ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ 2022ರ ವೇಳೆಗೆ ಮಾನವ ಸಹಿತ ಬಾಹ್ಯಾಕಾಶ ನೌಕೆ ಉಡಾವಣೆ ಮಾಡುವುದಾಗಿ ಹೇಳಿದ್ದು, ನಮ್ಮ ಕರ್ತವ್ಯವನ್ನು ಈ ಅವಧಿಯ ಒಳಗಡೆ ಈಡೇರಿಸುತ್ತೇವೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.
ಬೆಂಗಳೂರಿನ ಅಂತರಿಕ್ಷ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 2022ರೊಳಗೆ ಅಂತರಿಕ್ಷದಲ್ಲಿ ಮಾನವ ಸಹಿತ ಬಾಹ್ಯಾಕಾಶ ನೌಕೆ ಉಡಾವಣೆ ಮಾಡುವುದು ನಮಗೆ ಹೆಮ್ಮೆ ಮತ್ತು ಸವಾಲು. ಬಾಹ್ಯಾಕಾಶ ಯೋಜನೆ ಖಂಡಿತ ಸಾಧ್ಯವಿದ್ದು, ನಮ್ಮಿಂದ ಯಶಸ್ವಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
Advertisement
ಯೋಜನೆ ಯಶಸ್ವಿಗೊಳಿಸಲು ಈಗಾಗಲೇ ಬೇಕಾದ ತಂತ್ರಜ್ಞಾನಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಅಂತರಿಕ್ಷ ಯಾನಿಗಳಿಗೆ ಬೇಕಾದ ಜೀವರಕ್ಷಕ ಸ್ಯೂಟ್ ಅನ್ನು ನಾವೇ ಅಭಿವೃದ್ಧಿ ಪಡಿಸಿದ್ದೇವೆ. ಜೊತೆಗೆ 10 ಸಾವಿರ ಕೋಟಿ ರೂ.ಗಿಂತ ಕಡಿಮೆ ವೆಚ್ಚದಲ್ಲಿ ಈ ಪ್ರಾಜೆಕ್ಟ್ ತಯಾರಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಇದನ್ನು ಓದಿ: ಮಾನವ ಸಹಿತ ಬಾಹ್ಯಾಕಾಶ ಪ್ರಯಾಣ ಮತ್ತಷ್ಟು ಹತ್ತಿರ: ಇಸ್ರೋ ಪರೀಕ್ಷಾರ್ಥ ಪ್ರಯೋಗ ಯಶಸ್ವಿ
Advertisement
Advertisement
ಕೇವಲ ದೇಶದ ಹೆಮ್ಮೆಯ ವಿಚಾರಕ್ಕಾಗಿ ಮಾತ್ರ ಮಾನವ ಸಹಿತ ಬಾಹ್ಯಾಕಾಶ ನೌಕೆ ಉಡಾವಣೆ ಆಗುತ್ತಿಲ್ಲ. ಇದು ಉಡಾವಣೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಮತ್ತಷ್ಟು ಉನ್ನತ ದರ್ಜೆಗೆ ಕೊಂಡೊಯ್ಯಲಿದೆ. ದೇಶದ ತಂತ್ರಜ್ಞಾನ ವ್ಯವಸ್ಥೆಗೆ ಬೇಕಾದ ಎಲ್ಲಾ ಉಪಯೋಗಗಳು ಇದರಿಂದ ಲಭ್ಯವಿದೆ ಎಂದು ವಿವರಿಸಿದರು.
Advertisement
2008ರ ಅಕ್ಟೋಬರ್ ನಲ್ಲಿ ಇಸ್ರೋ ಚಂದ್ರ ಗ್ರಹಕ್ಕೆ ನೌಕೆ ಕಳುಹಿಸಿದರೆ, 2014ರ ಸೆಪ್ಟೆಂಬರ್ ನಲ್ಲಿ ಮಂಗಳ ಗ್ರಹಕ್ಕೆ ನೌಕೆ ಕಳುಹಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv