Bengaluru CityDistrictsKarnatakaLatestMain Post

ಪಿಎಸ್‍ಐ ಹಗರಣ- ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ: ಕ್ಯಾಂಪಸ್ ಫ್ರಂಟ್ ಆಗ್ರಹ

ಬೆಂಗಳೂರು: ಪಿಎಸ್‍ಐ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದ್ದು, ಈಗಾಗಲೇ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ನಡೆಸುತ್ತಿದ್ದು, ತನಿಖೆ ಪಾರದರ್ಶಕವಾಗಿರಲು ಸರ್ಕಾರವನ್ನು ಶೀಘ್ರ ವಜಾಗೊಳಿಸಬೇಕೆಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿಯು ಒತ್ತಾಯಿಸಿದರು.

ಪಿಎಸ್‍ಐ 545 ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಪ್ರಮಾಣದ ಹಗರಣ ನಡೆದಿರುವ ಘಟನೆ ಈಗಾಗಲೇ ಬೆಳಕಿಗೆ ಬಂದಿದ್ದು, ಮುಖ್ಯ ಸೂತ್ರಧಾರಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೇರಿದಂತೆ ಬಿಜೆಪಿ, ಎಬಿವಿಪಿಯ ಹಲವಾರು ನಾಯಕರು ಬಂಧನಕ್ಕೊಳಪಟ್ಟಿದ್ದು, ಹಾಗೂ ಹಲವಾರು ಪೊಲೀಸ್ ಅಧಿಕಾರಿಗಳು ಕೂಡ ಅಮಾನತ್ತುಗೊಂಡಿದ್ದಾರೆ. ಇದರಿಂದಾಗಿ ತನಿಖೆ ಪಾರದರ್ಶಕವಾಗಿರಲು ಸರ್ಕಾರವನ್ನು ಶೀಘ್ರ ವಜಾಗೊಳಿಸಬೇಕೆಂದು ಆಗ್ರಹಿಸಿದರು.

ದೊಡ್ಡ ಮಟ್ಟದ ಸಂಚನ್ನು ರೂಪಿಸಿ, ಆಧುನಿಕ ಉಪಕರಣಗಳನ್ನು ಬಳಸಿಕೊಂಡು ಮೇಲ್ವಿಚಾರಕನಿಂದ ಹಿಡಿದು ಎಲ್ಲಾ ಹಂತದ ಅಧಿಕಾರಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದನ್ನು ನೋಡುವಾಗ ಇದರ ಹಿಂದೆ ರಾಜಕೀಯ ಶಕ್ತಿ ಅಡಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಇಷ್ಟೊಂದು ದೊಡ್ಡ ಮಟ್ಟದ ಹಗರಣದಲ್ಲಿ ಗೃಹ ಸಚಿವರ ಪಾತ್ರ ಹಾಗೂ ವಿವಿಧ ಪೊಲೀಸ್ ಉನ್ನತ ಅಧಿಕಾರಿಗಳ ಬಗ್ಗೆಯೂ ಪಾರದರ್ಶಕವಾಗಿ ತನಿಖೆಯಾಗಬೇಕಿದೆ. ಆದ್ದರಿಂದ ಈ ಹಗರಣದ ಕುರಿತು ನ್ಯಾಯಾಂಗ ತನಿಖೆ ಮಾಡಬೇಕು ಎಂದರು. ಇದನ್ನೂ ಓದಿ: ಮದರ್ಸ್ ಡೇ ಪ್ರಯುಕ್ತ ಇಡ್ಲಿ ಅಮ್ಮನಿಗೆ ಹೊಸ ಮನೆ ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ

ಪಿಎಸ್‍ಐ ಹಗರಣವನ್ನು ಪಾರದರ್ಶಕ ತನಿಖೆ ನಡೆಸಿ ಇದರ ಹಿಂದಿರುವ ಕಾಣದ ಕೈಗಳನ್ನು ಬಯಲಿಗೆ ತರಬೇಕು ಹಾಗೂ ಭ್ರಷ್ಟ ಬಿಜೆಪಿ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಥಾವುಲ್ಲ ಪುಂಜಾಲಟ್ಟೆ ತಿಳಿಸಿದರು. ಇದನ್ನೂ ಓದಿ: ಪಿಎಸ್‍ಐ ನೇಮಕಾತಿ ಅಕ್ರಮ ಭೇದಿಸಲು ಸಹಾಯವಾಯ್ತು ಫೋಟೋಶೂಟ್

Leave a Reply

Your email address will not be published.

Back to top button