ಮೈಸೂರು: ನಗರದ ಎಚ್.ಡಿ ಕೋಟೆ ತಾಲೂಕು ಕಚೇರಿಯ ಮುಂಭಾಗದಲ್ಲಿ ವೈನ್ ಶಾಪ್ ತೆರೆಯುವ ಸಂಬಂಧ ಪರ ಹಾಗೂ ವಿರೋಧದ ಪ್ರತಿಭಟನೆ ಜೋರಾಗಿ ನಡೆದಿದೆ.
ಎಚ್.ಡಿ ಕೋಟೆ ತಾಲೂಕಿನ ಹೀರಳ್ಳಿ ಗ್ರಾಮದ ಹೊರವಲಯದಲ್ಲಿ ವೈನ್ ಶಾಪ್ ತೆರೆಯಲು ಸರ್ಕಾರ ಅನುಮತಿ ನೀಡಿತ್ತು. ಆದರೆ ವೈನ್ ಶಾಪ್ ಬೇಡ ಎಂದು ಮಹಿಳೆಯರು ಪ್ರತಿಭಟಿಸಿದರೆ, ವೈನ್ ಶಾಪ್ ಬೇಕು ಎಂದು ಡಿಎಸ್‍ಎಸ್ ಸಂಘಟನೆ ಕಾರ್ಯಕರ್ತರು ತಾಲೂಕು ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
Advertisement
ವೈನ್ ಶಾಪ್ ವಿರೋಧಿಸಿದ ಹೀರಳ್ಳಿ ಗ್ರಾಮದ ಮಹಿಳೆಯರು, ನಮ್ಮ ಹಳ್ಳಿಯಲ್ಲಿ ಬಾರ್ ಬೇಡವೆಂದು ತಾಲೂಕು ಕಚೇರಿಮುಂದೆ ಪ್ರತಿಭಟನೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈನ್ ಶಾಪ್ ಆರಂಭವಾದ್ರೆ ನಮ್ಮ ನೆಮ್ಮದಿ ಕೆಡುತ್ತೆ ಹೀಗಾಗಿ ಶಾಪ್ ಆರಂಭಿಸಬಾರದು ಎಂದು ಮಹಿಳೆಯರು ಕೇಳಿಕೊಂಡಿದ್ದಾರೆ. ಒಂದು ವೇಳೆ ನೀವೆನಾದರೂ ವೈನ್ ಶಾಪ್ ಆರಂಭಿಸಿದರೆ ಬೆಂಕಿ ಹಚ್ಚುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
Advertisement
ಅಲ್ಲದೇ ಇದೇ ಸ್ಥಳದಲ್ಲಿ ಸ್ಥಳೀಯ ಡಿಎಸ್‍ಎಸ್ ಸಂಘಟನೆ ಕಾರ್ಯಕರ್ತರು ಬಾರ್ ಪರವಾಗಿ ಪ್ರತಿಭಟಿಸಿದ್ದು ವಿಶೇಷವಾಗಿತ್ತು. ವೈನ್ ಶಾಪ್ ಅನ್ನು ವೈಯಕ್ತಿಕ ಲಾಭದ ಕಾರಣದಿಂದ ಕೆಲವರು ವಿರೋಧಿಸುತ್ತಿದ್ದಾರೆ. ಹೀಗಾಗಿ ಕಾನೂನು ಪ್ರಕಾರ ವೈನ್ ಶಾಪ್ ಆರಂಭವಾಗಲೇ ಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.