LatestLeading NewsMain PostNational

ದೆಹಲಿಯಲ್ಲಿ ಸಿಎಂ ಬೊಮ್ಮಾಯಿ – ಇಂದು ಹೈಕಮಾಂಡ್‍ನಿಂದ ಬಿಗ್ ಸಂದೇಶ ನಿರೀಕ್ಷೆ

- ಮತ್ತೆ ನಾಳೆಗೆ ಕ್ಯಾಬಿನೆಟ್ ಸಭೆ ಮುಂದೂಡಿಕೆ

ನವದೆಹಲಿ/ಬೆಂಗಳೂರು: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹೈಕಮಾಂಡ್ ನಾಯಕರನ್ನು ಭೇಟಿ ಆಗಲಿದ್ದಾರೆ. ಇಂದು ಸಿಎಂ ಅವರು ಅಮಿತ್ ಶಾ ಹಾಗೂ ನಡ್ಡಾ ಭೇಟಿಯಾಗಿ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಭೇಟಿ ವೇಳೆ ಹೈಕಮಾಂಡ್‍ನಿಂದ ಸ್ಪಷ್ಟ ಸಂದೇಶ ರವಾನಿಸುವ ಸಾಧ್ಯತೆ ಇದೆ. ಹೈಕಮಾಂಡ್ ಸೂಚನೆ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಕುತೂಹಲ ಹುಟ್ಟಿಕೊಂಡಿದ್ದು, ಆ ಸಂದೇಶದಿಂದ ಯಾವ ಬದಲಾವಣೆ..? ಯಾರಿಗೆ ಶಾಕ್.. ಯಾರಿಗೆ ಲಕ್ ಎಂಬುದು ತಿಳಿದುಬರಲಿದೆ.

ಸದ್ಯ ದೆಹಲಿಯಲ್ಲಿ ಸಿಎಂ ಇದ್ದರೆ, ಇತ್ತ ಸಂಪುಟ ಸಭೆ ಸಂಕಷ್ಟ ಎದುರಾಗಿದೆ. ಸತತ 3ನೇ ಬಾರಿಗೆ ಸಂಪುಟ ಸಭೆ ಮುಂದೂಡಿಕೆಯಾಗಿದೆ. ಈ ಹಿಂದೆ ಮೇ 5ರಿಂದ ಮೇ 11ಕ್ಕೆ ಮುಂದೂಅಡಲಾಯ್ತು. ಆದರೆ ಇಂದು ಬೆಳಗ್ಗೆ 11ಕ್ಕೆ ಇದ್ದ ಸಭೆ ಸಂಜೆಗೆ ಮುಂದೂಡಲಾಯ್ತು. ಇದೀಗ ಇಂದು ಸಂಜೆ ನಿಗದಿ ಆಗಿದ್ದ ಕ್ಯಾಬಿನೆಟ್ ನಾಳೆಗೆ ಮುಂದೂಡಿಕೆಯಾಗಿದೆ.

ನಾಳೆ ಮಧ್ಯಾಹ್ನ 12ಕ್ಕೆ ಸಂಪುಟ ಸಭೆ ನಿಗದಿಯಾಗಿದೆ. ಒಟ್ಟಿನಲ್ಲಿ 3-3 ಬಾರಿ ಸಭೆ ಮುಂದೂಡಿದ್ದು ಏಕೆ..? ಇದರ ಹಿಂದಿನ ಮರ್ಮ ಏನು ಎಂಬ ಚರ್ಚೆ ಎದ್ದಿದೆ. ಅಲ್ಲದೆ ಗುರುವಾರ ಹಲವು ಬದಲಾವಣೆಗಳಿಗೆ ಮುಹೂರ್ತ ಫಿಕ್ಸಾ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.  ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣೆ – ಸುಪ್ರೀಂ ಕೋರ್ಟ್ ಆದೇಶ ಅಧ್ಯಯನಕ್ಕೆ ಸಿಎಂ ಸೂಚನೆ

ಇತ್ತ ಸಚಿವಾಕಾಂಕ್ಷಿಗಳಿಗೆ ಕೂಡ ಟೆನ್ಶನ್ ಶುರುವಾಗಿದೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿಯಲ್ಲಿ ಕ್ಯಾಬಿನೆಟ್ ಇನ್ & ಔಟ್ ಲೆಕ್ಕಾಚಾರ ಹೆಚ್ಚಾಗಿದೆ. ಸಂಪುಟದಿಂದ ಡಜನ್‍ಗಟ್ಟಲೆ ಸಚಿವರು ಹೊರಗಾ..? ಒಳಗಾ..? ಅಥವಾ ಹಿರಿತಲೆಗಳಿಗೆ ಗೇಟ್‍ಪಾಸಾ..? ಹೊಸ ಮುಖಗಳಿಗೆ ಮಣೆನಾ..? ರಾಜ್ಯ ಬಿಜೆಪಿ ಗುಜರಾತ್, ಯುಪಿ, ಉತ್ತರಾಖಂಡ್ ಮಾದರಿ ಅನುಸರಿಸುತ್ತಾ..? ಎಂಬ ಕುತೂಹಲ ಮೂಡಿದೆ.

ಸಚಿವ ಸ್ಥಾನ ಆಕಾಂಕ್ಷಿಗಳು..?
> ಪಿ.ರಾಜೀವ್, ಕುಡಚಿ ಶಾಸಕ
> ಪೂರ್ಣಿಮಾ ಶ್ರೀನಿವಾಸ್, ಹಿರಿಯೂರು ಶಾಸಕಿ
> ಅರವಿಂದ್ ಬೆಲ್ಲದ್, ಹು-ದಾ ಪಶ್ಚಿಮ ಶಾಸಕ
> ಬಸನಗೌಡ ಯತ್ನಾಳ್, ವಿಜಯಪುರ ನಗರ ಶಾಸಕ
> ಕೆ.ಜಿ.ಬೋಪಯ್ಯ, ವಿರಾಜಪೇಟೆ ಶಾಸಕ
> ರವಿಕುಮಾರ್, ಪರಿಷತ್ ಸದಸ್ಯ

> ಸಿ.ಪಿ.ಯೋಗೇಶ್ವರ್, ಪರಿಷತ್ ಸದಸ್ಯ
> ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಕುಂದಾಪುರ ಶಾಸಕ
> ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಧ್ಯಕ್ಷ
> ತಿಪ್ಪಾರೆಡ್ಡಿ, ಚಿತ್ರದುರ್ಗ ಶಾಸಕ
> ರಾಜೂಗೌಡ, ಸುರಪುರ ಶಾಸಕ
> ದತ್ತಾತ್ರೇಯ ಪಾಟೀಲ್ ರೇವೂರ್, ಕಲಬುರ್ಗಿ ದಕ್ಷಿಣ
> ವಿಜಯೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ
> ಎಂ.ಪಿ.ಕುಮಾರಸ್ವಾಮಿ, ಮೂಡಿಗೆರೆ ಶಾಸಕ
> ರೇಣುಕಾಚಾರ್ಯ, ಹೊನ್ನಾಳ್ಳಿ ಶಾಸಕ
> ರಮೇಶ್ ಜಾರಕಿಹೊಳಿ, ಗೋಕಾಕ್ ಶಾಸಕ

Leave a Reply

Your email address will not be published.

Back to top button