ಕೋಲಾರ: ಜಿಲ್ಲೆಯಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವಿಗೆ ನಡೆಸಿದ್ದ ಪ್ರತಿಭಟನಾ ನಿರತ ರೈತ ಸಂಘದ ಮುಖಂಡರ ಮೇಲೆ ಕಾಂಗ್ರೆಸ್ (Congress) ಮುಖಂಡರು ಹಲ್ಲೆ ನಡೆಸಿದ್ದಾರೆ.
ಕೋಲಾರ (Kolar) ಜಿಲ್ಲೆಯ ಶ್ರೀನಿವಾಸಪುರದ (Srinivasapura) ತಾಲ್ಲೂಕು ಕಚೇರಿ (Taluka Office) ಎದುರಿಗೆ ಇಂದು (ಡಿ.09) ರೈತ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೆಂಬಲಿಗರು ಹಾಗೂ ರೈತ ಸಂಘದ ಮುಖಂಡರ ಮೇಲೆ ಗಲಾಟೆ ನಡೆದಿದೆ.ಇದನ್ನೂ ಓದಿ: ಭಾರತ ವಿರೋಧಿ ಸೊರೊಸ್ ಸಂಸ್ಥೆಯ ಜೊತೆ ಸೋನಿಯಾಗೆ ನಂಟು – ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದ ಕಿರಣ್ ರಿಜಿಜು
ಕೆಲಕಾಲ ತಳ್ಳಾಟ ನೂಕಾಟ ನಡೆಸಿದ್ದು, ರೈತ ಮುಖಂಡ ನಾರಾಯಣಗೌಡ, ಮಂಜುನಾಥ್ ಸೇರಿದಂತೆ ಹಲವರ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿಯೇ ಕಾಂಗ್ರೆಸ್ ಮುಖಂಡರು ಹಲ್ಲೆ ಮಾಡಿದ್ದಾರೆ. ಶ್ರೀನಿವಾಸಪುರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪ್ರತಿಭಟನೆ ಯಾಕೆ?
ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ತಾಲೂಕಿನ ಜಿನಗಲಕುಂಟೆ ಗ್ರಾಮದ ಬಳಿಯಿರುವ ಸರ್ವೇ ನಂ.1 ಮತ್ತು 2ರಲ್ಲಿ 122 ಎಕರೆಯನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ (Former Speaker Ramesh Kumar) ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಏಳು ಜನ ಒತ್ತುವರಿದಾರರಲ್ಲಿ ರಮೇಶ್ ಕುಮಾರ್‌ಗೆ 61 ಎಕರೆ ಅರಣ್ಯ ಭೂಮಿ ಸೇರಿತ್ತು. ಈ ಹಿನ್ನೆಲೆ ನ.6ರಂದು ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ (Forest Department) ಸರ್ವೇ ನಡೆಸಲು ಸುಪ್ರೀಂ ಕೋರ್ಟ್ (Supreme Court) ಸೂಚನೆ ನೀಡಿತ್ತು. ಜೊತೆಗೆ ಸರ್ವೇ ಮಾಡಿ ವರದಿ ಸಲ್ಲಿಸುವಂತೆ ತಿಳಿಸಿತ್ತು. ಆದರೆ ಕಾರಣಾಂತರಗಳಿಂದ ಸರ್ವೇ ಕಾರ್ಯ ನಡೆದಿರಲಿಲ್ಲ. ಈ ಹಿನ್ನೆಲೆ ರೈತ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಇದನ್ನೂ ಓದಿ: BBK 11: ಮತ್ತೆ ಬಿಗ್ ಬಾಸ್‌ಗೆ ತನಿಷಾ, ಪ್ರತಾಪ್, ಸಂತು ಪಂತು ಎಂಟ್ರಿ