ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಅಶ್ವತ್ಥನಾರಾಯಣ್ ಭಾಗಿ ಆರೋಪ ಹಿನ್ನೆಲೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ತೋಟಗಾರಿಕೆ ಸಚಿವ ಮುನಿರತ್ನ, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಅಶ್ವಥ್ ನಾರಾಯಣ ಪರವಾಗಿ ಮಾತನಾಡುತ್ತಿಲ್ಲ. ಆದರೆ ಆರೋಪ ಮಾಡುವಾಗ ವಿಪಕ್ಷಗಳು ದಾಖಲೆಗಳನ್ನಿಟ್ಟುಕೊಂಡು ಮಾತನಾಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಯತ್ನಾಳರೇನು ಬಿಜೆಪಿ ಪಕ್ಷದ ಹೈಕಮಾಂಡಾ: ಬಿ.ಸಿ.ಪಾಟೀಲ್ ಪ್ರಶ್ನೆ
Advertisement
Advertisement
ಅಶ್ವತ್ಥನಾರಾಯಣ್ ಮೇಲಿನ ಆರೋಪ ರಾಮನಗರದ ವೇದಿಕೆಯಲ್ಲೇ ತೊಡೆ ತಟ್ಟಿದಾಗಿನಿಂದಲೇ ಫಿಕ್ಸ್ ಆಗಿತ್ತು. ಈಗ ಚುನಾವಣೆ ಹತ್ತಿರವಿದ್ದು ಈಗಾಗಲೇ ಕಾಂಗ್ರೆಸ್ ಪಕ್ಷ 8 ಕ್ಷೇತ್ರಗಳಲ್ಲಿ ಹಾಗೂ ಸಿದ್ದರಾಮಯ್ಯ 2 ಕ್ಷೇತ್ರಗಳಲ್ಲಿ ಸರ್ವೆ ಮಾಡಿದೆ. ಅದರಲ್ಲಿ ಬಿಜೆಪಿ 125 ಕ್ಷೇತ್ರಗಳಲ್ಲಿ ಜಯ ಸ್ಥಾನ ಪಡೆಯಲಿದೆ ಎಂಬುದು ಗೊತ್ತಾಗಿದೆ. ಚುನಾವಣಾ ಭಯದಿಂದಲೇ ಕಾಂಗ್ರೆಸ್ ಈ ರೀತಿ ಆರೋಪ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್ ಆಧಾರವಿಲ್ಲದಿದ್ದರೂ ನಿರಂತರ ಆರೋಪ ಮಾಡುತ್ತಿದೆ. ಇವೆಲ್ಲ ಬರೀ ಊಹಾಪೋಹಗಳು. ಬಿಜೆಪಿ 125 ಸೀಟ್ ಬರುತ್ತೆ ಅಂತಾ ಅವರು ಮಾಡಿಸಿರುವ ಸರ್ವೇ ರಿಪೋರ್ಟ್ ಬಂದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಸಹ ದಾಖಲೆಗಳಿಲ್ಲದೇ ಆರೋಪ ಮಾಡಿದ್ದಾರೆ. ಅನುಭವದ ಕೊರತೆ ಇರುವವರಾದರೆ ಹೇಳಿದ್ರೆ ಬಿಡಬಹುದು. ಆದರೆ ಸಿಎಂ ಆಗಿದ್ದವರೇ ಹೇಳಿದರೆ ಹೇಗೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಮರಾಠಾ ಸಮುದಾಯದ ಶ್ರೀಮಂತ್ ಪಾಟೀಲ್ ಇಲ್ಲವೆ ನನಗೆ ಸಚಿವ ಸ್ಥಾನ ಬೇಕು: ಅನಿಲ್ ಬೆನಕೆ
Advertisement
ಸಿದ್ದರಾಮಯ್ಯ ಹೇಳಿದರೆ ರಾಜ್ಯ ಸೂಕ್ಷ್ಮವಾಗಿ ಗಮನಿಸುತ್ತೆ. ಅಂತಹ ಹಿರಿಯರು ದಾಖಲೆ ಆಮೇಲೆ ಕೊಡ್ತೇವೆ ಅಂತಾರೆ. ಅಶ್ವಥ್ ನಾರಾಯಣ ಅವರಿಗೂ ಇದಕ್ಕೂ ಸಂಬಂಧವಿಲ್ಲ. ಸಿಐಡಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಯಾರು ಭಾಗಿಯಾಗಿದ್ದಾರೋ ಅವರನ್ನ ವಿಚಾರಣೆ ಮಾಡ್ತಿದ್ದಾರೆ. ಸರ್ಕಾರವೇ ತನಿಖೆಗೆ ಆದೇಶಿಸಿದೆ. ಆದರೂ ಸಹ ಸಂಬಂಧ ಕಲ್ಪಿಸುವ ಕೆಲಸ ನಡೆದಿದೆ. ಆಸ್ತಿ ಮಾರಿ ಸಾಲ ಮಾಡಿದ್ರು, ಅದನ್ನೂ ಇದಕ್ಕೆ ಕಲ್ಪಿಸುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂಓದಿ: ಸಚಿವ ಸಂಪುಟ ವಿಸ್ತರಣೆ ‘ನಾಳೆ ಬಾ’ ಎಂಬಂತಿದೆ: ಅಭಯ್ ಪಾಟೀಲ್ ವ್ಯಂಗ್ಯ
ತೊಡೆತಟ್ಟಿದಾಗಲೇ ಸ್ಕೆಚ್ ಫಿಕ್ಸ್: ಸಚಿವ ಅಶ್ವಥ್ ನಾರಾಯಣ್‌ಗೆ ಸ್ವಪಕ್ಷೀಯರಿಂದಲೇ ಷಡ್ಯಂತ್ರ ಎನ್ನುವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಮುನಿರತ್ನ, ಕುಮಾರಸ್ವಾಮಿ ಅವರೇ ಹೆಸರು ಬಿಟ್ಟು ಹೇಳಲಿ. ಅಶ್ವಥ್ ನಾರಾಯಣ್ ಎಲ್ಲಾ ಸಚಿವ, ಶಾಸಕರ ಜೊತೆ ಚೆನ್ನಾಗಿ ಇದ್ದಾರೆ. ರಾಮನಗರಕ್ಕೆ ಹೋಗಿದ್ದಾಗ ಅಲ್ಲಿಯೂ ಏರು ದನಿಯಲ್ಲಿ ಮಾತಾಡಬಾರದಿತ್ತು. ಕೈಕಟ್ಟಿ ಕುಳಿತು ಸುಮ್ನೆ ಬರಬೇಕಿತ್ತು. ಯಾವಾಗ ತೊಡೆ ತಟ್ಟಿದ್ರೊ ಅಲ್ಲೇ ಷಡ್ಯಂತ್ರ ಶುರುವಾಯಿತು. ಇದು ಡಿ.ಕೆ.ಶಿವಕುಮಾರ್ ಅವರ ವೈಯಕ್ತಿಕ ಷಡ್ಯಂತ್ರ ಎಂದು ಗೊತ್ತಾಯಿತು. ಕಾಂಗ್ರೆಸ್ ಬದುಕಿದೆ ಎಂದು ತೋರಿಸುವ ಸಲುವಾಗಿ ಡಿಕೆಶಿ ಈ ಪ್ರಯತ್ನ ಮಾಡ್ತಾ ಇದ್ದಾರೆ ಎಂದು ಟೀಕಿಸಿದ್ದಾರೆ.