ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಆರೋಪಿ ದಿವ್ಯಾ ಹಾಗರಗಿ ಕಲಬುರಗಿ ಸೆಂಟ್ರಲ್ ಜೈಲು ಸೇರಿಕೊಂಡಿದ್ದು, ಕಣ್ಣೀರಾಕುತ್ತಿದ್ದಾಳೆ.
Advertisement
ಜೈಲಿನ ಬ್ಯಾರಕ್ ಹಿಂದೆ ಇದ್ದ ಪತಿ ರಾಜೇಶ್ ಕಂಡು ದಿವ್ಯಾ ಹಾಗರಗಿ ಕಣ್ಣೀರು ಹಾಕಿದ್ದಾಳೆ. ದೂರದಿಂದಲೇ ಪತಿ ರಾಜೇಶ್‍ನನ್ನು ನೋಡ್ತಿದ್ದ ಹಾಗೆಯೇ ಕುಸಿದು ಬಿದ್ದು ಕಣ್ಣೀರು ಸುರಿಸಿದ್ದಾಳೆ. ಇತ್ತ ದಿವ್ಯಾ ಕಂಡು ಜೈಲಿನ ಬ್ಯಾರಕ್ ಹಿಂದೆಯಿಂದ ರಾಜೇಶ್ ಕೂಡ ಅತ್ತಿದ್ದಾರೆ. ಒಟ್ಟಿನಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಗಂಡ-ಹೆಂಡತಿ ಕಣ್ಣೀರು ಹಾಕಿದರು. ಬಳಿಕ ದಿವ್ಯಾ ಹಾಗರಗಿಯನ್ನ ಮಹಿಳಾ ಬ್ಯಾರಕ್ ನಲ್ಲಿ ಹಾಕಿ ಸಿಬ್ಬಂದಿ ಲಕ್ ಮಾಡಿದರು.
Advertisement
Advertisement
ದಿವ್ಯಾ ಜ್ಞಾನ ಜ್ಯೋತಿ ಶಾಲೆಯ ಶಿಕ್ಷಕರ ಮಹಿಳಾ ಬ್ಯಾರಕ್ ನಲ್ಲಿ ಹಾಕುವಂತೆ ಪಟ್ಟು ಹಿಡಿದಿದ್ದಳು. ತನ್ನ ಶಾಲೆಯ ಶಿಕ್ಷಕರ ಬ್ಯಾರಕ್ ನಲ್ಲಿಯೇ ಇರೊದಾಗಿ ಹಠ ಮಾಡಿದ್ದಳು. ಆದರೆ ಜೈಲು ಸಿಬ್ಬಂದಿ ದಿವ್ಯಾ ಹಣಕ್ಕೆ ಮಣಿಯದೆ 18219 ದಿವ್ಯಾಳ ಕೈದಿ ನಂಬರ್ ನೀಡಿ ಪ್ರತ್ಯೇಕ 9ನೇ ಬ್ಯಾರಕ್ ನಲ್ಲಿ ಕೂಡಿ ಹಾಕಿದ್ದಾರೆ. ದಿನದ 24 ಗಂಟೆಯು ಲಾಕ್ ಆಗಿರುವ ಬ್ಯಾರಕ್ ನಲ್ಲಿ ದಿವ್ಯಾಳನ್ನ ಹಾಕಿದ್ದಾರೆ.
Advertisement
ದಿವ್ಯಾಳ ಯಾವ ಬೇಡಿಕೆಯನ್ನ ಪೂರೈಸೋದಕ್ಕೆ ಆಗೋದಿಲ್ಲ. ಜೈಲಿನಲ್ಲಿ ಎಲ್ಲ ಕೈದಿಗಳಿಗೆ ನೀಡುವ ಸವಲತ್ತೇ ನೀಡುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಸಿಎಂ ಬೊಮ್ಮಾಯಿ – ಇಂದು ಹೈಕಮಾಂಡ್‍ನಿಂದ ಬಿಗ್ ಸಂದೇಶ ನಿರೀಕ್ಷೆ