ಬೆಂಗಳೂರು: ಸಿದ್ದರಾಮೋತ್ಸವದ ನಂತರ ಸಿದ್ದರಾಮಯ್ಯ & ಟೀಂನಿಂದ ಮತ್ತೊಂದು ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗಿದೆ.
ಆಗಸ್ಟ್ 26ಕ್ಕೆ ಮಡಿಕೇರಿಯಲ್ಲಿ ಸಿದ್ದರಾಮಯ್ಯ ಮೈಸೂರು ಭಾಗದ ಶಕ್ತಿ ಪ್ರದರ್ಶನ ನಡೆಯುವುದು ಫಿಕ್ಸ್ ಆಗಿದೆ. ಸಿದ್ದರಾಮಯ್ಯ ತಂಟೆಗೆ ಬಂದರೆ ಹುಷಾರ್ ಎಂಬ ಸಂದೇಶ ರವಾನಿಸಲು ಸಿದ್ದರಾಮಯ್ಯ ಬೆಂಬಲಿಗರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಕಾಲದಲ್ಲೇ ತುಮಕೂರಲ್ಲಿ ಸಾವರ್ಕರ್ ಪಾರ್ಕ್- ಹಳೆ ಫೋಟೋ ವೈರಲ್, ಕೈ ಪಡೆಗೆ ಮುಜುಗರ
Advertisement
Advertisement
ಸಾವಿರ ಸಾವಿರ ಸಂಖ್ಯೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಮಡಿಕೇರಿ ಚಲೋಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ತೂರಿದಕ್ಕೆ ಪ್ರತಿಯಾಗಿ ಮಡಿಕೇರಿ ಎಸ್ ಪಿ ಕಚೇರಿ ಮುಂದೆ ಪ್ರತಿಭಟನೆ ಮಾಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಶಾಸಕ ಬೋಪಯ್ಯ ಕೂಡ ಸೆಡ್ಡು ಹೊಡೆದಿದ್ದಾರೆ. ಅದ್ಯಾರೋ ಬರ್ತಾರೋ ಬರಲಿ ಎಂದಿದ್ದಾರೆ.
Advertisement
Advertisement
ಇದರಿಂದಾಗಿ ಆಗಸ್ಟ್ 26 ರಂದು ಮಡಿಕೇರಿಯಲ್ಲಿ ಹೈಡ್ರಾಮ ನಡೆಯೋದು ಬಹುತೇಕ ಖಚಿತವಾಗಿದೆ. ಶಾಸಕ ಅಪ್ಪಚ್ಚು ರಂಜನ್ ಕೂಡ ತಿರುಗೇಟು ಕೊಟ್ಟಿದ್ದಾರೆ. ಬೇಕಾದ್ರೆ ಸಿದ್ದರಾಮಯ್ಯ ಕೊಡಗಿಗೆ ಬಂದು ಚುನಾವಣೆಗೆ ನಿಲ್ಲಲಿ. ಡೆಪಾಸಿಟ್ ಇಲ್ಲದಂತೆ ಅವರನ್ನು ಸೋಲಿಸಿ ಕಳುಹಿಸುತ್ತೆವೆ ಎಂದು ಸವಾಲೆಸೆದಿದ್ದಾರೆ. ಇದನ್ನೂ ಓದಿ: ರಂಭಾಪುರಿ ಶ್ರೀ ಬಳಿ ನೋವು ತೋಡಿಕೊಂಡಿಲ್ಲ, ಆಗಿದ್ದು ಹೇಳಿದ್ದೇನೆ ಅಷ್ಟೇ: ಸಿದ್ದರಾಮಯ್ಯ ಸ್ಪಷ್ಟನೆ