ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ತೀವ್ರಗೊಂಡಿದೆ. ಬೆಂಗಳೂರಿನ ಟೌನ್‍ಹಾಲ್‍ನಲ್ಲಿ ಪತ್ರಕರ್ತರು, ಸಾಹಿತಿಗಳು, ವಿಚಾರವಾದಿಗಳು, ರಾಜ್ಯ ರೈತ ಸಂಘ, ಜನವಾದಿ ಮಹಿಳಾ ಸಂಘಟನೆ, ಸಿಪಿಐಎಂ, ಮಹಿಳಾ ಘರ್ಜನೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಧರಣಿ ಕುಳಿತಿದ್ದಾರೆ.
Advertisement
ನೂರಾರು ಸಂಖ್ಯೆಯಲ್ಲಿ ಸೇರಿರುವ ಪ್ರತಿಭಟನಾಕಾರರು ಬ್ಯಾನರ್‍ಗಳನ್ನು ಹಿಡಿದು ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರಕ್ಕೆ ಕಲಬುರ್ಗಿ ಹಂತಕರನ್ನು ಹಿಡಿಯೋ ತಾಕತ್ತಿಲ್ಲ. ಇಂದು ಗೌರಿಗೆ ಆದ ಗತಿ ನಾಳೆ ನಮಗೂ ಆಗುತ್ತೆ. ಇಡೀ ರಾಜ್ಯ ಇವತ್ತು ಬೀದಿಗೆ ಇಳಿದು ಹೋರಾಡೋ ಕಾಲ ಬಂದಿದೆ. ಗುಂಡಿಕ್ಕಿದವರು ಹೇಡಿಗಳು. ತಾಕತ್ತು ಇದ್ರೆ ಇಲ್ಲಿ ನಾವು ನೂರಾರು ಗೌರಿಗಳಿದ್ದೇವೆ. ನಮ್ಮ ಹಣೆಗೂ ಗುಂಡು ಹೊಡೆಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಹಿತ್ಯವನ್ನ ಸಾಹಿತ್ಯದಿಂದ ಎದುರಿಸಬೇಕೆಂದು ಹಿರಿಯ ಸಾಹಿತಿ ಚಂಪಾ ಕಿಡಿ ಕಾರಿದ್ದಾರೆ.
Advertisement
Advertisement
ಧಾರವಾಡದಲ್ಲಿ ವಿಚಾರವಾದಿ ಡಾ.ಎಂ.ಎಂ ಕಲ್ಬುರ್ಗಿ ಪತ್ನಿ ಉಮಾದೇವಿ ಸೇರಿದಂತೆ ಹಲವರು ಗೌರಿ ಲಂಕೇಶ್ ಹತ್ಯೆ ಖಂಡಿಸಿ ಮೌನ ಪ್ರತಿಭಟನೆ ನಡೆಸಿದ್ರು. ಹಂತಕರನ್ನ ಶೀಘ್ರವೇ ಬಂಧಿಸಿ ಎಂಬ ಬ್ಯಾನರ್‍ಗಳನ್ನ ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.
Advertisement
ಬಾಗಲಕೋಟೆಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಟಯರ್ ಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನೆ ನಡೆಸಿದ್ರು. ನಗರದ ಬಸವೇಶ್ವರ ವೃತ್ತದ ಬಳಿ ಜಮಾಯಿಸಿದ ಆಮ್ ಆದ್ಮಿ ಪಕ್ಷದ ಕಾಯ9ಕತ9ರು, ದುಷ್ಟಶಕ್ತಿಯ ಪ್ರತಿಕೃತಿ ರೂಪಿಸಿ ಅದಕ್ಕೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಹತ್ಯೆ ಮಾಡಿದವರನ್ನ ಶೀಘ್ರವೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ರು. ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಜೊತೆ ಸಾವ9ಜನಿಕರೂ ಸಹ ಕೈಜೋಡಿಸಿ ಪ್ರತಿಭಟನೆಗೆ ಸಾಥ್ ನೀಡಿದ್ದು ಕಂಡುಬಂತು.
ಚನ್ನಪಟ್ಟಣದಲ್ಲಿ ಬೆಳ್ಳಂ ಬೆಳಿಗ್ಗೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆದಿದ್ರು. ನಗರದ ಚರ್ಚ್ ರಸ್ತೆಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು, ಕಿಡಿಗೇಡಿಗಳ ದುಷ್ಕೃತ್ಯವನ್ನ ಖಂಡಿಸಿದ್ರು. ರಾಜ್ಯದಲ್ಲಿ ನಾಲ್ವರು ವಿಚಾರವಾದಿ, ಚಿಂತಕರು, ಸಾಹಿತಿಗಳ ಕೊಲೆಯಾಗಿದೆ. ಆದ್ರೆ ಇನ್ನೂ ಸಹ ಕೊಲೆಗಾರರು ಪತ್ತೆಯಾಗಿಲ್ಲ. ಆಗಲೇ ಮತ್ತೊಂದು ಕೊಲೆ ನಡೆದಿದೆ. ಪ್ರಗತಿಪರ ಚಿಂತನೆ ಮೂಲಕ ಹೋರಾಟ ನಡೆಸಿದವರನ್ನೇ ಕೊಲೆ ಮಾಡಲಾಗ್ತಿದೆ. ಗುಂಡಿಟ್ಟು ಕೊಂದವರನ್ನು ಕೂಡಲೇ ಬಂಧಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ರು.