ಬೆಂಗಳೂರು: ಬೇಲಿಯೆ ಎದ್ದು ಹೊಲ ಮೇಯ್ದ ಎಂಬ ಮಾತಂತೆ ಭದ್ರತೆ ಒದಗಿಸಬೇಕಿದ್ದ ಸೆಕ್ಯುರಿಟಿ ಸಿಬ್ಬಂದಿಯೇ ಪಿಎಸ್‍ಐ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ, ದುಡ್ಡಿನ ದುರಾಸೆಗೆ ಖಾಕಿ ಖಜಾನೆಗೆ ಭೂಪ ಕೈ ಹಾಕಿದ್ದಾನೆ.
ಮಣಿಪಾಲ್ ಪ್ರಿಂಟಿಂಗ್ ಪ್ರೆಸ್‍ನ ಹೆಡ್ ಸೆಕ್ಯುರಿಟಿ ಅನಿಲ್ ಪ್ರಾನ್ಸಿಸ್ ಪಿಎಸ್‍ಐ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ ಭೂಪ. ಮಡಿಕೇರಿ ನೆರೆ ವೇಳೆ ಪಿಎಸ್‍ಐ ಪರೀಕ್ಷೆಯನ್ನು ಸರ್ಕಾರ ಮುಂದೂಡಿತ್ತು. ಈ ವೇಳೆಗಾಗಲೇ ಪ್ರಶ್ನೆ ಪತ್ರಿಕೆ ಸಿದ್ಧವಿರುವ ವಿಚಾರ ತಿಳಿದಿದ್ದ ಸೆಕ್ಯುರಿಟಿ ಗಾರ್ಡ್, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಡರಾತ್ರಿ ಎರಡು ಗಂಟೆ ಹೊತ್ತಿಗೆ ಪ್ರಿಂಟಿಂಗ್ ಪ್ರೆಸ್‍ಗೆ ನುಗ್ಗಿ, ಪ್ರಶ್ನೆ ಪತ್ರಿಕೆ ಕದ್ದು, ಅಲ್ಲಿಯೇ ಜೆರಾಕ್ಸ್ ಮಾಡಿ ಆಸಲಿ ಪೇಪರ್ ನ ಅಲ್ಲೇ ಇಟ್ಟು ಬಂದಿದ್ದನು. ನಂತರ ಟಿಪನ್ ಬಾಕ್ಸ್ ನಲ್ಲಿ ಬಚ್ಚಿಟ್ಟುಕೊಂಡು ಅಲ್ಲಿಂದ ಪೇಪರ್ ಹೊರತಂದಿದ್ದನು.
Advertisement
Advertisement
ಪ್ರಶ್ನೆ ಪತ್ರಿಕೆ ಏನು ಮಾಡೋದು ಎಂದು ಒಡಾಡುತ್ತಿದ್ದವನಿಗೆ ದಾವಣಗೆರೆ ಮೂಲದ ಅಮೀರ್ ಅಹಮದ್ ಪರಿಚಯವಾಗಿದ್ದನು. ಈ ಹಿಂದೆ ಆಂಧ್ರದಲ್ಲಿ ಪೇಪರ್ ಲೀಕ್ ಮಾಡಿ ಅಮೀರ್ ಸಿಕ್ಕಿಬಿದ್ದಿದ್ದನು. 45 ಲಕ್ಷಕ್ಕೆ ಡೀಲ್ ಮಾಡಿ 17 ಲಕ್ಷ ರೂ. ಅನಿಲ್ ಪಡೆದಿದ್ದನು. ಸಿಸಿಬಿ ಚಾರ್ಜ್‍ಶೀಟ್‍ನಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ ಬೆಳಕಿಗೆ ಬಂದ ತಕ್ಷಣ ಆರೋಪಿ ದುಬೈಗೆ ಹಾರಿದ್ದನು.
Advertisement
ಆದರೆ ಆತನ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ದುಬೈನಲ್ಲಿದ್ದವನಿಗೆ ಫ್ಯಾಮಿಲಿ ಸೆಂಟಿಮೆಂಟ್ ಡ್ರಾಮಾದಿಂದ ವಾಪಸ್ಸು ಕರೆಸಿಕೊಂಡು, ಸೆರೆಹಿಡಿದಿದ್ದಾರೆ. ಪಿಎಸ್‍ಐ ಪೇಪರ್ ಲೀಕ್ ಪ್ರಕರಣದಲ್ಲಿ ಅನಿಲ್ ಬಿಟ್ಟು ಇನ್ನೂ 119 ಜನ ಆರೋಪಿಗಳ ಮೇಲೆ 2000 ಸಾವಿರ ಪುಟಗಳ ಚಾರ್ಜ್‍ಶೀಟ್ ಅನ್ನು ಸಿಸಿಬಿ ಪೊಲೀಸರು ಸಿದ್ಧಪಡಿಸಿದ್ದಾರೆ.