ಬೆಂಗಳೂರು: ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಆಡಿಯೋ ರಿಲೀಸ್ ಮಾಡಿದ್ದ ಕಾಂಗ್ರೆಸ್ ಶಾಸಕ ಪ್ರಿಯಾಂಕ್‍ಗೆ ಸಿಐಡಿ (Crime Investigation Department) ನೋಟಿಸ್ ನೀಡಿದೆ.
ತಮ್ಮ ಬಳಿ ಇರುವ ದಾಖಲೆ, ಸಾಕ್ಷಿಗಳನ್ನು ಸಿಐಡಿಗೆ ನೀಡುವಂತೆ ಸೂಚಿಸಿದೆ. ಇಂದು ಬೆಳಗ್ಗೆ 11.30ಕ್ಕೆ ದಾಖಲೆ ಸಮೇತ ಬೆಂಗಳೂರಿನ ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: ಕ್ರೈಸ್ತ ಶಾಲೆಯೊಂದರಲ್ಲಿ ಕ್ರೈಸ್ತ ಧರ್ಮ ಹೇರಿಕೆ ಆರೋಪ – ಪ್ರಮೋದ್ ಮುತಾಲಿಕ್ ಕಿಡಿ
Advertisement
It is hilarious that CID has asked me to furnish “information” on the #PSI545scam.
Shows the Department’s incompetence in comprehending the evidence available in public domain.
These intimidating tactics won’t work. Govt needs to answer 57000 youths who have taken the PSI exam.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) April 24, 2022
Advertisement
ಸಿಐಡಿ ನೋಟಿಸ್‍ಗೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಪ್ರಿಯಾಂಕ್ ಖರ್ಗೆ, ಇದೊಂದು ಉಲ್ಲಾಸದಾಯಕ ವಿಚಾರ ಸಿಐಡಿ ದಾಖಲೆ ನೀಡುವಂತೆ ನನಗೆ ಸೂಚಿಸಿದೆ. ಪ್ರಕರಣ ಸಂಬಂಧ ಪುರಾವೆಗಳನ್ನು ಗ್ರಹಿಸಲು ಆಗದ ಇಲಾಖೆಯ ಅಸಮರ್ಥತೆಯನ್ನು ಇದು ತೋರಿಸುತ್ತದೆ. ಈ ರೀತಿಯ ಬೆದರಿಸುವ ತಂತ್ರ ನಡೆಯಲ್ಲ. ಸರ್ಕಾರ ಪಿಎಸ್‍ಐ ಪರೀಕ್ಷೆ ಪಡೆದಿರುವ 57,000 ಯುವಕರಿಗೆ ಉತ್ತರಿಸಬೇಕಿದೆ ಎಂದಿದ್ದಾರೆ.