ಉಡುಪಿ: ಹಿಜಬ್ ನಮ್ಮ ಧಾರ್ಮಿಕ ಹಕ್ಕು. ಹಿಜಬ್ ಧರಿಸಿ ತರಗತಿಯಲ್ಲಿ ಕುಳಿತು ಕೊಳ್ಳುವ ಅವಕಾಶ ಕೊಡಿ. ಮಹಿಳಾ ಕಾಲೇಜು ಆದರೂ ಪುರುಷ ಪ್ರಾಧ್ಯಾಪಕರು ಇದ್ದಾರೆ ಎಂದು ಉಡುಪಿಯ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಮತ್ತೆ ಹೋರಾಟ ನಡೆಸಿದ್ದಾರೆ.
ನಾವು ನಮ್ಮ ಅಣ್ಣ-ತಮ್ಮಂದಿರ ಮುಂದೆ ಹಿಜಬ್ ಇಲ್ಲದೆ ಓಡಾಡಲ್ಲ. ಕಾರ್ಯಕ್ರಮ ನಡೆಯುವ ವೇಳೆ ಹಲವಾರು ಪುರುಷ ಅತಿಥಿಗಳು ಕಾಲೇಜಿಗೆ ಬರುತ್ತಾರೆ. ನಮಗೆ ಹಿಜಬ್ ಕೂಡ ಮುಖ್ಯ ಶಿಕ್ಷಣ ಕೂಡ ಅಷ್ಟೇ ಮುಖ್ಯ ಎಂದು ಪ್ರತಿಭಟನಾನಿರತ ಮುಸಲ್ಮಾನ ವಿದ್ಯಾರ್ಥಿನಿಯರು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡುವಂತೆ ಬೇಡಿಕೆ
ಕಳೆದ ವರ್ಷ ಡಿಸೆಂಬರ್ 27ಕ್ಕೆ ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ತರಗತಿಗೆ ಹಿಜಬ್ ಧರಿಸಿ ಬರಲು ಅನುಮತಿ ನೀಡಬೇಕಾಗಿ ಪ್ರಾಂಶುಪಾಲರಿಗೆ ಮನವಿ ಮಾಡಿದ್ದರು. ಆದರೆ ಕಾಲೇಜು ಸಮವಸ್ತ್ರವನ್ನು ಸರಿಯಾಗಿ ಪಾಲಿಸುವಂತೆ ಪಟ್ಟುಹಿಡಿದಿದ್ದು, ಹಿಜಬ್ ಧರಿಸಿ ತರಗತಿಗೆ ಹಾಜರಾಗಲು ವಿದ್ಯಾರ್ಥಿನಿಯರಿಗೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ವಿದ್ಯಾರ್ಥಿನಿಯರು ಮತ್ತೆ ಹೋರಾಟಕ್ಕೆ ಇಳಿದಿದ್ದಾರೆ. ಇದನ್ನೂ ಓದಿ: ಕೋವಿಡ್ ಬಂದರೂ ಕಾಲೇಜಿಗೆ ಹಾಜರಾದ ಪ್ರಾಧ್ಯಾಪಕ – 13 ಮಂದಿ ವಿದ್ಯಾರ್ಥಿಗಳಿಗೆ ಸೋಂಕು
ಈ ವಿಚಾರವಾಗಿ ಕಾಲೇಜಿನ ಪ್ರಾಂಶುಪಾಲರು ಪದವಿಪೂರ್ವ ಬೋರ್ಡ್ಗೆ ಪತ್ರ ಬರೆದಿದ್ದು, ನಿರ್ದೇಶಕರ ಉತ್ತರಕ್ಕಾಗಿ ಕಾಲೇಜು ಆಡಳಿತ ಮಂಡಳಿ ನಿರೀಕ್ಷೆಯಲ್ಲಿದೆ.