ಕಾಸರಗೋಡು: `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಕನ್ನಡ ಶಾಲೆ ದುಸ್ಥಿತಿಯ ಬಗ್ಗೆ ಚರ್ಚೆಯಾಗುತ್ತಿರುವಾಗಲೇ, ಈಗ ಕೇರಳದ ಶಾಲೆಯೊಂದರಲ್ಲಿ ಕನ್ನಡ ತರಗತಿಗೆ ಮಲೆಯಾಳಂ ಅಧ್ಯಾಪಕನ ನೇಮಕಾತಿ ಖಂಡಿಸಿ ಉಗ್ರ ಹೋರಾಟ ನಡೆಸಲು ಗಡಿಯಲ್ಲಿರುವ ಭಾಷಾಭಿಮಾನಿಗಳು ತೀರ್ಮಾನಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಉಪ್ಪಳದ ಮಂಗಲ್ಪಾಡಿ ಸರ್ಕಾರಿ ಹೈಸ್ಕೂಲ್(ಕುಕ್ಕಾರು)ನಲ್ಲಿರುವ ಶಾಲೆಯಲ್ಲಿ ಕನ್ನಡ ತರಗತಿಯ ಗಣಿತ ವಿಭಾಗಕ್ಕೆ ಮಲೆಯಾಳಂ ಅಧ್ಯಾಪಕನ ನೇಮಕಾತಿಯ ಮಾಡಲು ಮುಂದಾಗಿತ್ತು. ಬಳಿಕ ಈ ಬಗ್ಗೆ ಮಲೆಯಾಳ ಅಧ್ಯಾಪಕನ ನೇಮಕಾತಿ ಬೇಡ ಎಂದು ಕನ್ನಡ ಭಾಷಾಮಾನಿಗಳು ಹೋರಾಟ ಮಾಡಿದ್ದರು. ಇದನ್ನೂ ಓದಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ – ಕನ್ನಡಿಗರ ಪಾಲಿನ ಹೆಮ್ಮೆಯ ಸಿನಿಮಾ
Advertisement
ಈ ಬಗ್ಗೆ ನಡೆದ ಹೋರಾಟ ಅಷ್ಟೇನು ತೀವ್ರವಾಗಿ ಪರಿಣಮಿಸಿರಲಿಲ್ಲ. ಆದರೆ ಇತ್ತೀಚೆಗೆ `ಸ.ಹಿ.ಪ್ರಾ. ಶಾಲೆ ಕಾಸಗೋಡು’ ಸಿನಿಮಾ ಬಿಡುಗಡೆಗೊಂಡ ನಂತರ ಆ ಸಿನಿಮಾದಲ್ಲಿ ಕನ್ನಡ ಶಾಲೆಯನ್ನು ಉಳಿಸಲು ನಡೆಸಿದ ಹೋರಾಟದ ಪ್ರಭಾವದಿಂದ ಮಲೆಯಾಳಂ ಪ್ರಧ್ಯಾಪಕನ ನೇಮಕಾತಿಯ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲು ಪೋಷಕರು ಶಿಕ್ಷಕರ ಸಂಘ(ಪಿಟಿಎ) ಹಾಗೂ ಕನ್ನಡ ಭಾಷಾಭಿಮಾನಿಗಳ ಸಭೆಯಲ್ಲಿ ತೀರ್ಮಾನ ನಡೆಸಲಾಗಿದೆ.
Advertisement
ಈ ಸಂಬಂಧ ಮಂಗಲ್ಪಾಡಿ ಶಾಲಾ ಪರಿಸರದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಿ ಸಮಸ್ಯೆ ಇತ್ಯರ್ಥವಾಗುವ ತನಕ ಹೋರಾಟ ತೀವ್ರವಾಗಿ ನಡೆಸಲು ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ. ಒಂದು ವೇಳೆ ಓಣಂ ರಜೆ ಮುಗಿದ ನಂತರ ಮಲೆಯಾಳಂ ಅಧ್ಯಾಪಕ ಶಾಲೆಗೆ ಬಂದರೆ ವಿದ್ಯಾರ್ಥಿಗಳ ಪೋಷಕರ ಮೂಲಕ ದಿಗ್ಬಂಧನ ನಡಸಲು ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ಅಧ್ಯಾಪಕ ಶಾಲಿ ಮಾಸ್ಟರ್ ಸಮಸ್ಯೆಗಳ ಬಗ್ಗೆ ಕುರಿತು ವಿವರಿಸಿದ್ದರು.
Advertisement
ಈ ಸಭೆಯಲ್ಲಿ ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಕಾಸರಗೋಡು, ಶಾಲಾ ಮಾತೃ ಸಮಿತಿಯ ಯಶೋಧ ಶೆಟ್ಟಿ, ಸಾಮಾಜಿಕ ಮುಂದಾಳು ದಿನೆಶ್ ಚೆರುಗೋಳಿ, ಚಂದ್ರ ಕುಬಣುರು ಅವರು ತಮ್ಮ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದರು. ಸಭೆಯಲ್ಲಿ ಪಿಟಿಎ ಅಧ್ಯಕ್ಷ ಬಾಲಕೃಷ್ಣ ಅಂಬಾರು ಅಧ್ಯಕ್ಷತೆ ವಹಿಸಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv