LatestLeading NewsMain PostNational

ಕೇಂದ್ರದಿಂದ ರಾಜ್ಯಗಳ ಪಾಲಿನ ತೆರಿಗೆ ಹಣ ಬಿಡುಗಡೆ – ಕರ್ನಾಟಕದ ಪಾಲು ಎಷ್ಟು?

ನವದೆಹಲಿ: ಕೇಂದ್ರದ ತೆರಿಗೆಗಳು ಮತ್ತು ಸುಂಕಗಳ ನಿವ್ವಳ ಆದಾಯದಲ್ಲಿ ಆಗಸ್ಟ್​ ತಿಂಗಳ ಬಾಬತ್ತಿನಲ್ಲಿ ರಾಜ್ಯಗಳ ಪಾಲಿನ ಹಣ ಬಿಡುಗಡೆ ಮಾಡಲಾಗಿದೆ.

15 ನೇ ಹಣಕಾಸು ಆಯೋಗದ ಶಿಫಾರಸಿನಂತೆ ಈ ಹಣ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ‌ಎರಡು ಕಂತುಗಳಲ್ಲಿ 4,254 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಎಲ್ಲ ರಾಜ್ಯಗಳಿಗೂ ಇಂದು ಒಟ್ಟಾರೆ 1,16,665 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಆಗಸ್ಟ್ 12 ರಿಂದ ಕೋವಿಡ್ ಬೂಸ್ಟರ್ ಆಗಿ ವಯಸ್ಕರಿಗೆ ಸಿಗಲಿದೆ ಕಾರ್ಬೆವಾಕ್ಸ್

ಬಿಹಾರ ರಾಜ್ಯಕ್ಕೆ 11,734 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದ್ದರೆ ಉತ್ತರ ಪ್ರದೇಶಕ್ಕೆ 20,928 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ಇದು ಬಂಡವಾಳ ಮತ್ತು ಅಭಿವೃದ್ಧಿ ವೆಚ್ಚವನ್ನು ವೇಗಗೊಳಿಸುವ ನಿಟ್ಟಿನಲ್ಲಿ ರಾಜ್ಯಗಳನ್ನು ಬಲಪಡಿಸುವ ಕೇಂದ್ರ ಸರ್ಕಾರದ ಆಶಯ, ಬದ್ಧತೆಗೆ ಅನುಗುಣವಾಗಿದೆ. ಇದನ್ನೂ ಓದಿ: ಸಿ.ಟಿ.ರವಿ ಸ್ವಗ್ರಾಮದ ಯುವಕರಿಂದ ಸಿದ್ದರಾಮಯ್ಯ ವಿರುದ್ಧ ದೂರು

58,332.86 ಕೋಟಿ ಸಾಮಾನ್ಯ ಮಾಸಿಕ ವಿಕೇಂದ್ರೀಕರಣಕ್ಕೆ ವಿರುದ್ಧವಾಗಿ 1,16,665.75 ಕೋಟಿ ರೂಪಾಯಿ ಮೊತ್ತದ ತೆರಿಗೆ ಹಂಚಿಕೆಯ ಎರಡು ಕಂತುಗಳನ್ನು ಕೇಂದ್ರವು ರಾಜ್ಯ ಸರ್ಕಾರಗಳಿಗೆ ಬಿಡುಗಡೆ ಮಾಡಿದೆ. ಇದು ರಾಜ್ಯಗಳ ಬಂಡವಾಳ ಮತ್ತು ಅಭಿವೃದ್ಧಿ ವೆಚ್ಚವನ್ನು ವೇಗಗೊಳಿಸಲು ರಾಜ್ಯಗಳ ಕೈಗಳನ್ನು ಬಲಪಡಿಸುವ ಭಾರತ ಸರ್ಕಾರದ ಬದ್ಧತೆಗೆ ಅನುಗುಣವಾಗಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Live Tv

Leave a Reply

Your email address will not be published.

Back to top button