಟು ಕಷ್ಟ ನಷ್ಟ ಅನುಭವಿಸಿ ಬದಲಾವಣೆಗೆ ಹಾತೊರೆಯುವ ವ್ಯಕ್ತಿಯೊಬ್ಬನ ಜೀವನದ ಸುತ್ತ ತೆರೆದುಕೊಳ್ಳುವ ಕಥೆ ಚಿತ್ರದಲ್ಲಿದೆ. ಅದು ಸಲೀಸಾಗಿರದೇ ನೋಡುಗರಿಗೆ ಥ್ರಿಲ್ ನೀಡುತ್ತ, ಕೌತುಕ ಮೂಡಿಸುತ್ತ ಒಂದೊಳ್ಳೆ ಮನರಂಜನೆ ನೀಡುವ ಕಥೆ ಚಿತ್ರದಲ್ಲಿದೆ. ಮೊದಲೇ ಹೇಳಿದಂತೆ ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಅದಕ್ಕೆ ಬೇಕಾದ ಎಲ್ಲ ರೀತಿಯ ಎಲಿಮೆಂಟ್ ಚಿತ್ರದಲ್ಲಿದ್ದು, ತಾಂತ್ರಿಕವಾಗಿಯೂ ಅಷ್ಟೇ ಸ್ಟ್ರಾಂಗ್ ಆಗಿದೆ ಚಿತ್ರ. ಸಿಂಕ್ ಸೌಂಡ್ ಬಳಿಸಿಕೊಂಡಿರೋದು ಚಿತ್ರದ ಮತ್ತೊಂದು ಸ್ಪೆಷಾಲಿಟಿ.
Advertisement
ಕಳೆದ ಏಪ್ರಿಲ್‍ನಲ್ಲಿ ಸೆಟ್ಟೇರಿ ಚಿತ್ರೀಕರಣಕ್ಕೆ ಹೊರಟಿದ್ದ ಚಿತ್ರತಂಡ ಬೆಂಗಳೂರು, ಮಂಗಳೂರು, ಪಡುಬಿದ್ರೆಯಲ್ಲಿ ಯಶಸ್ವಿ 28 ದಿನಗಳ ಚಿತ್ರೀಕರಣ ಮುಗಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನೂ ಮುಗಿಸಿ ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿರುವ ಈ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದೆ. ಚಿತ್ರತಂಡ ಕೂಡ ಮೇನಲ್ಲಿ ಸಿನಿಮಾ ತೆರೆ ಮೇಲೆ ತರಲು ಸಜ್ಜಾಗಿದೆ. ಈ ನಡುವೆ ಚಿತ್ರತಂಡಕ್ಕೆ ಸಿಹಿ ಸುದ್ದಿಯೂ ಸಿಕ್ಕಿದೆ.
Advertisement
ಹೌದು, ಈ ಬಾರಿಯ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ‘ರುಗ್ನ’ ಸಿನಿಮಾ ಆಯ್ಕೆಯಾಗಿದೆ. ಬೇರೆ-ಬೇರೆ ದೇಶದ ಸಿನಿಮಾಗಳು ತೆರೆಕಾಣುವ, ನುರಿತ ಸಿನಿಮಾ ತಜ್ಞರು ಇರುವ ವೇದಿಕೆಯಲ್ಲಿ ನಮ್ಮ ಸಿನಿಮಾ ಕೂಡ ಆಯ್ಕೆ ಆಗಿ ತೆರೆ ಕಾಣುತ್ತಿರುವುದು ಚಿತ್ರತಂಡದ ಸಂತಸವನ್ನು ನೂರ್ಮಡಿಗೊಳಿಸಿದೆ ಎನ್ನುತ್ತಾರೆ ನಿರ್ಮಾಪರು.
ತಾಂತ್ರಿಕವಾಗಿಯೂ ಶ್ರೀಮಂತವಾಗಿ ಮೂಡಿ ಬಂದಿರುವ ಈ ಚಿತ್ರಕ್ಕೆ ನಿರ್ದೇಶಕ ಸುನೀಲ್.ಎಸ್.ಭಾರಧ್ವಜ್ ಸಂಕಲನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಉಳಿದಂತೆ ನಚಿಕೇತ್ ಶರ್ಮಾ ಸಂಗೀತ ನಿರ್ದೇಶನ, ಸಂಜಯ್ ಎಲ್ ಚೆನ್ನಪ್ಪ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಇದನ್ನೂ ಓದಿ: ಬಿಯರ್ ಬಾಟ್ಲಿಗಳು ಹಸಿರು, ಕಂದುಬಣ್ಣದಲ್ಲಿ ಮಾತ್ರ ಏಕೆ?- ಇದಕ್ಕಿದೆ ಐತಿಹಾಸಿಕ ಹಿನ್ನೆಲೆ
ಉದಯ್ ಆಚಾರ್, ಸುಪ್ರಿತ ಸತ್ಯನಾರಾಯಣ್, ಸುಗ್ರೀವ್ ಗೌಡ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಸ್ಮಿತ ಕುಲ್ಕರ್ಣಿ, ಬಾಲ ರಾಜ್ವಾಡಿ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಚಿತ್ರದ ತಾರಬಳಗದಲ್ಲಿದ್ದಾರೆ. ಚಿತ್ರಕ್ಕೆ ವೆಂಕಟ್ ಭಾರಧ್ವಜ್ ಜೊತೆಗೆ ಮನಿಮಾರನ್ ಸುಬ್ರಮಣಿಯನ್ ಕೂಡ ಬಂಡವಾಳ ಹೂಡಿ ಚೆಂದವಾಗಿ ತೆರೆ ಮೇಲೆ ತರಲು ಕೈ ಜೋಡಿಸಿದ್ದಾರೆ.