ಬೆಂಗಳೂರು: 2022-23ನೇ ಸಾಲಿನ ಎಸ್ಎಸ್ಎಲ್‌ಸಿ (SSLC Exam) ಪಬ್ಲಿಕ್ ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿಯನ್ನು ಎಸ್ಎಸ್ಎಲ್‌ಸಿ ಬೋರ್ಡ್ ಪ್ರಕಟ ಮಾಡಿದೆ. ಏಪ್ರಿಲ್ 1 ರಿಂದ 15 ರ ವರೆಗೆ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ.
ಎಸ್‌ಎಸ್‌ಎಲ್‌ಸಿ ಬೋರ್ಡ್ ಬಿಡುಗಡೆ ಮಾಡಿರುವ ತಾತ್ಕಾಲಿಕ ವೇಳಾಪಟ್ಟಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ಷೇಪಣೆ ಸಲ್ಲಿಸಲು ನವೆಂಬರ್ 28 ರ ವರೆಗೆ ಅವಕಾಶ ನೀಡಲಾಗಿದೆ. ತಾತ್ಕಾಲಿಕ ವೇಳಾಪಟ್ಟಿ ವಿವಿರ ಹೀಗಿದೆ. ಇದನ್ನೂ ಓದಿ: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಖಚಿತ – ಬಿಜೆಪಿಯಿಂದಲ್ಲ: ಮುತಾಲಿಕ್
Advertisement
Advertisement
ಎಸ್ಎಸ್ಎಲ್‌ಸಿ ತಾತ್ಕಾಲಿಕ ವೇಳಾಪಟ್ಟಿ
ಏಪ್ರಿಲ್ 1 – ಪ್ರಥಮ ಭಾಷೆ ವಿಷಯ, ಏಪ್ರಿಲ್ 4 – ಗಣಿತ, ಏಪ್ರಿಲ್ 6 – ದ್ವಿತೀಯ ಭಾಷೆ ವಿಷಯ, ಏಪ್ರಿಲ್ 10 – ವಿಜ್ಞಾನ, ಏಪ್ರಿಲ್ 12 – ತೃತೀಯ ಭಾಷೆ ವಿಷಯ, ಏಪ್ರಿಲ್ 15 – ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆಗಳು ನಿಗದಿಯಾಗಿದೆ. ಇದನ್ನೂ ಓದಿ: `ಆಪರೇಷನ್ ಕಮಲ’ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಿಸಿ- ಸುಪ್ರೀಂಗೆ ಡಿಕೆಶಿ ಮನವಿ