ಬೆಂಗಳೂರು: ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಮಾಜಿ ಎಡಿಜಿಪಿ ಅಮೃತ್ ಪೌಲ್‍ಗೆ ಸಂಕಷ್ಟ ಇನ್ನು ಮುಗಿದಿಲ್ಲ. ಅತಿಯಾದ ಒಂಟಿತನದಿಂದ ಡಿಪ್ರೆಶನ್‍ಗೆ ಹೋಗಿರುವ ಅಮೃತ್ ಪೌಲ್‍ಗೆ ಜೈಲಾಧಿಕಾರಿಗಳು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಸ್ವಚ್ಛಂದವಾಗಿ ಹಾರಾಡಿಕೊಂಡಿದ್ದ ಹಿರಿಯ ಅಧಿಕಾರಿ ಜೈಲು ಸೇರಿದ್ದೆ ಸೇರಿದ್ದು, ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದಾರೆ. ಅದೆಷ್ಟೋ ಆರೋಪಿಗಳ ಜೈಲಿಗೆ ಕಳುಹಿಸಿದ್ದ ಅಮೃತ್ ಪೌಲ್ ಅದೇ ಆರೋಪಿಗಳ ಜೊತೆ ಕಾಲ ಕಳೆಯುವಂತೆ ಆಗಿದೆ. ಆರೋಪಿಗಳ ಜೊತೆ ಬೆರೆಯುವುದಕ್ಕೂ ಆಗದೆ ಒಂಟಿತನ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಪ್ರೆಶನ್‍ಗೆ ಹೋಗಿದ್ದಾರೆ.
Advertisement
Advertisement
ಅಮೃತ್ ಪೌಲ್ ಬಂಧನವಾಗುವ ಮುಂಚೆಯಿಂದಲೂ ಡಿಪ್ರೆಶನ್‍ಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಮಾಡಿದ ಕೆಲಸದಿಂದ ಜೈಲು ಸೇರಿ ಅವರಿಗಿದ್ದ ಸಮಸ್ಯೆ ಉಲ್ಬಣವಾಗಿದೆ. ಅದಕ್ಕಾಗಿ ಮನೋವೈದ್ಯರ ಬಳಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಕೇಂದ್ರದಿಂದ ರಾಜ್ಯಗಳ ಪಾಲಿನ ತೆರಿಗೆ ಹಣ ಬಿಡುಗಡೆ – ಕರ್ನಾಟಕದ ಪಾಲು ಎಷ್ಟು?
Advertisement
Advertisement
ಆರೋಪ ಏನು?:
545 ಪಿಎಸ್‌ಐ ಹುದ್ದೆಗಳ ಡೀಲ್ ನಡೆದಾಗ ಅಮೃತ್ ಪೌಲ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದರು. ಡಿವೈಎಸ್‌ಪಿ ಹಾಗೂ ಎಫ್‌ಡಿಎಯೊಂದಿಗೆ ಸೇರಿ ಅಮೃತ್ ಪೌಲ್ ಡೀಲ್ ಮಾಡಿಸಿದ್ದಾರೆ ಎಂಬ ಆರೋಪವಿದೆ. ಬಂಧನಕ್ಕೆ ಒಳಗಾದ ಆರೋಪಿಗಳ ವಿಚಾರಣೆ ವೇಳೆ ಕೆಲವರು ಅಮೃತ್ ಪೌಲ್ ಹೆಸರನ್ನು ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಮೃತ್ ಪೌಲ್ ಅವರನ್ನು ಬಂಧಿಸಿದೆ. ಇದನ್ನೂ ಓದಿ: ಸಿ.ಟಿ.ರವಿ ಸ್ವಗ್ರಾಮದ ಯುವಕರಿಂದ ಸಿದ್ದರಾಮಯ್ಯ ವಿರುದ್ಧ ದೂರು