ಬೆಂಗಳೂರು: ಬಾಂಗ್ಲಾದೇಶದಲ್ಲಿ ಹಿಂದೂಗಳ (Bangla Hindus) ಮೇಲೆ ಹಿಂಸಾಚಾರ ವಿಚಾರದಲ್ಲಿ ಹಿಂದೂಗಳ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ ಎಂದು ಶ್ರೀರಾಮಸೇನೆ ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಪ್ರಮೋದ್ ಮುತಾಲಿಕ್ (Pramod Muthalik) ನೇತೃತ್ವದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರ ನಿಯೋಗ ಬಿಜೆಪಿ ಕಚೇರಿ ಮುಂಭಾಗ ಜಮಾಯಿಸಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಭಿತ್ತಿ ಚಿತ್ರ ಹಿಡಿದು ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ಯಪಡಿಸಿದ್ದು, ಬಿಜೆಪಿ ನಾಯಕರೇ, ಬಾಂಗ್ಲಾ ಹಿಂದೂಗಳ ಪರ ಬಾಯಿ ಬಿಡಿ. ಕ್ರೂರ ಬಾಂಗ್ಲಾ ಮುಸ್ಲಿಂ ಜಿಹಾದಿಗಳಿಂದ ಹಿಂದೂಗಳನ್ನ ರಕ್ಷಿಸಿ. ಬಾಂಗ್ಲಾ ಮುಸ್ಲಿಂ ಹಾಗೂ ರೋಹಿಂಗ್ಯಾಗಳನ್ನ ಭಾರತದಿಂದ ಓಡಿಸಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಸುಳ್ಳು ವರದಿ ಪ್ರಕಟಿಸಿದ್ರೆ ಮಾಧ್ಯಮಗಳನ್ನು ಮುಚ್ಚುತ್ತೇವೆ: ಬಾಂಗ್ಲಾ ಸರ್ಕಾರ ಬೆದರಿಕೆ
ಇದೇ ವೇಳೆ ಮಾತನಾಡಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಹಿಂದೂ ಹೆಣ್ಮಕ್ಕಳನ್ನು ಬಾಂಗ್ಲಾ ಮುಸ್ಲಿಮರು ಕ್ರೂರವಾಗಿ ನಡೆದುಕೊಳ್ಳುತ್ತಿರುವುದು ಕೇಂದ್ರ ಸರ್ಕಾರಕ್ಕೆ ಕಾಣಿಸ್ತಿಲ್ಲ. ಹಿಂದೂಗಳ ಮೇಲೆ ದಾಳಿಯಾಗುತ್ತಿದೆ. ದೇವಸ್ಥಾನಗಳನ್ನ ಒಡೆಯುತ್ತಿದ್ದಾರೆ. ರವೀಂದ್ರನಾಥ್ ಟ್ಯಾಗೂರ್ ಮೂರ್ತಿ ಒಡೆದು ಹಾಕುತ್ತಿದ್ದಾರೆ. ಇದನ್ನ ನೋಡಿ ಬಿಜೆಪಿ ಬಾಯಿ ಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ಯಪಡಿಸಿದರು.
ಇದೊಂದೇ ಅಲ್ಲ, ಇಂತಹ ಅನೇಕ ಘಟನೆ ನಡೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೆಣ್ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ. ಅಲ್ಲಿ ಪೊಲೀಸರು ಇಲ್ಲ, ಮಿಲಿಟರಿ ಅವರಿಗೆ ಸಪೋರ್ಟ್ ಮಾಡುತ್ತಿದೆ. ಅವರ ಕ್ರೌರ್ಯ ನೋಡಿ ನಮ್ಮ ರಕ್ತ ಕುದಿಯುತ್ತಿದೆ. ಪಕ್ಕದ ಪುಟಗೋಸಿ ದೇಶಕ್ಕೆ ಎಚ್ಚರಿಕೆ ಕೊಡೋಕೆ ಆಗ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಅಫ್ಘಾನ್, ಪಾಕ್, ಶ್ರೀಲಂಕಾ ಆಯ್ತು.. ಈಗ ಬಾಂಗ್ಲಾ; ಭಾರತದ ಸುತ್ತ ಏನಾಗ್ತಿದೆ?
ಮೋದಿಯವರೇ ಕೂಡಲೇ ಕ್ರಮಕೈಗೊಳ್ಳಬೇಕು. ಬಿಜೆಪಿ ಕಚೇರಿಯ ಪದಾಧಿಕಾರಿಗಳ ಮೂಲಕ ನಾನು ಮನವಿ ಸಲ್ಲಿಸುತ್ತೇನೆ. ಬಿಜೆಪಿ ಸಂಸದರು, ಶಾಸಕರು ಕತ್ತೆ ಕಾಯುತ್ತಿದ್ದಾರಾ? ನಿಮ್ಮನ್ನ ಗೆಲ್ಲಿಸಿದ್ದು ಲೂಟಿ ಮಾಡೋದಕ್ಕಾ? ಬಾಯಿ ಮುಚ್ಚಿಕೊಂಡಿರೋದಕ್ಕಾ? ಬೆಂಗಳೂರಿನ ಹಲವು ಭಾಗದಲ್ಲಿ ಬಾಂಗ್ಲಾ ನುಸುಳುಕೋರರನ್ನ ಒದ್ದು ಓಡಿಸಿ ಎಂದು ಕೆಂಡಕಾರಿದರು.