ಕಲಬುರಗಿ: ಪಿಎಸ್‍ಐ(PSI) ಅಕ್ರಮ ನೇಮಕಾತಿ ಪ್ರಕರಣ ಸಿಐಡಿಗೆ ದಾಖಲಾಗುತ್ತಿದ್ದಂತೆಯೇ ಕಿಂಗ್ ಪಿನ್ ಮಂಜುನಾಥ್ ಮೇಳಕುಂದಿ ತನ್ನ ಮೊಬೈಲ್ (Mobile) ಅನ್ನು ಜಲಾಶಯಕ್ಕೆ ಬಿಸಾಕಿರುವ ಪ್ರಸಂಗ ನಡೆದಿದೆ.
Advertisement
ಕಲಬುರಗಿ ಜಿಲ್ಲೆ ಆಳಂದ ತಾಲೂಕಿನಲ್ಲಿರುವ ಅಮರ್ಜಾ ಡ್ಯಾಂ (Amarja Dam)ಗೆ ಮೊಬೈಲ್ ಬಿಸಾಕುವ ಮೂಲಕ ಮಂಜುನಾಥ್ ಅಕ್ರಮದ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಸಿಐಡಿ (CID) ಅಧಿಕಾರಿಗಳು ನದಿಯಲ್ಲಿರುವ ಮೊಬೈಲ್‍ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಡಿವೈಎಸ್ ಪಿ ಪ್ರಕಾಶ್ ರಾಠೋಡ ನೇತೃತ್ವದಲ್ಲಿ ಐದು ಜನ ಸ್ವಿಮ್ಮಿಂಗ್ ಮುಳುಗುತಜ್ಞರು ಹುಡುಕಾಟ ನಡೆಯುತ್ತಿದೆ. ಇದನ್ನೂ ಓದಿ: PSI ನೇಮಕಾತಿಯಲ್ಲಿ ಅಕ್ರಮ ಪ್ರಕರಣ- ಆರೋಪಿ ಪತಿಯನ್ನೇ ಜೈಲಿಗಟ್ಟಿದ ಜೈಲರ್ ಪತ್ನಿ!
Advertisement
Advertisement
ಇತ್ತ ಪಿಎಸ್‍ಐ ಪರೀಕ್ಷೆ ಅಕ್ರಮ ಪ್ರಕರಣ ಬಗೆದಷ್ಟು ಬಯಲಾಗ್ತಿದೆ. ಇಡೀ ಪ್ರಕರಣದ ಕಿಂಗ್ ಪಿನ್ ಕಾಶಿನಾಥ ಚಿಲ್ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೇರಿ ಕ್ರಿಮಿನಲ್ ಬುದ್ಧಿ ಉಪಯೋಗಿಸಿ ಮುಖ್ಯೋಪಾಧ್ಯಾಯನಾದ. ಶಾಲೆಯ ಉಸ್ತುವಾರಿ ವಹಿಸಿಕೊಂಡು ಲಕ್ಷ ಲಕ್ಷ ಲೂಟಿ ಮಾಡಿದ. ಈ ನಡುವೆ ದಿವ್ಯಾ ಹಾಗರಗಿ ಮತ್ತು ರಾಜೇಶ್ ಹಾಗರಗಿ ವಿಶ್ವಾಸ ಗಳಿಸಿದ. ಈ ಹಿನ್ನೆಲೆಯಲ್ಲಿ ಕಾಶಿನಾಥ್‍ನನ್ನು ನಂಬಿ ದಿವ್ಯಾ ಹಾಗರಗಿ ಸಂಪೂರ್ಣ ಶಾಲೆಯ ಜವಾಬ್ದಾರಿ ಕೊಟ್ಟಿದ್ದಳು.
Advertisement
ತಾನು ಹೆಡ್ ಮಾಸ್ಟರ್ ಆದ ಬಳಿಕ ಅದೆ ಶಾಲೆಯಲ್ಲಿ ತನ್ನ ಪತ್ನಿಗೆ ನೌಕರಿಗೆ ಸೇರಿಸಿದ. ಪರೀಕ್ಷೆಯಲ್ಲಿ ಬೇರೆ ಶಿಕ್ಷಕರನ್ನ ಅಕ್ರಮಕ್ಕೆ ಬಳಸಿಕೊಂಡಿದ್ದ. ತನ್ನ ಪತ್ನಿಗೆ ಪರೀಕ್ಷಾ ಅಕ್ರಮದಿಂದ ದೂರ ಇಟ್ಟಿದ್ದ. ತುತ್ತು ಅನ್ನಕ್ಕೆ ಪರದಾಡ್ತಿದ್ದ ಕಾಶಿನಾಥ ಕಡಿಮೆ ಸಮಯದಲ್ಲಿ ಕೊಟ್ಯಾಧೀಶ ನಾಗಿದ್ದ. ಕಳೆದ ಕೆಲ ವರ್ಷಗಳ ಹಿಂದೆ 50 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಮನೆ ಕಟ್ಟಿದ್ದ ಕಾಶಿನಾಥ ಕಳೆದ ವರ್ಷ ಕಾರು ಖರೀದಿಸಿದ್ದ.