ಬಾಗ್ದಾದ್: ಪ್ರಭಾವಿ ಶಿಯಾ ಧರ್ಮಗುರು ಮೊಕ್ತಾದ ಅಲ್ ಸದರ್ ತಮ್ಮ ರಾಜಕೀಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ಬಳಿಕ ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.
ಸದರ್ ಅವರ ಬೆಂಬಲಿಗರು ಹಾಗೂ ಇರಾಕಿನ ಪಡೆಗಳ ನಡುವಿನ ಘರ್ಷಣೆಯಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ. 380ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಡ್ರಗ್ಸ್ ಖರೀದಿಗೆ ಫೇಕ್ ಐಡಿ ಬಳಸುತ್ತಿದ್ದ ಮೈಕಲ್ ಜಾಕ್ಸನ್
Advertisement
Advertisement
ಪ್ರತಿಭಟನಾಕಾರರು ಸರ್ಕಾರಿ ಅರಮನೆ ಹೊರಗಿನ ಸಿಮೆಂಟ್ ತಡೆಗೋಡೆಯನ್ನು ಒಡೆದು, ಅರಮನೆಯ ದ್ವಾರಗಳನ್ನು ಹಗ್ಗಗಳಿಂದ ಎಳೆದು ಮುರಿದಿದ್ದಾರೆ. ಇರಾಕಿನ ನಾಯಕರು ಹಾಗೂ ವಿದೇಶಿ ಗಣ್ಯರನ್ನು ಸದ್ಯ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬಾಬರಿ ಮಸೀದಿ ಧ್ವಂಸ ಪ್ರಕರಣ; ನ್ಯಾಯಂಗ ನಿಂದನೆ ಪ್ರಕರಣ ಕೈಬಿಟ್ಟ ಸುಪ್ರೀಂ – BJP ನಾಯಕರಿಗೆ ಬಿಗ್ ರಿಲೀಫ್
Advertisement
ಭಾರೀ ಪ್ರತಿಭಟನೆಯ ಹಿನ್ನೆಲೆ ಇರಾಕ್‌ನಾದ್ಯಂತ ಕರ್ಫ್ಯೂ ಘೋಷಿಸಲಾಗಿದೆ. ಉಸ್ತುವಾರಿ ಪ್ರಧಾನ ಮಂತ್ರಿ ಕ್ಯಾಬಿನೆಟ್ ಅಧಿವೇಶನವನ್ನು ಅಮಾನತುಗೊಳಿಸಲಾಗಿದೆ. ಬಾಗ್ದಾದ್‌ನಾದ್ಯಂತ ಮೆಷಿನ್ ಗನ್‌ಗಳಿಂದ ಗುಂಡಿನ ಸದ್ದುಗಳು ಕೇಳಿಬರುತ್ತಿದೆ ಎಂದು ವರದಿಯಾಗುತ್ತದೆ.