ಶಿವಮೊಗ್ಗ: ಬುದ್ಧಿಮಾಂದ್ಯನ ಮೇಲೆ ನಡು ರಸ್ತೆಯಲ್ಲೇ ಪಿಎಸ್‍ಐ ಹಾಗೂ ಕಾನ್ಸ್‌ಟೇಬಲ್ ಮನಬಂದಂತೆ ಥಳಿಸಿರುವ ಘಟನೆ ಗೃಹ ಸಚಿವ ತವರು ಜಿಲ್ಲೆಯಲ್ಲೇ ನಡೆದಿದೆ.
ಜಿಲ್ಲೆಯ ಹೊಸನಗರ ಠಾಣೆ ಪಿಎಸ್‍ಐ ರಾಜೇಂದ್ರ ನಾಯ್ಕ್ ಹಾಗೂ ಕಾನ್ಸ್‌ಟೇಬಲ್ ಇಬ್ಬರು ಬುದ್ಧಿಮಾಂದ್ಯ ಜಟ್ಟಪ್ಪ ಎಂಬಾತನ ಮೇಲೆ ಮನಬಂದಂತೆ ಥಳಿಸುವ ಮೂಲಕ ಅಮಾನೀಯವಾಗಿ ವರ್ತಿಸಿದ್ದಾರೆ. ಇದನ್ನೂ ಓದಿ: 5 ಶಾಸಕರು, 3 ಸಚಿವರಿರುವ ದಕ್ಷಿಣ ಕನ್ನಡಕ್ಕೆ ಬೊಮ್ಮಾಯಿ ಬಜೆಟ್‍ನಲ್ಲಿ ಕೊಟ್ಟಿದ್ದೇನು: ಸೊರಕೆ ಪ್ರಶ್ನೆ
ಜಟ್ಟಪ್ಪ ರಸ್ತೆಯಲ್ಲಿ ಓಡಾಡುವವರಿಗೆ ಸಿಕ್ಕ, ಸಿಕ್ಕವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸುತ್ತಿದ್ದನಂತೆ. ರೋಸಿ ಹೋದ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಹಾಗಾಗಿ ಜಟ್ಟಪ್ಪನನ್ನು ವಶಕ್ಕೆ ಪಡೆಯಲು ತೆರಳಿದ್ದ ಪಿಎಸ್‍ಐ ರಾಜೇಂದ್ರ ನಾಯ್ಕ್ ಅವರಿಗೆ ಜಟ್ಟಪ್ಪ ಹಲ್ಲಿನಿಂದ ಕಚ್ಚಿ ಗಾಯಗೊಳಿಸಿದ್ದ. ಜಟ್ಟಪ್ಪನ ಕೃತ್ಯಕ್ಕೆ ಕೋಪಗೊಂಡ ಪಿಎಸ್‍ಐ ಹಾಗೂ ಕಾನ್ಸ್‌ಟೇಬಲ್, ಬುದ್ಧಿಮಾಂದ್ಯ ಎಂಬುದನ್ನು ಮರೆತು ಹಲ್ಲೆ ನಡೆಸಿದ್ದಾರೆ.
ಬುದ್ಧಿಮಾಂದ್ಯನ ಮೇಲೆ ಪಿಎಸ್‍ಐ ಹಾಗೂ ಕಾನ್ಸ್‌ಟೇಬಲ್ ಹಲ್ಲೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಿಎಸ್‍ಐ ಹಾಗೂ ಕಾನ್ಸ್‌ಟೇಬಲ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.