ಬೆಂಗಳೂರು/ಕಲಬುರಗಿ: ಪೊಲೀಸ್ ಇಲಾಖೆಯಲ್ಲಿ ಟಾಪರ್ಸ್‌ಗಳಿಗೆ ಬೇಗ ಬಡ್ತಿ ಸಿಗುತ್ತದೆ. ಈ ಆಸೆಗೆ ಬಿದ್ದು ಪಿಎಸ್‌ಐ(ಪೊಲೀಸ್ ಸಬ್ ಇನ್ಸ್‌ಪೆಕ್ಟರ್) ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಅಕ್ರಮ ಎಸಗಿರುವ ಅನುಮಾನ ಬಂದಿದೆ.
ಹೌದು. ಬಂಧಿತ ಆರೋಪಿಗಳೆಲ್ಲರೂ ಪಿಎಸ್‌ಐ ಪರೀಕ್ಷೆಯಲ್ಲಿ ಟಾಪರ್ಸ್ ಆಗಿದ್ದಾರೆ. ಇಲಾಖೆಯಲ್ಲಿ ಪ್ರಥಮವಾಗಿ 50 ಜನರಿಗೆ ಬಡ್ತಿ ಸಿಗುತ್ತದೆ. ಬಂಧಿತ ಆರೋಪಿಗಳೆಲ್ಲರೂ ಟಾಪ್ 45 ರ‍್ಯಾಂಕ್ ಒಳಗಡೆ ಇದ್ದಾರೆ.
Advertisement
Advertisement
ಈಗ ಬಂಧಿತರ ಹಿನ್ನೆಲೆ ಏನು? ಯಾರ ಜೊತೆ ಸಂಪರ್ಕದಲ್ಲಿದ್ದರು ಆ ಮಾಹಿತಿಗಳನ್ನು ಕಲೆ ಹಾಕಲು ಪೊಲೀಸರು ಮುಂದಾಗುತ್ತಿದ್ದಾರೆ. ಇದನ್ನೂ ಓದಿ: PSI ಅಕ್ರಮ – ಮಹಿಳಾ ವಿಭಾಗದ ಟಾಪರ್ ರಚನಾ ವಿರುದ್ಧ ಎಫ್‌ಐಆರ್
Advertisement
ಅಕ್ರಮ ನೇಮಕಾತಿ ಪ್ರಕರಣದಲ್ಲಿ ಸಿಐಡಿ ಇದುವರೆಗೂ 545 ಅಭ್ಯರ್ಥಿಗಳ ಪೈಕಿ 400ಕ್ಕೂ ಅಧಿಕ ಜನರನ್ನು ವಿಚಾರಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಎಲ್ಲ 545 ಅಭ್ಯರ್ಥಿಗಳಿಗೆ ಓಎಂಆರ್ ಶೀಟ್ ಜೊತೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ಕಾರ್ಬನ್ ಶೀಟ್ ಕಳೆದು ಹೋಗಿದೆ. ಆರೋಗ್ಯ ಸರಿಯಿಲ್ಲ ಎಂದು ಕೆಲ ಅಭ್ಯರ್ಥಿಗಳು ವಿಚಾರಣೆಗೆ ಗೈರಾಗಿದ್ದಾರೆ.
Advertisement
ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ಭಾನುವಾರ 12 ಪರೀಕ್ಷಾರ್ಥಿಗಳನ್ನು ಬಂಧಿಸಿದ್ದಾರೆ. ಎಲ್ಲರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. 8ನೇ ಎಸಿಎಂಎಂ ನ್ಯಾಯಾಧೀಶರು 12 ಆರೋಪಿಗಳನ್ನು ನ್ಯಾಯಾಲಯ 10 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
ವಿಚಾರಣೆಗೆ ಹಾಜರಾದ 400 ಮಂದಿ ಪೈಕಿ 22 ಮಂದಿ ಲಿಸ್ಟ್ ಔಟ್ ಮಾಡಿಕೊಂಡಿದೆ. ಇದೀಗ ಈ 22ರಲ್ಲಿ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ 12 ಅಭ್ಯರ್ಥಿಗಳದ್ದು ಓಎಂಆರ್ ಶೀಟ್ ನಲ್ಲಿ ಅಟೆಂಡ್ ಮಾಡಿರೋ ಪ್ರಶ್ನೆಗೂ ಕಾರ್ಬನ್ ಕಾಪಿಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಬಂಧನಕ್ಕೊಳಗಾಗಿರುವ 12 ಜನರು ಬೆಂಗಳೂರು ಮೂಲದವರಾಗಿದ್ದಾರೆ.