ಡೋನಾಲ್ಡ್ ಟ್ರಂಪ್ ಕಾರಿನ ಎದುರು ಟಾಪ್‍ಲೆಸ್ ಆಗಿ ಬಂದ ಮಹಿಳೆ

Public TV
1 Min Read
trump

ಪ್ಯಾರೀಸ್: ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಫ್ರಾನ್ಸ್ ಪೀಸ್ ಫೋರಮ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಮಹಿಳಾ ಪ್ರತಿಭಟನಾಗಾರ್ತಿಯೊಬ್ಬರು ಟಾಪ್‍ಲೆಸ್ ಆಗಮಿಸಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.

ಈ ಕುರಿತು ಮಾಧ್ಯಮವೊಂದು ವರದಿ ಮಾಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರಿನಲ್ಲಿ ತೆರಳುತ್ತಿದ್ದ ಟ್ರಂಪ್ ಅವರ ಕಾರು ಆಗಮಿಸುತ್ತಿದಂತೆ ಭದ್ರತಾ ಸಿಬ್ಬಂದಿ ಕಣ್ಣುತಪ್ಪಿಸಿದ ಯುವತಿ ತನ್ನ ದೇಹದ ಮೇಲೆ ಟ್ರಂಪ್ ವಿರೋಧಿ ಘೋಷಣೆಗಳನ್ನು ಬರೆದುಕೊಂಡು ಕಾರಿನ ಮುಂದೇ ಆಗಮಿಸಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಅನಿರೀಕ್ಷಿತ ಘಟನೆ ಕಂಡು ಕೂಡಲೇ ಎಚ್ಚೆತ್ತ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಟ್ರಂಪ್ ನಕಲಿ ಶಾಂತಿಧೂತ ಎಂದು ಪ್ರತಿಭಟನಾಗಾರ್ತಿ ಘೋಷಣೆ ಕೂಗಿದ್ದು, ಆಕೆಯನ್ನು ಪ್ಯಾರಿಸ್ ಮಹಿಳಾ ಸಂಘಟನೆಯ ಕಾರ್ಯಕರ್ತೆ ಎಂದು ಗುರುತಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಈ ಸಂಘಟನೆ ಲೈಂಗಿಕ ಶೋಷಣೆ, ಸಾಮಾಜಿಕ ಆರ್ಥಿಕ ಶೋಷಣೆ ಸೇರಿದಂತೆ ವಿವಿಧ ತಾರತಮ್ಯಗಳ ಕುರಿತು ಹೋರಾಟ ಮಾಡುತ್ತಾ ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಮೊದಲೇ ವಿಶ್ವಯುದ್ಧ ಕೊನೆಗೊಂಡು 100 ವರ್ಷವಾದ ಹಿನ್ನೆಲೆಯಲ್ಲಿ ಪ್ಯಾರೀಸ್ ನಗರದಲ್ಲಿ ಪೀಸ್ ಫೋರ್ಮ್ 2018 ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಶ್ವದ 70 ಪ್ರಮುಖ ದೇಶಗಳ ನಾಯಕರು ಭಾಗವಹಿಸಿದ್ದು, ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *